ಒಂದೇ ಸಿನಿಮಾದಲ್ಲಿ ದಿವ್ಯಾ ಉರುಡುಗ-ಅರವಿಂದ್ ಕೆಪಿ; ನಗುವಿನ ಮೂಲಕವೇ ರಿವೀಲ್ ಮಾಡಿದ್ರು ನಟಿ

ದಿವ್ಯಾ ಅವರು ‘ಅರ್ದಂಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಅರವಿಂದ್ ಕೆಪಿ ಹೀರೋ ಎನ್ನಲಾಗುತ್ತಿದೆ.

ಒಂದೇ ಸಿನಿಮಾದಲ್ಲಿ ದಿವ್ಯಾ ಉರುಡುಗ-ಅರವಿಂದ್ ಕೆಪಿ; ನಗುವಿನ ಮೂಲಕವೇ ರಿವೀಲ್ ಮಾಡಿದ್ರು ನಟಿ
ಅರವಿಂದ್-ದಿವ್ಯಾ
Edited By:

Updated on: Jul 05, 2022 | 6:35 AM

‘ಕನ್ನಡ ಬಿಗ್ ಬಾಸ್’ಗೆ (Kannada Bigg Boss) ಕಾಲಿಟ್ಟ ನಂತರದಲ್ಲಿ ನಟಿ ದಿವ್ಯಾ ಉರುಡುಗ (Divya Uruduga) ಅವರ ಫೇಮ್​ ಹೆಚ್ಚಿತು. ಸಹ ಸ್ಪರ್ಧಿ ಅರವಿಂದ್ ಕೆಪಿ (Aravind KP) ಜತೆಗಿನ ಒಡನಾಟದ ಕಾರಣದಿಂದಲೂ ಅವರು ಸಾಕಷ್ಟು ಸುದ್ದಿಯಾದರು. ಪ್ರೀತಿಸುತ್ತಿರುವ ವಿಚಾರವನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರವೂ ಇವರ ಒಡನಾಟ ಮುಂದುವರಿದಿದೆ. ಇಬ್ಬರನ್ನೂ ತೆರೆಮೇಲೆ ಒಟ್ಟಾಗಿ ನೋಡಬೇಕು ಎಂಬುದು ಫ್ಯಾನ್ಸ್ ಬಯಕೆ. ಆದರೆ, ಇದಕ್ಕೆ ಈವರೆಗೆ ಕಾಲ ಕೂಡಿ ಬಂದಿಲ್ಲ. ಈ ವಿಚಾರವಾಗಿ ದಿವ್ಯಾ ಅವರು ಮಾತನಾಡಿದ್ದಾರೆ. ಅವರು ನೀಡಿದ ಅಪ್​ಡೇಟ್ ಕೇಳಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ.

ದಿವ್ಯಾ ಅವರು ‘ಅರ್ದಂಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಹೀರೋ ಯಾರು ಎಂಬುದು ರಿವೀಲ್ ಆಗಿಲ್ಲ. ಪೋಸ್ಟರ್​ನಲ್ಲಿ ಒಂದು ವ್ಯಕ್ತಿಯನ್ನು ತೋರಿಸಲಾಗಿದ್ದು, ಅದು ಅರವಿಂದ್ ಕೆಪಿ ಎಂದೇ ಹೇಳಲಾಗುತ್ತಿದೆ. ಪೋಸ್ಟರ್​​ನಲ್ಲಿಯೂ ಆ ರೀತಿಯ ಸೂಚನೆ ಸಿಕ್ಕಿದೆ. ಈ ಬಗ್ಗೆ ದಿವ್ಯಾ ಮಾತನಾಡಿದ್ದಾರೆ.

ಇದನ್ನೂ ಓದಿ
 ‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ
Vikrant Rona: ‘ವಿಕ್ರಾಂತ್​ ರೋಣ’ ಚಿತ್ರದ ಬಿಗ್​ ಅನೌನ್ಸ್​ಮೆಂಟ್​; ಕಾತರದಿಂದ ಕಾಯುತ್ತಿರುವ ಕಿಚ್ಚ ಸುದೀಪ್ ಫ್ಯಾನ್ಸ್​
ರಾಷ್ಟ್ರ ಭಾಷೆ ವಿವಾದದ ಬಳಿಕ ಗಲ್ಲಾ ಪೆಟ್ಟಿಗೆಯಲ್ಲೂ ಕಿಚ್ಚ ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಪೈಪೋಟಿ
ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಸಾಥ್​​ ನೀಡಿದ ಪರಭಾಷೆಯ ಸ್ಟಾರ್​ ನಟರು

‘ನಂಗೆ ಆ ಬಗ್ಗೆ ಗೊತ್ತಿಲ್ಲ. ಹೀರೋ ಯಾರು ಎಂಬುದು ನಂಗೂ ತಿಳಿದಿಲ್ಲ. ಸಿನಿಮಾದಲ್ಲಿ ನಟಿಸುತ್ತಿರುವುದು ಹೊಸ ಹೀರೋ. ಸದ್ಯದಲ್ಲೇ ಅವರನ್ನು ರಿವೀಲ್ ಮಾಡಲಾಗುತ್ತದೆ. ಇಷ್ಟನ್ನು ಮಾತ್ರ ಹೇಳೋಕೆ ಸಾಧ್ಯ’ ಎಂದು ಹೇಳುವಾಗ ದಿವ್ಯಾ ತುಂಬಾನೇ ನಾಚಿಕೊಂಡರು. ಅವರ ನಗುವಿನಲ್ಲೇ ಉತ್ತರ ಅಡಗಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ‘ಅರವಿಂದ್ ಅವರು ಏನೇ ಮಾಡಿದರೂ ಸಂಪೂರ್ಣ ಎಫರ್ಟ್ ಹಾಕ್ತಾರೆ. ನನ್ನ ಜೊತೆ ಸಿನಿಮಾ ಮಾಡುವುದಕ್ಕೆ ಅವರಿಗೆ ಖುಷಿ ಇದೆ’ ಎಂದಿದ್ದಾರೆ ದಿವ್ಯಾ.

ದಿವ್ಯಾ ಉರುಡುಗ ಅಭಿನಯದ ‘ಗಿರ್ಕಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ದಿವ್ಯಾ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಸುದೀಪ್ ಕಡೆಯಿಂದ ವಿಶ್ ಸಿಕ್ಕಿದೆ. ಇದು ಚಿತ್ರತಂಡದ ಬಲವನ್ನು ಹೆಚ್ಚಿಸಿದೆ. ಈ ಬಗ್ಗೆಯೂ ದಿವ್ಯಾಗೆ ಖುಷಿ ಸಿಕ್ಕಿದೆ. ಬಿಗ್ ಬಾಸ್​ಗೆ ತೆರಳಿದ ನಂತರದಲ್ಲಿ ದಿವ್ಯಾ ಖ್ಯಾತಿ ಹೆಚ್ಚಿದೆ. ಅವರಿಗೆ ಸಾಕಷ್ಟು ಸಿನಿಮಾ ಆಫರ್​ಗಳು ಬರುತ್ತಿವೆ. ಈಗ ಅರವಿಂದ್ ಕೆಪಿ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ವಿಚಾರ ಅವರ ಫ್ಯಾನ್ಸ್​ಗೆ ಖುಷಿ ನೀಡಿದೆ.

ಇದನ್ನೂ ಓದಿ: ಅರವಿಂದ್​ಗೆ ಸಿಕ್ತು ಯೂತ್​ ಐಕಾನ್​ ಅವಾರ್ಡ್​​; ಸಂತಸ ಪಟ್ಟ ದಿವ್ಯಾ ಉರುಡುಗ

 ‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ

Published On - 6:30 am, Tue, 5 July 22