Bairagee: ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ; ‘ಜೇಮ್ಸ್’ ಜತೆಗೆ ಪ್ರದರ್ಶನವಾಗಲಿದೆ ‘ಬೈರಾಗಿ’ ಟೀಸರ್!

Shiva Rajkumar | Puneeth Rajkumar: ಶಿವರಾಜ್​ಕುಮಾರ್ ಅಭಿನಯದ ‘ಬೈರಾಗಿ’ ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಇದೀಗ ಚಿತ್ರತಂಡ ಅಭಿಮಾನಿಗಳಿಗೆ ಹೊಸ ಸಮಾಚಾರ ನೀಡಿದೆ. ಮಾರ್ಚ್ 17ರಂದು ‘ಬೈರಾಗಿ’ ಟೀಸರ್ ರಿಲೀಸ್ ಆಗಲಿದ್ದು, ‘ಜೇಮ್ಸ್’ ಜತೆ ಪ್ರದರ್ಶನವಾಗಲಿದೆ.

Bairagee: ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ; ‘ಜೇಮ್ಸ್’ ಜತೆಗೆ ಪ್ರದರ್ಶನವಾಗಲಿದೆ ‘ಬೈರಾಗಿ’ ಟೀಸರ್!
‘ಬೈರಾಗಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ (ಎಡ), ಶಿವಣ್ಣ, ಅಪ್ಪು (ಬಲ)
Follow us
TV9 Web
| Updated By: shivaprasad.hs

Updated on: Mar 13, 2022 | 3:40 PM

ಮಾರ್ಚ್ 17ರಂದು ಪುನೀತ್ ರಾಜ್​ಕುಮಾರ್ (Puneeth Rajkumar) ಜನ್ಮದಿನ. ಅಂದು ಅವರು ನಾಯಕನಾಗಿ ಅಭಿನಯಿಸಿದ್ದ ‘ಜೇಮ್ಸ್’ ರಿಲೀಸ್ (James Release) ಆಗಲಿದೆ. ಚಿತ್ರವನ್ನು ಸಂಭ್ರಮಿಸಲು ಅಭಿಮಾನಿಗಳು ಭರ್ಜರಿ ತಯಾರಿ ನಡೆಸುತ್ತಿರುವಂತೆಯೇ ಹೊಸ ಸಮಾಚಾರ ಸಿಕ್ಕಿದೆ. ಇದನ್ನು ಕೇಳಿ ಫ್ಯಾನ್ಸ್ ಮತ್ತಷ್ಟು ಥ್ರಿಲ್ ಆಗಿದ್ದಾರೆ. ಶಿವರಾಜ್​ಕುಮಾರ್ (Shiva Rajkumar) ಅಭಿನಯದ ‘ಬೈರಾಗಿ’ ಚಿತ್ರದ ಟೀಸರ್​ಅನ್ನು (Bairagee Teaser) ಮಾರ್ಚ್ 17ರಂದು ರಿಲೀಸ್ ಮಾಡಲು ನಿರ್ಧರಿಸಲಾಗಿದೆ; ಅದೂ ಕೂಡ ಚಿತ್ರಮಂದಿರಗಳಲ್ಲಿ! ಹೌದು. ‘ಜೇಮ್ಸ್’ ಪ್ರದರ್ಶನದ ವೇಳೆ ‘ಬೈರಾಗಿ’ ಟೀಸರ್ ಕಾಣಿಸಿಕೊಳ್ಳಲಿದೆ. ಪುನೀತ್​ ಜನ್ಮದಿನದ ಸಂಭ್ರಮಾಚರಣೆಗೆ ‘ಬೈರಾಗಿ’ ಕೂಡ ಸೇರಿಕೊಳ್ಳಲಿದೆ ಎಂದು ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ಫ್ಯಾನ್ಸ್​​ಗೆ ಮಾರ್ಚ್ 17ರಂದು ಡಬಲ್ ಧಮಾಕಾ ಸಿಗಲಿದೆ. ಈ ಕುರಿತು ನಿರ್ದೇಶಕ ವಿಜಯ್ ಮಿಲ್ಟನ್ ಟ್ವೀಟ್ ಮಾಡಿದ್ದು, ‘‘ಪವರ್​ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಲು ಇಡೀ ಕರ್ನಾಟಕದೊಂದಿಗೆ ‘ಬೈರಾಗಿ’ ತಂಡ ಕೂಡ ಸೇರಿಕೊಳ್ಳಲಿದೆ. ಮಾರ್ಚ್ 17ರಿಂದ ಚಿತ್ರಮಂದಿರದಲ್ಲಿ ‘ಬೈರಾಗಿ’ ಟೀಸರ್ ಪ್ರದರ್ಶನವಾಗಲಿದೆ’’ ಎಂದು ಬರೆದಿದ್ದಾರೆ.

ಟೀಸರ್ ರಿಲೀಸ್ ಬಗ್ಗೆ ವಿಜಯ್ ಮಿಲ್ಟನ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

‘ಬೈರಾಗಿ’ ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಶಿವರಾಜ್​ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಪೋಸ್ಟರ್​ಗಳು ಈಗಾಗಲೇ ಕ್ರೇಜ್ ಹುಟ್ಟಿಸಿವೆ. ಕಲರ್​ಫುಲ್ ಲುಕ್ ಮೂಲಕ ಶಿವಣ್ಣ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ. ತಮ್ಮ 123ನೇ ಚಿತ್ರದಲ್ಲಿ ಶಿವರಾಜ್​ಕುಮಾರ್ ಹಲವು ಅವತಾರ ತಾಳಿದ್ದಾರೆ. ಈ ಹಿಂದೆ ಹುಲಿ ಮುಖವರ್ಣಿಕೆಯಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದ ಚಿತ್ರವೊಂದು ವೈರಲ್ ಆಗಿತ್ತು.

‘ಬೈರಾಗಿ’ ತಾರಾಗಣ ಕೂಡ ದೊಡ್ಡದಿದೆ. ‘ಟಗರು’ ಬಳಿಕ​ ಶಿವಣ್ಣ ಹಾಗೂ ಧನಂಜಯ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ದಿಯಾ’ ಮೂಲಕ ಕನ್ನಡಿಗರ ಮನೆಮಾತಾದ ‘ಪೃಥ್ವಿ ಅಂಬರ್’ ಈ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ನಾಯಕಿಯಾಗಿ ಅಂಜಲಿ ನಟಿಸುತ್ತಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಕಾಲಿವುಡ್​ನ ಜನಪ್ರಿಯ ನಿರ್ದೇಶಕ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳಿದ್ದು, ಛಾಯಾಗ್ರಹಣದ ಹೊಣೆಯನ್ನೂ ಹೊತ್ತಿದ್ದಾರೆ.

ಇಂದು ಪುನೀತ್​ ಅಭಿಮಾನಿಗಳಿಗೆ ಹಲವು ವಿಶೇಷ ಸುದ್ದಿ:

ಇಂದು (ಮಾ.13) ಅಪ್ಪು ಅಭಿಮಾನಿಗಳಿಗೆ ವಿಶೇಷ ದಿನವೆಂದೇ ಹೇಳಬೇಕು. ಇದಕ್ಕೆ ಕಾರಣಗಳು ಹಲವು. ಮೈಸೂರು ವಿಶ್ವವಿದ್ಯಾನಿಲಯವು ಪುನೀತ್​ಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಮಾರ್ಚ್ 22ರಂದು ರಾಜ್ಯಪಾಲರು ಪ್ರದಾನ ಮಾಡಲಿದ್ದು, ಅಶ್ವಿನಿ ಪುನೀತ್​ ರಾಜ್​ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದೇ ‘ಜೇಮ್ಸ್ ಪ್ರಿ ರಿಲೀಸ್ ಈವೆಂಟ್’ ಕೂಡ ನಡೆಯಲಿದೆ. ಜತೆಗೆ ‘ಜೇಮ್ಸ್’ ರಿಲೀಸ್ ಸಿದ್ಧತೆಯಲ್ಲಿ ಅಭಿಮಾನಿಗಳಿದ್ದು, ಟಿಕೆಟ್​ಗಳು ಖಾಲಿಯಾಗುತ್ತಿವೆ. ಈ ನಡುವೆ ‘ಬೈರಾಗಿ’ ಟೀಸರ್ ರಿಲೀಸ್ ಬಗ್ಗೆ ಮಾಹಿತಿ ಬಂದಿದ್ದು, ಎಲ್ಲರೂ ಮತ್ತಷ್ಟು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ:

Puneeth Rajkumar: ಡಾ.ರಾಜ್ ಹಾದಿಯಲ್ಲಿ ಅಪ್ಪು; ಮೈಸೂರು ವಿವಿಯಿಂದ ಪುನೀತ್​ಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಣೆ

‘ಜೇಮ್ಸ್​’ ಮಾತ್ರವಲ್ಲ; ಮಾ.17ಕ್ಕೆ ಸಿಗಲಿದೆ ಇನ್ನೊಂದು ಸರ್ಪ್ರೈಸ್​: ಇಲ್ಲಿದೆ ಗುಡ್​ ನ್ಯೂಸ್​