Rachita Ram: ‘ರಚಿತಾ ಎದೆಯಲ್ಲಿ ಮೋಸ ಇಲ್ಲ, ಅದಕ್ಕೆ ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಇದ್ದಾರೆ’: ದುನಿಯಾ ವಿಜಯ್​

| Updated By: ಮದನ್​ ಕುಮಾರ್​

Updated on: Sep 14, 2022 | 2:08 PM

Monsoon Raaga: ರಚಿತಾ ರಾಮ್​ ಅವರನ್ನು ದುನಿಯಾ ವಿಜಯ್​ ಮತ್ತು ಡಾಲಿ ಧನಂಜಯ್​ ಅವರು ಬಾಯಿ ತುಂಬ ಹೊಗಳಿದ್ದಾರೆ. ಅವರಿಬ್ಬರ ಮಾತುಗಳನ್ನು ಕೇಳಿದ ಬಳಿಕ ರಚಿತಾ ಎದ್ದು ನಿಂತು ನಮಸ್ಕಾರ ಮಾಡಿದ್ದಾರೆ.

Rachita Ram: ‘ರಚಿತಾ ಎದೆಯಲ್ಲಿ ಮೋಸ ಇಲ್ಲ, ಅದಕ್ಕೆ ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಇದ್ದಾರೆ’: ದುನಿಯಾ ವಿಜಯ್​
ಡಾಲಿ ಧನಂಜಯ್, ದುನಿಯಾ ವಿಜಯ್, ರಚಿತಾ ರಾಮ್
Follow us on

ನಟಿ ರಚಿತಾ ರಾಮ್​ (Rachita Ram) ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಅನೇಕ ಸ್ಟಾರ್​ ನಟರ ಸಿನಿಮಾಗಳಲ್ಲಿ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಡಾಲಿ ಧನಂಜಯ್ (Daali Dhananjay)​ ಜೊತೆ ನಟಿಸಿರುವ ‘ಮಾನ್ಸೂನ್​ ರಾಗ’ ಸಿನಿಮಾ ಸೆಪ್ಟೆಂಬರ್​ 16ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ದುನಿಯಾ ವಿಜಯ್​ ಅವರು ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಡಾಲಿ ಧನಂಜಯ್​ ಮತ್ತು ದುನಿಯಾ ವಿಜಯ್​ (Duniya Vijay) ಅವರು ಜೊತೆಯಾಗಿ ರಚಿತಾ ರಾಮ್​ ಗುಣಗಾನ ಮಾಡಿದ್ದಾರೆ. ‘ರಚಿತಾ ರಾಮ್​ ಬಡಬಡ ಅಂತ ಮಾತಾಡುತ್ತಾರೆ. ಅವರ ಎದೆಯಲ್ಲಿ ಮೋಸ ಇಲ್ಲ. ಅದಕ್ಕಾಗಿಯೇ ಇಷ್ಟು ವರ್ಷ ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಸುಮಾರು ವರ್ಷ ಉಳಿದುಕೊಳ್ಳುತ್ತಾರೆ. ಅವರನ್ನು ನಾನು ತುಂಬ ಹತ್ತಿರದಿಂದ ನೋಡಿದ್ದೇನೆ. ಅವರ ಬಗ್ಗೆ ನನಗೆ ತುಂಬ ಗೌರವ ಇದೆ’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ.

ವೇದಿಕೆ ಮೇಲೆ ಡಾಲಿ ಧನಂಜಯ್​ ಮತ್ತು ದುನಿಯಾ ವಿಜಯ್​ ಅವರು ಹೊಗಳುವಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ರಚಿತಾ ರಾಮ್​ ಅವರು ಎದ್ದು ನಿಂತು ನಮಸ್ಕಾರ ಮಾಡಿದರು. ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ರಚಿತಾ ಅವರನ್ನು ನೋಡಲು ಧನಂಜಯ್​ ಅವರು ಒಂದಷ್ಟು ಸರ್ಕಸ್​ ಮಾಡುತ್ತಿದ್ದರು. ಆ ಬಗ್ಗೆ ಅವರು ಈಗ ಬಾಯಿ ಬಿಟ್ಟಿದ್ದಾರೆ. ‘ರಚಿತಾ ಇಂಡಸ್ಟ್ರಿಗೆ ಬಂದಾಗ ನಾನು ಮತ್ತು ವಿಖ್ಯಾತ್​ ಅವರು ಕತ್ರಿಗುಪ್ಪೆಯಲ್ಲಿರುವ ರಚಿತಾ ಮನೆ ಹತ್ತಿರ ಬೀಟ್​ ಹಾಕ್ತಾ ಇದ್ವಿ. ಅವರು ಕಾಣ್ತಾರಾ, ಡಿಂಪಲ್​ ಕಾಣುತ್ತಾ ಅಂತ ನೋಡಲು ಪ್ರಯತ್ನ ಮಾಡ್ತಿದ್ವಿ’ ಎಂದು ಡಾಲಿ ಹೇಳಿದ್ದಾರೆ.

‘ರಚಿತಾ ರಾಮ್​ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಅವರು ಇದ್ದಲ್ಲಿ ಒಂದು ಎನರ್ಜಿ ಇರುತ್ತದೆ. ಅವರು ಭಾವಜೀವಿ. ತಮ್ಮ ಸುತ್ತ ಇರುವ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ತಾರೆ. ಬೇಕಾಗಿರುವ ಜೀವಗಳಿಗೆ ತುಂಬ ಚೆನ್ನಾಗಿ ಸಪೋರ್ಟ್​ ಮಾಡುತ್ತಾರೆ. ಅದಕ್ಕಾಗಿಯೇ ಅವರ ಕಣ್ಣುಗಳು ಅಷ್ಟು ಚೆನ್ನಾಗಿ ಪಳಪಳ ಅಂತ ಹೊಳೆಯುತ್ತವೆ’ ಎಂದು ಧನಂಜಯ್​ ಅವರು ಬಾಯಿ ತುಂಬ ಹೊಗಳಿದ್ದಾರೆ.

ಇದನ್ನೂ ಓದಿ
ಜನ್ಮದಿನದಂದು ‘ಡಾಲಿ’ ಧನಂಜಯ್ ಹೊಸ ಘೋಷಣೆ; ಹೊಸ ಪ್ರತಿಭೆಗಳಿಗೆ ಸಿಗಲಿದೆ ಅವಕಾಶ
Rachita Ram: ಡಾಲಿ ಧನಂಜಯ್​ ಅಣ್ಣನ ಮಗಳಿಗೆ ರಚಿತಾ ಹೆಸರು; ಆ ಘಟನೆ ನೆನೆದ ‘ಡಿಂಪಲ್​ ಕ್ವೀನ್​’
ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ
ಡಾಲಿ ಧನಂಜಯ್​ ಹೆಸರಲ್ಲಿ ವಂಚನೆ; ಅಪರಿಚಿತರ ಪೋಸ್ಟ್​ ನಂಬಿ ಮೋಸ ಹೋಗ್ಬೇಡಿ ಎಂದ ನಟ

‘ಮಾನ್ಸೂನ್​ ರಾಗ’ ಸಿನಿಮಾದ ಟ್ರೇಲರ್​ ಗಮನ ಸೆಳೆದಿದೆ. ಹಾಡುಗಳು ಸೂಪರ್​ ಹಿಟ್​ ಆಗಿವೆ. ಡಾಲಿ ಧನಂಜಯ್​, ರಚಿತಾ ರಾಮ್​ ಜೊತೆಗೆ ಯಶಾ ಶಿವಕುಮಾರ್​, ಅಚ್ಯುತ್​ ಕುಮಾರ್​, ಸುಹಾನಿಸಿ ಮಣಿರತ್ನಂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರವೀಂದ್ರನಾಥ್​ ನಿರ್ದೇಶನ ಮಾಡಿದ್ದು, ವಿಖ್ಯಾತ್​ ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:05 pm, Wed, 14 September 22