Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಡಗೈಯೇ ಅಪಘಾತಕ್ಕೆ ಕಾರಣ’ ಕುತೂಹಲ ಮೂಡಿಸುವ ಟೀಸರ್, ಫೆಬ್ರವರಿಯಲ್ಲಿ ಬಿಡುಗಡೆ

Edagai Apagatakke Karana: ದಿಗಂತ್ ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದ ಟೀಸರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದು, ಟೀಸರ್ ಗಮನ ಸೆಳೆಯುತ್ತಿದೆ.

‘ಎಡಗೈಯೇ ಅಪಘಾತಕ್ಕೆ ಕಾರಣ’ ಕುತೂಹಲ ಮೂಡಿಸುವ ಟೀಸರ್, ಫೆಬ್ರವರಿಯಲ್ಲಿ ಬಿಡುಗಡೆ
ಎಡಗೈ ಅಪಘಾತಕ್ಕೆ ಕಾರಣ
Follow us
ಮಂಜುನಾಥ ಸಿ.
|

Updated on: Dec 30, 2023 | 9:25 PM

ದಿಗಂತ್ (Diganth) ನಟನೆಯ ’ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ತನ್ನ ಭಿನ್ನ ಹೆಸರು, ಆಯ್ದುಕೊಂಡಿರುವ ಭಿನ್ನ ಕತೆಯಿಂದಾಗಿ ಗಮನ ಸೆಳೆದಿದ್ದರು. ಈ ಸಿನಿಮಾದ ಟೀಸರ್ ಇದೀಗ ಸುದೀಪ್ ಬಿಡುಗಡೆ ಮಾಡಿದ್ದು, ಟೀಸರ್ ಬಹಳ ಭಿನ್ನವಾಗಿ ಗಮನ ಸೆಳೆಯುತ್ತಿದೆ. ದಿಗಂತ್ ಹುಟ್ಟುಹಬ್ಬದ ವಿಶೇಷವಾಗಿ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದರು ಟೀಸರ್ ನೋಡಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಸಖತ್ ಆಗಿದೆ ಎಂದು ಶಿವಣ್ಣ ಟ್ವೀಟ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಎಡಗೈ ಬಳಸುವ ಜನರ ಕಥೆಯನ್ನೇ ಇಟ್ಟುಕೊಂಡು ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಮಾಡಲಾಗಿದೆ. ಇದರಲ್ಲಿ ಎಡಗೈ ಬಳಸುವವರ ಜೀವನ ಶೈಲಿ ಕುರಿತು ಹೇಳುವ ಪ್ರಯತ್ನ ಮಾಡಲಾಗಿದೆ. ನಟ ದಿಗಂತ್ ಮಂಚಾಲೆ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಹೊಸ ನಟಿ ಧನು ಹರ್ಷ ನಾಯಕಿ. ಇನ್ನುಳಿದ ಪಾತ್ರಗಳಲ್ಲಿ ನಿಧಿ ಸುಬ್ಬಯ್ಯ, ಕೃಷ್ಣ ಹೆಬ್ಬಾಳೆ, ಭಜರಂಗಿ ಲೋಕಿ, ರಾಧಿಕಾ ನಾರಾಯಣ್ ಮುಂತಾದವರು ಅಭಿನಯಿಸಿದ್ದಾರೆ. ಒಂದು ವಿಶೇಷ ಪಾತ್ರದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಳ್ಳಲಿದ್ದಾರೆ. ಹಲವು ವರ್ಷಗಳ ಬಳಿಕ ‘ಪಂಚರಂಗಿ’ ಜೋಡಿಯಾದ ದಿಗಂತ್-ನಿಧಿ ಸುಬ್ಬಯ್ಯ ಒಟ್ಟಿಗೆ ನಟಿಸಿದ್ದಾರೆ.

ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡಕ್ಕೆ ನಿರೂಪ್ ಭಂಡಾರಿ ಎಂಟ್ರಿ; ಸ್ವಾಗತ ಕೋರಿದ ದಿಗಂತ್​

ಸಮರ್ಥ್ ಬಿ. ಕಡಕೊಳ್ ಅವರು ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದು. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಈ ಸಿನಿಮಾ ಹೊಂದಿದೆ. ‘ಹೈಫನ್ ಪಿಕ್ಚರ್ಸ್’ ಮತ್ತು ‘ಗುರುದತ್ ಗಾಣಿಗ ಫಿಲ್ಮ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸಿನಿಮಾದಲ್ಲಿ ನಾಯಕನ ಎಡಗೈ ಆತನ ನಿಯಂತ್ರಣ ಕಳೆದುಕೊಂಡು ಕೊಲೆ ಮಾಡುವ ಕತೆ ಒಳಗೊಂಡಿದೆಯೆಂಬ ಅನುಮಾನ ಟೀಸರ್​ನಿಂದ ಉಂಟಾಗುತ್ತಿದೆ.

‘ದಿನ ನಿತ್ಯ ಎಲ್ಲ ಕೆಲಸಕ್ಕೆ ಎಡಗೈ ಬಳಕೆ ಮಾಡುವ ಜನರ ಸಮಸ್ಯೆಗಳ ಕುರಿತು ಈ ಸಿನಿಮಾ ಮಾಡಲಾಗಿದೆ. ಪ್ರತಿ ದಿನ ಅವರು ಎದುರಿಸುವ ಸಮಸ್ಯೆಗಳನ್ನು ಆಧರಿಸಿ ಈ ಚಿತ್ರದ ಕಥೆ ಸಿದ್ಧವಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಫೆಬ್ರವರಿಯಲ್ಲಿ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಸಿನಿಮಾಗೆ ಅಭಿಮನ್ಯು ಸದಾನಂದ್ ಅವರು ಛಾಯಾಗ್ರಹಣ ಮಾಡಿದ್ದು, ರಾಹುಲ್ ವಿ. ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಬರೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ