ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ ದಿವ್ಯಾ ಉರುಡುಗ-ಅರವಿಂದ್; ಫ್ಯಾನ್ಸ್ ಮಾಡಬೇಕಾಗಿದ್ದಿಷ್ಟು
ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಮೊದಲ ಭಾರಿಗೆ ಭೇಟಿ ಆಗಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ. ಇವರ ಮಧ್ಯೆ ಫ್ರೆಂಡ್ಶಿಪ್ ಬೆಳೆಯಿತು. ಈ ಫ್ರೆಂಡ್ಶಿಪ್ ಈಗ ಪ್ರೀತಿಗೆ ತಿರುಗಿದೆ.
ನಟಿ, ಬಿಗ್ ಬಾಸ್ (Bigg Boss) ಮಾಜಿ ಸ್ಪರ್ಧಿ ದಿವ್ಯಾ ಉರುಡುಗ ಹಾಗೂ ಬೈಕ್ ರೇಸರ್ ಅರವಿಂದ್ ಕೆಪಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಅರ್ದಂ ಬರ್ಧ ಪ್ರೇಮ ಕಥೆ’ (Ardambarda prema kathe) ಎಂದು ಈ ಚಿತ್ರಕ್ಕೆ ಟೈಟಲ್ ಇಡಲಾಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ‘ಜಿಂಗಲಕಾ ಲಕಾ ಲಕಾ..’ ಹಾಡು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಈ ಹಾಡು ಈಗ ಸಖತ್ ಟ್ರೆಂಡ್ ಆಗುತ್ತಿದೆ. ಈ ಹಾಡಿಗೆ ರೀಲ್ಸ್ ಮಾಡುವ ಚಾಲೆಂಜ್ನ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ನೀಡಿದ್ದಾರೆ.
ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಮೊದಲ ಭಾರಿಗೆ ಭೇಟಿ ಆಗಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ. ಇವರ ಮಧ್ಯೆ ಫ್ರೆಂಡ್ಶಿಪ್ ಬೆಳೆಯಿತು. ಈ ಫ್ರೆಂಡ್ಶಿಪ್ ಈಗ ಪ್ರೀತಿಗೆ ತಿರುಗಿದೆ. ಇವರು ಈಗ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಈ ಚಿತ್ರದ ‘ಜಿಂಗಲಕಾ ಲಕಾ ಲಕಾ..’ ಹಾಡು ಕೇಳುಗರಿಗೆ ಇಷ್ಟವಾಗಿದೆ.
‘ಜಿಂಗಲಕಾ ಲಕಾ ಲಕಾ..’ ಹಾಡಿಗೆ ಅರವಿಂದ್ ಕೆಪಿ ಹಾಗೂ ದಿವ್ಯಾ ಸ್ಟೆಪ್ ಹಾಕಿದ್ದಾರೆ. ಈ ಹಾಡಿಗೆ ರೀಲ್ಸ್ ಮಾಡಬೇಕು. ಬಳಿಕ @ardhambardhapremakathe ಪೇಜ್ಗೆ ಟ್ಯಾಗ್ ಮಾಡಿ, #jingalakaapk ಹ್ಯಾಶ್ಟ್ಯಾಗ್ ಹಾಕಿ ರೀಲ್ಸ್ ಅಪ್ಲೋಡ್ ಮಾಡಬೇಕು. ಅತ್ಯುತ್ತಮವಾಗಿ ರೀಲ್ಸ್ ಮಾಡಿದರೆ ಅಂತಹವರ ರೀಲ್ಸ್ ಅನ್ನು ಸಿನಿಮಾದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಹಾಡಿಗೆ ಈಗ ಫ್ಯಾನ್ಸ್ ರೀಲ್ಸ್ ಮಾಡಿ ಶೇರ್ ಮಾಡುತ್ತಿದ್ದಾರೆ.
View this post on Instagram
ಇದನ್ನೂ ಓದಿ: Divya Uruduga: ಅರವಿಂದ್ ಕೆಪಿ ಜನ್ಮದಿನಕ್ಕಾಗಿ ದಿವ್ಯಾ ಉರುಡುಗ ವಿಶೇಷ ಸಾಲುಗಳು; ಇಲ್ಲಿದೆ ಆ ಕವಿತೆ
ದಿವ್ಯಾ ಉರುಡುಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲೂ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಅರವಿಂದ್ ಕೆಪಿ ಮನೆ ಒಳಗೆ ಬರಬೇಕು ಎಂದು ಫಿನಾಲೆ ವೀಕ್ನಲ್ಲಿ ದಿವ್ಯಾ ಕೋರಿಕೊಂಡಿದ್ದರು. ಈ ಕೋರಿಕೆಯನ್ನು ಬಿಗ್ ಬಾಸ್ ಈಡೇರಿಸಿದ್ದರು. ಹೀಗಾಗಿ, ಅರವಿಂದ್ ದೊಡ್ಮನೆ ಒಳಗೆ ಬಂದಿದ್ದರು. ಈ ವೇಳೆ ‘ಜಿಂಗಲಕಾ..’ ಹಾಡಿಗೆ ಮನೆಯವರ ಜತೆ ಹೆಜ್ಜೆ ಹಾಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:37 am, Mon, 9 January 23