‘ಅಜ್ಞಾನದಿಂದ ದುಃಖ, ದುಃಖದಿಂದ ರೋಗ, ರೋಗದಿಂದ ವಿಷ’; ವಿಷ್ಣು ಹೇಳಿದ ಈ ಮಾತು ನೆನಪಿದೆಯೇ?
ಡಾ. ವಿಷ್ಣುವರ್ಧನ್ ಅವರ ಮಾತುಗಳು, ಜೀವನದ ಕುರಿತು ಅವರ ಆಳವಾದ ಚಿಂತನೆಗಳು ಇಂದಿಗೂ ಅಭಿಮಾನಿಗಳಿಗೆ ದಾರಿದೀಪವಾಗಿವೆ. ಅಜ್ಞಾನ, ದುಃಖ, ರೋಗಗಳ ಬಗ್ಗೆ ಅವರ ಸಂದರ್ಶನದಲ್ಲಿ ಹೇಳಿದ ನುಡಿಗಳು ವೈರಲ್ ಆಗಿವೆ. ಕನ್ನಡದ ಮೇಲಿನ ಅವರ ಪ್ರೀತಿ ಅಪ್ರತಿಮ. ಆದರೆ, ಅವರ ಸ್ಮಾರಕದ ವಿವಾದ ಇನ್ನೂ ಬಗೆಹರಿಯದಿರುವುದು ದುರದೃಷ್ಟಕರ.

ವಿಷ್ಣುವರ್ಧನ್ (Vishnuvardhan) ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಈಗ ನಮ್ಮ ಜೊತೆ ಇಲ್ಲ. ಈ ವಿಷಯದ ಬಗ್ಗೆ ಅಭಿಮಾನಿಗಳಿಗೆ ಈಗಲೂ ಬೇಸರ ಇದೆ. ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಅನೇಕರು ಈಗಲೂ ಫಾಲೋ ಮಾಡುತ್ತಿದ್ದಾರೆ. ವಿಷ್ಣುವರ್ಧನ್ ಅವರು ಈ ಮೊದಲು ಒಂದು ವಿಚಾರವನ್ನು ಹಂಚಿಕೊಂಡಿದ್ದರು. ಆ ಸಾಲುಗಳು ಗಮನ ಸೆಳೆಯುವ ರೀತಿಯಲ್ಲಿ ಇತ್ತು.
ವಿಷ್ಣುವರ್ಧನ್ ಅವರು ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಅವರು ಆಡುತ್ತಿದ್ದ ಮಾತುಗಳು ಕೂಡ ಗಮನ ಸೆಳೆಯುವ ರೀತಿಯಲ್ಲಿ ಇತ್ತು. ಸಂದರ್ಶನದ ಸಮಯದಲ್ಲಿ ಅವರು ಹೇಳುತ್ತಿದ್ದ ಕೆಲವು ಮಾತುಗಳು ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಡುವ ರೀತಿಯಲ್ಲಿ ಇರುತ್ತಿತ್ತು. ಇದಕ್ಕೆ ವಿಷ್ಣುವರ್ಧನ್ ಅವರ ಈ ಸಂದರ್ಶನವೇ ಸಾಕ್ಷಿ.
ವಿಷ್ಣುವರ್ಧನ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ಈ ವೇಳೆ ಅವರು ಹೇಳಿದ ಮಾತು ಗಮನ ಸೆಳೆದಿದೆ. ‘ಅಜ್ಞಾನದಿಂದ ದುಃಖ. ದುಖಃದಿಂದ ರೋಗ. ರೋಗದಿಂದ ಭಯ. ರೋಗ ಬಂದಾಗ ಇಡೀ ದೇಹ ವಿಷ ಆಗುತ್ತದೆ. ಕಣ್ಮುಚ್ಚಿ ಒಳಗೆ ನೋಡಿಕೊಳ್ಳಯವ ಪ್ರಯತ್ನ ಮಾಡಬೇಕು. ನಾನು ಮಾಡೋಕೆ ಶುರು ಮಾಡಿದ್ದೇನೆ’ ಎಂದಿದ್ದರು ವಿಷ್ಣುವರ್ಧನ್. ಈ ಮಾತನ್ನು ಈಗಲೂ ಅನೇಕರು ಮೆಚ್ಚಿಕೊಳ್ಳುತ್ತಾರೆ.
View this post on Instagram
ಯಾವಾಗಲೂ ದುಃಖವನ್ನು ಹೆಚ್ಚು ಮಾಡಿಕೊಂಡಾಗ ಮನಸ್ಸು ಸರಿಯಾಗಿ ಇರೋದಿಲ್ಲ. ಮನಸ್ಸು ಸರಿಯಾಗಿ ಇಲ್ಲ ಎಂದಾಗ ಜೀವನದಲ್ಲಿ ಯಾವುದೂ ಸರಿಯಾಗಿ ಇರೋದಿಲ್ಲ. ವಿಷ್ಣು ಹೇಳಿದ ಮಾತನ್ನು ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯೋತ್ಸವ ವಿಶೇಷ: ‘ಕಮಲ್-ರಜನಿ ಸೇರಿಸಿದರೆ ವಿಷ್ಣುವರ್ಧನ್’; ಸುಹಾಸಿನಿ
ವಿಷ್ಣುವರ್ಧನ್ ಅವರು ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಕನ್ನಡ ನಾಡಿಗಾಗಿ ಅವರು ಕೊಟ್ಟ ಕೊಡುಗೆ ತುಂಬಾನೇ ದೊಡ್ಡದು. ಅವರ ಸಮಾಧಿ ವಿಚಾರದಲ್ಲಿ ಎದ್ದ ವಿವಾದಗಳು ಇನ್ನೂ ತಣ್ಣಗಾಗಿಲ್ಲ ಎಂಬುದು ಬೇಸರದ ವಿಚಾರ. ಅವರನ್ನು ಮೊದಲು ಸುಟ್ಟ ಜಾಗ ಇರೋದು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ. ಈ ಸ್ಟುಡಿಯೋ ಜಾಗದಲ್ಲಿ 10 ಗುಂಟೆಯನ್ನು ನೀಡಬೇಕು ಎಂಬುದು ಅನೇಕರ ಕೋರಿಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



