Ajaneesh Loknath: ‘ಕಾಂತಾರ’ ದೈವದ ಸೌಂಡ್ ರೆಕಾರ್ಡ್ ಮಾಡಿದ್ದು ಹೇಗೆ? ಅಜನೀಶ್ ಹೇಳಿದ ಅಚ್ಚರಿಯ ಕಹಾನಿ ಇಲ್ಲಿದೆ..
Kantara Movie | Star Suvarna: ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಜನವರಿ 15ರಂದು ಸಂಜೆ 6 ಗಂಟೆಗೆ ‘ಕಾಂತಾರ’ ಸಿನಿಮಾ ಪ್ರಸಾರ ಆಗಲಿದೆ. ಈ ಚಿತ್ರದ ಸಂಗೀತದ ಬಗ್ಗೆ ಅಜನೀಶ್ ಲೋಕನಾಥ್ ಮಾತನಾಡಿದ್ದಾರೆ.
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ (Ajaneesh Loknath) ಅವರಿಗೆ ಬ್ಯಾಕ್ ಟು ಬ್ಯಾಕ್ ಗೆಲುವು ಸಿಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಅವರು ಸಖತ್ ಜನಪ್ರಿಯತೆ ಪಡೆದಿದ್ದಾರೆ. ಅದರಲ್ಲೂ ಈ ವರ್ಷ ಬಿಡುಗಡೆ ಆದ ‘ಕಾಂತಾರ’ ಸಿನಿಮಾ ಮೂಲಕ ಅಜನೀಶ್ ಲೋಕನಾಥ್ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು. ಈಗ ಅವರಿಗೆ ಸಾಕಷ್ಟು ಆಫರ್ಗಳು ಹರಿದುಬರುತ್ತಿವೆ. ಇಷ್ಟೆಲ್ಲ ಯಶಸ್ಸಿಗೆ ಕಾರಣ ಆಗಿದ್ದು ಅವರ ಪರಿಶ್ರಮ. ‘ಕಾಂತಾರ’ (Kantara Movie) ಸಿನಿಮಾದಲ್ಲಿ ಬರುವ ದೈವಾರಾಧನೆ ಅಥವಾ ಭೂತಕೋಲದ ದೃಶ್ಯಗಳಲ್ಲಿ ಇರುವ ಸೌಂಡ್ ರೆಕಾರ್ಡ್ ಆಗಿದ್ದು ಹೇಗೆ ಎಂಬುದನ್ನು ಅವರೀಗ ವಿವರಿಸಿದ್ದಾರೆ. ‘ಕಾಂತಾರ’ ಸಿನಿಮಾ ‘ಸ್ಟಾರ್ ಸುವರ್ಣ’ (Star Suvarna) ವಾಹಿನಿಯಲ್ಲಿ ಜನವರಿ 15ರಂದು ಪ್ರಸಾರ ಆಗಲಿದೆ. ಆ ಪ್ರಯುಕ್ತ ಅಪರೂಪದ ಮಾಹಿತಿಯನ್ನು ಅಜನೀಶ್ ಲೋಕನಾಥ್ ಅವರು ಹಂಚಿಕೊಂಡಿದ್ದಾರೆ.
‘ಕಾಂತಾರ’ ಸಿನಿಮಾದ ಗೆಲುವಿನಲ್ಲಿ ಸಂಗೀತದ ಕೊಡುಗೆ ದೊಡ್ಡದಿದೆ. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ದೃಶ್ಯಗಳಲ್ಲಿನ ಹಿನ್ನೆಲೆ ಸಂಗೀತಕ್ಕಾಗಿ ಅಜನೀಶ್ ಲೋಕನಾಥ್ ಮತ್ತು ಅವರ ತಂಡ ಸಾಕಷ್ಟು ಶ್ರಮ ವಹಿಸಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ಈ ಪ್ರೋಮೋವನ್ನು ‘ಸ್ಟಾರ್ ಸುವರ್ಣ’ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಈ ವಿಷಯವನ್ನು ಅಜನೀಶ್ ಲೋಕನಾಥ್ ಹೇಳಿದ್ದಾರೆ.
ಇದನ್ನೂ ಓದಿ: Ajaneesh B Loknath: ಅಜನೀಶ್ ಲೋಕನಾಥ್ಗೆ ಯಾಕಿಂಥ ಸ್ಥಿತಿ; ಇದು ಹಾಸ್ಟೆಲ್ ಹುಡುಗರ ಕಿತಾಪತಿ
‘ದೈವ ಕೂಗು ಹಾಕುವುದು, ದೈವದ ಒಡವೆಯಲ್ಲಿ ಇರುವ ಮಣಿಗಳ ಸೌಂಡ್, ಗಗ್ಗರದ ಶಬ್ಧ.. ಹೀಗೆ ಯಾವುದೂ ಕೂಡ ಕಂಪ್ಯೂಟರ್ನಲ್ಲಿ ಜನರೇಟ್ ಮಾಡಿದ್ದಲ್ಲ. ಪ್ರತಿ ಸೌಂಡ್ ಕೂಡ ನಾವು ಅಲ್ಲಿ ಹೋಗಿಯೇ ರೆಕಾರ್ಡ್ ಮಾಡಿದ್ದು. ಡಿಟಿಎಸ್ ಕೆಲಸಗಳನ್ನು ಮಾಡುವಾಗ ನಮಗೆ ಇನ್ನೂ ಚೆನ್ನಾಗಿ ಸೌಂಡ್ ಬೇಕು ಅಂತ ನಮ್ಮ ಸೌಂಡ್ ಮಿಕ್ಸರ್ ರಾಜಕೃಷ್ಣ ಅವರು ಇಲ್ಲಿಂದ ಒಂದು ತಂಡವನ್ನು ಮತ್ತೆ ಅಲ್ಲಿಗೆ ಕಳುಹಿಸಿ, ಗಗ್ಗರದ ಶಬ್ಧವನ್ನು ರೆಕಾರ್ಡ್ ಮಾಡಿಸಿದರು’ ಎಂದಿದ್ದಾರೆ ಅಜನೀಶ್ ಲೋಕನಾಥ್.
ಇದನ್ನೂ ಓದಿ: Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್ ಬಗ್ಗೆ ಸ್ಪೆಷಲ್ ಮಾತುಗಳನ್ನು ಹೇಳಿದ ಸ್ಟಾರ್ ನಟಿ
ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ‘ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಈ ಚಿತ್ರದಿಂದ ಭರ್ಜರಿ ಲಾಭ ಆಗಿದೆ. ಚಿತ್ರಮಂದಿರದಲ್ಲಿ 100 ದಿನಗಳನ್ನು ಪೂರೈಸಿರುವ ಈ ಸಿನಿಮಾ ಈಗ ಟಿವಿಯಲ್ಲಿ ಪ್ರದರ್ಶನವಾಗಲು ಸಮಯ ಹತ್ತಿರವಾಗಿದೆ.
‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಜನವರಿ 15ರಂದು ಸಂಜೆ 6 ಗಂಟೆಗೆ ‘ಕಾಂತಾರ’ ಸಿನಿಮಾದ ಟಿಲಿವಿಷನ್ ಪ್ರೀಮಿಯರ್ ಆಗಲಿದೆ. ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಗೆಲುವು ಕಂಡಿರುವ ಈ ಚಿತ್ರವೀಗ ಕಿರುತೆರೆಯಲ್ಲೂ ಧೂಳೆಬ್ಬಿಸಲು ಬರುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:04 pm, Sun, 8 January 23