ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ ದಿವ್ಯಾ ಉರುಡುಗ-ಅರವಿಂದ್​; ಫ್ಯಾನ್ಸ್ ಮಾಡಬೇಕಾಗಿದ್ದಿಷ್ಟು

| Updated By: ರಾಜೇಶ್ ದುಗ್ಗುಮನೆ

Updated on: Jan 09, 2023 | 9:46 AM

ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಮೊದಲ ಭಾರಿಗೆ ಭೇಟಿ ಆಗಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ. ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಈ ಫ್ರೆಂಡ್​ಶಿಪ್ ಈಗ ಪ್ರೀತಿಗೆ ತಿರುಗಿದೆ.

ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ ದಿವ್ಯಾ ಉರುಡುಗ-ಅರವಿಂದ್​; ಫ್ಯಾನ್ಸ್ ಮಾಡಬೇಕಾಗಿದ್ದಿಷ್ಟು
ದಿವ್ಯಾ ಉರುಡುಗ
Follow us on

ನಟಿ, ಬಿಗ್ ಬಾಸ್ (Bigg Boss) ಮಾಜಿ ಸ್ಪರ್ಧಿ ದಿವ್ಯಾ ಉರುಡುಗ ಹಾಗೂ ಬೈಕ್ ರೇಸರ್ ಅರವಿಂದ್ ಕೆಪಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಅರ್ದಂ ಬರ್ಧ ಪ್ರೇಮ ಕಥೆ’ (Ardambarda prema kathe) ಎಂದು ಈ ಚಿತ್ರಕ್ಕೆ ಟೈಟಲ್ ಇಡಲಾಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ‘ಜಿಂಗಲಕಾ ಲಕಾ ಲಕಾ..’ ಹಾಡು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಈ ಹಾಡು ಈಗ ಸಖತ್ ಟ್ರೆಂಡ್ ಆಗುತ್ತಿದೆ. ಈ ಹಾಡಿಗೆ ರೀಲ್ಸ್ ಮಾಡುವ ಚಾಲೆಂಜ್​​ನ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ನೀಡಿದ್ದಾರೆ.

ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಮೊದಲ ಭಾರಿಗೆ ಭೇಟಿ ಆಗಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ. ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಈ ಫ್ರೆಂಡ್​ಶಿಪ್ ಈಗ ಪ್ರೀತಿಗೆ ತಿರುಗಿದೆ. ಇವರು ಈಗ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಈ ಚಿತ್ರದ ‘ಜಿಂಗಲಕಾ ಲಕಾ ಲಕಾ..’ ಹಾಡು ಕೇಳುಗರಿಗೆ ಇಷ್ಟವಾಗಿದೆ.

ಇದನ್ನೂ ಓದಿ
ಬಿಗ್ ಬಾಸ್​ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು
ಅರವಿಂದ್ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ವಾಸುಕಿ ವೈಭವ್​; ಸ್ಪರ್ಧಿಗಳಿಗೆ ಸಿಕ್ಕಾಪಟ್ಟೆ ಸರ್​ಪ್ರೈಸ್​
ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ
Divya Uruduga: ದಿವ್ಯಾ ಉರುಡುಗ ಸಲುವಾಗಿ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಅರವಿಂದ್ ಕೆಪಿ

‘ಜಿಂಗಲಕಾ ಲಕಾ ಲಕಾ..’ ಹಾಡಿಗೆ ಅರವಿಂದ್ ಕೆಪಿ ಹಾಗೂ ದಿವ್ಯಾ ಸ್ಟೆಪ್ ಹಾಕಿದ್ದಾರೆ. ಈ ಹಾಡಿಗೆ ರೀಲ್ಸ್ ಮಾಡಬೇಕು. ಬಳಿಕ @ardhambardhapremakathe ಪೇಜ್​​ಗೆ ಟ್ಯಾಗ್ ಮಾಡಿ, #jingalakaapk ಹ್ಯಾಶ್​​ಟ್ಯಾಗ್ ಹಾಕಿ ರೀಲ್ಸ್​ ಅಪ್​ಲೋಡ್ ಮಾಡಬೇಕು. ಅತ್ಯುತ್ತಮವಾಗಿ ರೀಲ್ಸ್ ಮಾಡಿದರೆ ಅಂತಹವರ ರೀಲ್ಸ್​ ಅನ್ನು ಸಿನಿಮಾದ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಹಾಡಿಗೆ ಈಗ ಫ್ಯಾನ್ಸ್ ರೀಲ್ಸ್ ಮಾಡಿ ಶೇರ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Divya Uruduga: ಅರವಿಂದ್ ಕೆಪಿ ಜನ್ಮದಿನಕ್ಕಾಗಿ ದಿವ್ಯಾ ಉರುಡುಗ ವಿಶೇಷ ಸಾಲುಗಳು; ಇಲ್ಲಿದೆ ಆ ಕವಿತೆ

ದಿವ್ಯಾ ಉರುಡುಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 9’ರಲ್ಲೂ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಅರವಿಂದ್ ಕೆಪಿ ಮನೆ ಒಳಗೆ ಬರಬೇಕು ಎಂದು ಫಿನಾಲೆ ವೀಕ್​​ನಲ್ಲಿ ದಿವ್ಯಾ ಕೋರಿಕೊಂಡಿದ್ದರು. ಈ ಕೋರಿಕೆಯನ್ನು ಬಿಗ್ ಬಾಸ್ ಈಡೇರಿಸಿದ್ದರು. ಹೀಗಾಗಿ, ಅರವಿಂದ್ ದೊಡ್ಮನೆ ಒಳಗೆ ಬಂದಿದ್ದರು. ಈ ವೇಳೆ ‘ಜಿಂಗಲಕಾ..’ ಹಾಡಿಗೆ ಮನೆಯವರ ಜತೆ ಹೆಜ್ಜೆ ಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:37 am, Mon, 9 January 23