Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಂಬಿಯಾ ಬನಾದ ಮ್ಯಾಗ’ ಡಾ. ರಾಜ್​ ಮೊಮ್ಮಗನ ಸಿನಿಮಾ; ಅಶೋಕ್​ ಕಡಬ ನಿರ್ದೇಶನ

ಸಾಕಷ್ಟು ತಯಾರಿ ಮಾಡಿಕೊಂಡು ಶಣ್ಮುಖ ಗೋವಿಂದರಾಜ್​ ಅವರು ಕ್ಯಾಮೆರಾ ಎದುರಿಸುತ್ತಿದ್ದಾರೆ. ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾಗೆ ಈಗಾಗಲೇ ಶೇಕಡ 40ರಷ್ಟು ಶೂಟಿಂಗ್​ ಮಾಡಲಾಗಿದೆ. ತಾಯಿ-ಮಗನ ಕುರಿತ ಭಾವನಾತ್ಮಕ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ಮುಖ್ಯ ಭಾಗದ ದೃಶ್ಯಗಳ ಚಿತ್ರೀಕರಣ ಮಲೆನಾಡಿನಲ್ಲಿ ನಡೆಯಲಿದೆ.

‘ನಿಂಬಿಯಾ ಬನಾದ ಮ್ಯಾಗ’ ಡಾ. ರಾಜ್​ ಮೊಮ್ಮಗನ ಸಿನಿಮಾ; ಅಶೋಕ್​ ಕಡಬ ನಿರ್ದೇಶನ
‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Aug 23, 2023 | 4:27 PM

ಭಾರತೀಯ ಚಿತ್ರರಂಗದ ಮೇರು ನಟ ಡಾ. ರಾಜ್​ಕುಮಾರ್ ಅವರ ಕುಟುಂಬದ (Dr. Rajkumar Family) ಅನೇಕರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಅಣ್ಣಾವ್ರ ಮಕ್ಕಳು ಮಾತ್ರವಲ್ಲದೇ ಮೊಮ್ಮಕ್ಕಳು ಕೂಡ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಅವರ ಅವರ ಮತ್ತೊರ್ವ ಮೊಮ್ಮಗ ಕೂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಹೌದು, ಶಣ್ಮುಖ ಗೋವಿಂದರಾಜ್ (Shanmukha Govindaraj) ಅವರು ಹೀರೋ ಆಗಿ ಚಿತ್ರರಂಗದಲ್ಲಿ ತಮ್ಮ ಜರ್ನಿ ಆರಂಭಿಸುತ್ತಿದ್ದಾರೆ. ಈ ಸಿನಿಮಾಗೆ ಅಶೋಕ್​ ಕಡಬ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಲಭ್ಯವಾಗಿದೆ. ಶಣ್ಮುಖ ಗೋವಿಂದರಾಜ್ ಅವರು ನಟಿಸುತ್ತಿರುವ ಈ ಚಿತ್ರಕ್ಕೆ ‘ನಿಂಬಿಯಾ ಬನಾದ ಮ್ಯಾಗ’ (Nimbiya Banada Myaga) ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್​ ಮೂಲಕವೇ ಈ ಸಿನಿಮಾ ಕೌತುಕ ಸೃಷ್ಟಿ ಮಾಡಿದೆ.

ನಿರ್ದೇಶಕ ಅಶೋಕ್​ ಕಡಬ ಅವರು ತಮ್ಮ ವಿಶಿಷ್ಟವಾದ ಪ್ರಯತ್ನಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಈವರೆಗೂ ಒಂದಷ್ಟು ಸಿನಿಮಾಗಳನ್ನು ನಿರ್ದೇಶಿಸಿದ ಅನುಭವ ಅವರಿಗೆ ಇದೆ. ಪಕ್ಕಾ ಕಮರ್ಶಿಯಲ್ ಶೈಲಿಯ ‘ಸತ್ಯಂ’ ಚಿತ್ರಕ್ಕೆ ಅವರು ನಿರ್ದೇಶ ಮಾಡಿದ್ದಾರೆ. ಆ ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿ ಇರುವಾಗಲೇ ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾವನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಡಾ. ರಾಜ್​ಕುಮಾರ್ ಅವರ ಮೊಮ್ಮಗ ಶಣ್ಮುಖ ಗೋವಿಂದರಾಜ್ ಅವರು ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಆಗಸ್ಟ್​ 25ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ. ವಿ. ಮಾದೇಶ್ ಅವರು ಎಮ್.ಜಿ.ಪಿ.ಎಕ್ಸ್ ಎಂಟರ್​ಪ್ರೈಸಸ್​ ಬ್ಯಾನರ್​ ಮೂಲಕ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಶಣ್ಮುಖ ಜೊತೆ ಪಂಕಜ್, ಭವ್ಯಾ, ರಾಮಕೃಷ್ಣ, ಶಶಿಧರ ಕೋಟೆ, ಉಮೇಶ್ ಮುಂತಾದ ನಟರು ಈ ಸಿನಿಮಾದಲ್ಲಿದ್ದಾರೆ.

ಇದನ್ನೂ ಓದಿ: ‘ಡಾ. ರಾಜ್​ಕುಮಾರ್​ ಬಗ್ಗೆ ಅವರ ತಂದೆ ನುಡಿದಿದ್ರು ಭವಿಷ್ಯ’: ಅಚ್ಚರಿಯ ಘಟನೆ ಮೆಲುಕು ಹಾಕಿದ ರಾಘಣ್ಣ

‘ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಪೋಸ್ಟರ್ ಈಗಾಗಲೇ ಲಾಂಚ್ ಆಗಿದೆ. ಅದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಡಾ. ರಾಜ್​ ಕುಟುಂಬದ ಕಲಾವಿದರ ಸಿನಿಮಾ ಬಂದಾಗ ಜನರಿಗೆ ವಿಶೇಷವಾದ ನಿರೀಕ್ಷೆ ಇರುತ್ತದೆ. ಯಾಕೆಂದರೆ, ಆ ಕುಟುಂಬದಲ್ಲಿ ಸಿನಿಮಾ ಕಥೆಯನ್ನು ಬಹಳ ಕಾಳಜಿ ವಹಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಣ್ಣಾವ್ರ ಹಿರಿಯ ಪುತ್ರಿಯಾದ ಲಕ್ಷ್ಮೀ ಅವರ ಮಗ ಶಣ್ಮುಖ ಕೂಡ ವಿಶೇಷವಾದ ಕಥೆಯನ್ನು ಆಯ್ದುಕೊಂಡು ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ನಿರ್ದೇಶಕರು ಹೇಳಿಕ ಕಥೆ ರಾಜ್​ ಫ್ಯಾಮಿಲಿಗೆ ಇಷ್ಟವಾಗಿದ್ದು, ಈ ಚಿತ್ರದ ಕೆಲಸಗಳು ಈಗ ಪ್ರಗತಿಯಲ್ಲಿವೆ.

ಇದನ್ನೂ ಓದಿ: 3ನೇ ಕ್ಲಾಸ್​ ಓದಿದ ಡಾ. ರಾಜ್​ಕುಮಾರ್​ ಇಂಗ್ಲಿಷ್​ ಕಲಿತಿದ್ದು ಹೇಗೆ? ಇಲ್ಲಿದೆ ಅದರ ಸೀಕ್ರೆಟ್​

ಸಾಕಷ್ಟು ತಯಾರಿ ನಡೆಸಿಕೊಂಡು ಶಣ್ಮುಖ ಅವರು ಕ್ಯಾಮೆರಾ ಎದುರಿಸುತ್ತಿದ್ದಾರೆ. ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾಗೆ ಈಗಾಗಲೇ ಶೇಕಡ 40ರಷ್ಟು ಶೂಟಿಂಗ್​ ಮಾಡಲಾಗಿದೆ. ತಾಯಿ-ಮಗನ ಸೆಂಟಿಮೆಂಟ್​ ಹೊಂದಿರುವ ಈ ಸಿನಿಮಾದ ಕಹಾನಿ ಮಲೆನಾಡಿನ ಹಿನ್ನೆಲೆಯಲ್ಲಿ ಸಾಗುತ್ತದೆ. ಬೆಂಗಳೂರು, ಉಡುಪಿ ಮುಂತಾದ ಕಡೆಗಳಲ್ಲಿ 2 ಹಂತದ ಶೂಟಿಂಗ್​ ಮಾಡಲಾಗಿದೆ. ಕಥೆಯ ಮುಖ್ಯ ಭಾಗವನ್ನು ಶೃಂಗೇರಿ, ಹೊರನಾಡು ಮುಂತಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗುವುದು. ಸದ್ಯ ನಿರ್ದೇಶಕ ಅಶೋಕ ಕಡಬ ಅವರು ‘ಸತ್ಯಂ’ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಆ ಸಿನಿಮಾ ರಿಲೀಸ್​ ಆದ ಬಳಿಕ ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾದ ಶೂಟಿಂಗ್​ ಮುಂದುವರಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.