ಶಿವರಾಜ್ಕುಮಾರ್ (Shivarajkumar) ಅಭಿನಯದ ‘ಬೈರಾಗಿ’ (Bairagee Movie) ಈಗಾಗಲೇ ತೀವ್ರ ಕುತೂಹಲ ಸೃಷ್ಟಿಸಿದೆ. ಬೃಹತ್ ಪಾತ್ರವರ್ಗದಿಂದಲೂ ಮನ ಸೆಳೆಯುತ್ತಿರುವ ಈ ಚಿತ್ರದಲ್ಲಿ ಧನಂಜಯ್, ಪೃಥ್ವಿ ಅಂಬರ್ ಮೊದಲಾದವರು ಬಣ್ಣಹಚ್ಚಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿರುವ ಈ ಚಿತ್ರದ ಟೀಸರ್ ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದೊಂದಿಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಇದೀಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು ‘ನಕರನಖ’ (Nakaranakha Song) ರಿಲೀಸ್ ಆಗಿದೆ. ಅನೂಪ್ ಸೀಳಿನ್ ಸಂಗೀತ ನೀಡಿ, ಆಂತೋನಿ ದಾಸನ್ ಹಾಡಿರುವ ಹಾಡನ್ನು ಅಕ್ಷಯ ತೃತೀಯದ ದಿನದಂದು ದುನಿಯಾ ವಿಜಯ್ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ. ‘ಬೈರಾಗಿ’ ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ವಿಭಿನ್ನ ಲುಕ್ಗಳಲ್ಲಿ ಕಾಣಿಸಿಕೊಂಡಿರುವ ಶಿವರಾಜ್ಕುಮಾರ್ ಗಮನಸೆಳೆದಿದ್ದಾರೆ. ಈ ಹಿಂದೆ ಶಿವಣ್ಣ ಹುಲಿ ಮುಖವರ್ಣಿಕೆಯಲ್ಲಿ ಕಾಣಿಸಿಕೊಂಡಿದ್ದ ಚಿತ್ರವೊಂದು ವೈರಲ್ ಆಗಿತ್ತು. ಇದೀಗ ತೆರೆಕಂಡಿರುವ ಹೊಸ ಹಾಡಿನಲ್ಲೂ ಶಿವಣ್ಣ ನಾನಾ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ.
ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ ದುನಿಯಾ ವಿಜಯ್, ‘‘ಹಾಡಿನ ‘ನಕರನಕ’ ಸಾಲೇ ಅದ್ಭುತವಾಗಿದೆ. ‘ಬೈರಾಗಿ’ ಒಳ್ಳೆಯ ಟೈಟಲ್. ಶಿವಣ್ಣ- ಧನಂಜಯ್ ಕಾಂಬಿನೇಷನ್ ಮತ್ತೆ ತೆರೆಯ ನೋಡಲು ಕಾಯುತ್ತಿದ್ದೇವೆ. ಹಾಡಿಗೆ ಸಂಗೀತ ನೀಡಿರುವ ಅನೂಪ್ ಸೀಳಿನ್ ಚೆನ್ನಾಗಿ ಜೀವ ತುಂಬಿದ್ದಾರೆ. ಸಲಗ ಚಿತ್ರಕ್ಕೆ ಜತೆಯಾಗಿ ನಿಂತು, ಯಶಸ್ವಿಯಾಗಲು ನೆರವು ನೀಡಿದ ಶಿವಣ್ಣರ ಹಾಡನ್ನು ರಿಲೀಸ್ ಮಾಡಲು ಖುಷಿಯಾಗುತ್ತಿದೆ’’ ಎಂದಿದ್ದಾರೆ.
ದುನಿಯಾ ವಿಜಯ್ ಮಾತು:
‘ಬೈರಾಗಿ’ ತಾರಾಗಣದಿಂದಲೂ ಗಮನ ಸೆಳೆದಿದೆ. ‘ಟಗರು’ ಬಳಿಕ ಶಿವಣ್ಣ ಹಾಗೂ ಧನಂಜಯ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ದಿಯಾ’ ಮೂಲಕ ಕನ್ನಡಿಗರ ಮನೆಮಾತಾದ ‘ಪೃಥ್ವಿ ಅಂಬರ್’ ಈ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ನಾಯಕಿಯಾಗಿ ಅಂಜಲಿ ಕಾಣಿಸಿಕೊಳ್ಳುತ್ತಿದ್ದು, ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ವಿಜಯ್ ಮಿಲ್ಟನ್ ಛಾಯಾಗ್ರಹಣದ ಹೊಣೆಯನ್ನೂ ಹೊತ್ತಿದ್ದಾರೆ. ತಮ್ಮ 123ನೇ ಚಿತ್ರದಲ್ಲಿ ವಿಧವಿಧ ಅವತಾರ ತೊಟ್ಟಿರುವ ಶಿವಣ್ಣ, ಅಭಿಮಾನಿಗಳ ಮನಗೆದ್ದಿದ್ದಾರೆ. ಪ್ರಸ್ತುತ ‘ನಕರನಖ’ ಹಾಡು ಯುಟ್ಯೂಬ್ ಹಾಡುಗಳ ಟ್ರೆಂಡಿಂಗ್ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
‘ಬೈರಾಗಿ’ ಚಿತ್ರದ ಮೊದಲ ಹಾಡು ‘ನಕರನಖ’ ಇಲ್ಲಿದೆ:
ಇನ್ನಷ್ಟು ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಕಾಲ್ಪನಿಕ ಕತೆ ಎಂದ ವಿಕಿಪೀಡಿಯಾ ಬರಹ; ವಿವೇಕ್ ಅಗ್ನಿಹೋತ್ರಿ ತೀವ್ರ ಆಕ್ಷೇಪ
Dhanush: ಧನುಷ್ ತಮ್ಮ ಮಗ ಎಂದು ಹೇಳಿಕೊಂಡ ದಂಪತಿ; ಮದ್ರಾಸ್ ಹೈಕೋರ್ಟ್ನಿಂದ ನಟನಿಗೆ ಸಮನ್ಸ್- ಏನಿದು ಪ್ರಕರಣ?