Ee Pattanakke Enagide: ‘ಈ ಪಟ್ಟಣಕ್ಕೆ ಏನಾಗಿದೆ’? ಬೆಂಗಳೂರಲ್ಲಿ ಸೆನ್ಸಾರ್​ ಪ್ರಮಾಣಪತ್ರ ಸಿಗದೇ ಹೈದರಾಬಾದ್​ಗೆ ಹೋದ ಚಿತ್ರತಂಡ

|

Updated on: Jul 28, 2023 | 4:19 PM

Censor Board: ರವಿ ಸುಬ್ಬರಾವ್ ಅವರು ತಮ್ಮ ರಿಯಲ್​ ಲೈಫ್​ನಲ್ಲಿ ನೋಡಿದ ಅನೇಕ ಘಟನೆಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ‘ಈ ಪಟ್ಟಣಕ್ಕೆ ಏನಾಗಿದೆ’ ಎಂಬ ಶೀರ್ಷಿಕೆ ಡಿಫರೆಂಟ್​ ಆಗಿದೆ.

Ee Pattanakke Enagide: ‘ಈ ಪಟ್ಟಣಕ್ಕೆ ಏನಾಗಿದೆ’? ಬೆಂಗಳೂರಲ್ಲಿ ಸೆನ್ಸಾರ್​ ಪ್ರಮಾಣಪತ್ರ ಸಿಗದೇ ಹೈದರಾಬಾದ್​ಗೆ ಹೋದ ಚಿತ್ರತಂಡ
‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರತಂಡ
Follow us on

ಇತ್ತೀಚಿನ ದಿನಗಳಲ್ಲಿ ಪ್ರತಿ ಸಿನಿಮಾಗಳನ್ನೂ ಸೆನ್ಸಾರ್​ ಮಂಡಳಿಯವರು (Censor Board) ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ‘ಆದಿಪುರುಷ್​’, ‘ಆಪನ್​ಹೈಮರ್​’ ಮುಂತಾದ ಸಿನಿಮಾಗಳ ದೃಶ್ಯಗಳಿಗೆ ಆಕ್ಷೇಪ ಎದುರಾದ ಹಿನ್ನೆಲೆಯಲ್ಲಿ ದಿನದಿನಕ್ಕೂ ನಿಯಮಗಳು ಕಠಿಣವಾಗುತ್ತಿವೆ. ಹಿಂದಿಯ ‘ಒಎಂಜಿ 2’ ಸಿನಿಮಾ ಕೂಡ ಸೆನ್ಸಾರ್​ ಪ್ರಮಾಣ ಪತ್ರ (Censor Certificate) ಪಡೆಯಲು ಕಷ್ಟಪಡುತ್ತಿದೆ. ಅದೇ ರೀತಿ ಕನ್ನಡದ ‘ಈ ಪಟ್ಟಣಕ್ಕೆ ಏನಾಗಿದೆ’ (Ee Pattanakke Enagide) ಸಿನಿಮಾಗೂ ಸಹ ಪ್ರಮಾಣಪತ್ರ ಸಿಗುವುದು ಕಷ್ಟ ಆಗಿತ್ತು. ಆದರೆ ಬೆಂಗಳೂರಿನಲ್ಲಿ ಸೆನ್ಸಾರ್ ಆಗಲಿಲ್ಲ ಎಂಬ ಕಾರಣಕ್ಕೆ ಹೈದರಾಬಾದ್​ಗೆ ತೆರಳಿತ್ತು ಚಿತ್ರತಂಡ. ಆಗಸ್ಟ್​ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಈ ಪಟ್ಟಣಕ್ಕೆ ಏನಾಗಿದೆ’ ಸಿನಿಮಾಗೆ ರವಿ ಸುಬ್ಬರಾವ್ ಅವರು ನಿರ್ದೇಶನ ಮಾಡಿದ್ದಾರೆ. ಸೆನ್ಸಾರ್ ಸಮಸ್ಯೆ ಆಗುವಂಥದ್ದು ಈ ಚಿತ್ರದಲ್ಲಿ ಏನಿದೆ? ಈ ಪ್ರಶ್ನೆಗೆ ನಿರ್ದೇಶಕ ರವಿ ಸುಬ್ಬರಾವ್ ಉತ್ತರ ನೀಡಿದ್ದಾರೆ. ‘ಅನೇಕ ಸನ್ನಿವೇಶಗಳನ್ನು ನಾವು ನೈಜವಾಗಿ ಶೂಟ್​ ಮಾಡಿದ್ದೇವೆ. ಆದ್ದರಿಂದ ಕರ್ನಾಟಕದಲ್ಲಿ ನಮಗೆ ಸೆನ್ಸಾರ್ ಮಾಡಿಸಲು ಸಾಧ್ಯವಾಗಲಿಲ್ಲ. ಬಳಿಕ ನಾವು ಹೈದರಾಬಾದ್​​ನಲ್ಲಿ ಸಿನಿಮಾದ ಸೆನ್ಸಾರ್ ಮಾಡಿಸಿದೆವು. ಅಲ್ಲಿನ ಸೆನ್ಸಾರ್ ಬೋರ್ಡ್​ ಸದಸ್ಯರು ಕೆಲವು ಕಡೆಗಳಿಗೆ ಕತ್ತರಿ ಹಾಕಲು ಸೂಚಿಸಿ, ಎ ಪ್ರಮಾಣಪ್ರತ್ರ ನೀಡಿದ್ದಾರೆ’ ಎಂದಿದ್ದಾರೆ ರವಿ ಸುಬ್ಬರಾವ್.

ಇದನ್ನೂ ಓದಿ: Dharma Censor Board: ‘ಧಾರ್ಮಿಕ ಸೆನ್ಸಾರ್​ ಮಂಡಳಿ’; ಸಿನಿಮಾಗಳಲ್ಲಿ ಹಿಂದೂ ದೇವರ ಅಪಮಾನ ತಡೆಯಲು ಹೀಗೊಂದು ಪ್ರಯತ್ನ

ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ರವಿ ಸುಬ್ಬರಾವ್ ಅವರೇ ನಿಭಾಯಿಸಿದ್ದಾರೆ. ಅವರು ತಮ್ಮ ಸ್ನೇಹಿತರಾದ ರಿತೇಶ್ ಜೋಶಿ ಜೊತೆ ಸೇರಿ ಬಂಡವಾಳವನ್ನೂ ಹೂಡಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಪಾತ್ರವನ್ನು ಕೂಡ ರವಿ ಅವರೇ ನಿಭಾಯಿಸಿದ್ದಾರೆ. ಅಂದಹಾಗೆ ಈಗ ಬಿಡುಗಡೆಗೆ ಸಿದ್ಧವಾಗಿರುವುದು ಮೊದಲ ಭಾಗ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಆ ಕುರಿತು ಮಾಹಿತಿ ಹಂಚಿಕೊಂಡಿದೆ ‘ಈ ಪಟ್ಟಣಕ್ಕೆ ಏನಾಗಿದೆ ಭಾಗ 1’ ಸಿನಿಮಾ ತಂಡ.

ಇದನ್ನೂ ಓದಿ: OTT Censorship: ಒಟಿಟಿ ಸೆನ್ಸಾರ್​ಶಿಪ್​ ಬಗ್ಗೆ ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್​

ರವಿ ಸುಬ್ಬರಾವ್ ಅವರು ತಮ್ಮ ರಿಯಲ್​ ಲೈಫ್​ನಲ್ಲಿ ನೋಡಿದ ಅನೇಕ ಘಟನೆಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ‘ಈ ಪಟ್ಟಣಕ್ಕೆ ಏನಾಗಿದೆ’ ಎಂಬ ಶೀರ್ಷಿಕೆ ಕೂಡ ಡಿಫರೆಂಟ್​ ಆಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ರಾಧಿಕಾ ರಾಮ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರ ತುಂಬ ಬೋಲ್ಡ್​ ಆಗಿದೆ. ಅನಿಲ್ ಸಿ.ಜೆ. ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

‘ಜೂಜು ಹಾಗೂ ಬೆಟ್ಟಿಂಗ್ ಮಾಫಿಯಾ ಕುರಿತು ಕಥೆ ಹೆಣೆಯಲಾಗಿದೆ. ಈ ಮಾಫಿಯಾದ ಮೂಲಕ ನಾಯಕನು ಯುವಜನರನ್ನು ಮೋಸದ ಬಲೆಗೆ ಬೀಳಿಸುತ್ತಾನೆ. ಈ ಕಾಲದ ಹುಡುಗರು ಮನೆಯಲ್ಲಿರುವ ರೀತಿಯೇ ಬೇರೆ. ಹೊರಗಡೆ ವರ್ತಿಸುವ ರೀತಿಯೇ ಬೇರೆ. ಅದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ಹೇಳಿಕೊಂಡಿದೆ ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರತಂಡ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.