
ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಮತ್ತೊಂದು ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ‘ಸರ್ದಾರ್’ ಹಾಗೂ ‘ಸರ್ದಾರ್ 2’ ನಂತಹ ಬ್ಲಾಕ್‌ಬಸ್ಟರ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರಸಿದ್ಧ ತಮಿಳು ನಿರ್ದೇಶಕ ಪಿ.ಎಸ್. ಮಿತ್ರನ್ ಅವರು ಯಶ್ ಅವರಿಗಾಗಿ ಒಂದು ಅದ್ಭುತ ಕಥೆಯನ್ನು ಸಿದ್ಧಪಡಿಸಿದ್ದು, ಈ ಕಥೆ ಯಶ್ ಅವರಿಗೆ (Yash) ತುಂಬಾ ಇಷ್ಟವಾಗಿದೆ ಎಂದು ಸ್ವತಃ ನಿರ್ದೇಶಕರೇ ಬಹಿರಂಗಪಡಿಸಿದ್ದಾರೆ.
ಪ್ರಸ್ತುತ ಯಶ್ ಅವರು ಗೀತು ಮೋಹನ್‌ದಾಸ್ ನಿರ್ದೇಶನದ ಬೃಹತ್ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲಿದೆ. ಸಿನಿಮಾ ಬಿಡುಗಡೆಯ ನಂತರ ಈ ಹೊಸ ಯೋಜನೆಯನ್ನು ಆರಂಭಿಸಲು ಎಸ್. ಮಿತ್ರನ್ ಹಾಗೂ ಯಶ್ ಪ್ಲ್ಯಾನ್ ಮಾಡಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ‘ಟಾಕ್ಸಿಕ್’ ನಂತರ ಯಶ್ ಅವರ ಮುಂದಿನ ಸಿನಿಮಾ ಮಿತ್ರನ್ ಜೊತೆಗೇ ಇರಲಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.
ಪಿ.ಎಸ್. ಮಿತ್ರನ್ ಅವರು ತಮ್ಮ ‘ಇರುಂಬು ತಿರೈ’, ‘ಹೀರೋ’ ಹಾಗೂ ‘ಸರ್ದಾರ್’ ಸಿನಿಮಾಗಳ ಮೂಲಕ ಆಕ್ಷನ್, ಸ್ಪೈ ಹಾಗೂ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಈಗ ಯಶ್ ಅವರ ಮಾಸ್ ಇಮೇಜ್‌ಗೆ ತಕ್ಕಂತೆ ಕಥೆ ಹೆಣೆದಿರುವುದರಿಂದ, ಈ ಕಾಂಬಿನೇಷನ್‌ನಲ್ಲಿ ಮತ್ತೊಂದು ಮೆಗಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮೂಡಿಬರುವುದು ಖಚಿತ ಎನ್ನಲಾಗುತ್ತಿದೆ. ಈ ಸುದ್ದಿ ಯಶ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಬುಕಿಂಗ್ ಓಪನ್ ಆಗುತ್ತಿದ್ದಂತೆ ಟಾಕ್ಸಿಕ್ ಟಿಕೆಟ್‌ಗಳು ಸೋಲ್ಡ್ ಔಟ್: ಯಶ್ ಸಿನಿಮಾ ಕ್ರೇಜ್ ನೋಡಿ
‘ಟಾಕ್ಸಿಕ್’ ರಿಲೀಸ್ ಬಳಿಕ ಯಶ್ ಅವರು ‘ರಾಮಾಯಣ’ ಸಿನಿಮಾ ಪ್ರಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಬಳಿಕ ಅವರು ‘ರಾಮಾಯಣ 2’ ಸಿನಿಮಾ ಶೂಟ್ನಲ್ಲೂ ಬ್ಯುಸಿ ಆಗಬೇಕಿದೆ. ಇವುಗಳ ಜೊತೆ ಜೊತೆಯೇ ಯಶ್ ಮತ್ತೊಂದು ಸಿನಿಮಾ ಆರಂಭಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.