ಈ ಶರೀರ ಯಾಕೆ ಹಿಂಗೆ…ಮಾದಕ ಗೀತೆಯೊಂದಿಗೆ ಪಡ್ಡೆ ಹೈಕ್ಳ ನಿದ್ದೆ ಕದ್ದ ಕ್ರೇಜಿ ಸ್ಟಾರ್

Ravi Bopanna Movie Song: ರವಿಚಂದ್ರನ್ ನಿವೃತ್ತ ಕಾನ್ಸ್​ಟೇಬಲ್​ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಿಚ್ಚ ಸುದೀಪ್ ಲಾಯರ್ ರೋಲ್​ನಲ್ಲಿ ಕ್ಲೈಮ್ಯಾಕ್ಸ್​ ವೇಳೆ ಕರಿಕೋಟಿನಲ್ಲಿ ಎಂಟ್ರಿ ಕೊಡಲಿದ್ದಾರೆ.

ಈ ಶರೀರ ಯಾಕೆ ಹಿಂಗೆ...ಮಾದಕ ಗೀತೆಯೊಂದಿಗೆ ಪಡ್ಡೆ ಹೈಕ್ಳ ನಿದ್ದೆ ಕದ್ದ ಕ್ರೇಜಿ ಸ್ಟಾರ್
Ravi Bopanna
TV9kannada Web Team

| Edited By: Zahir PY

Aug 06, 2022 | 6:04 PM

ಸ್ಯಾಂಡಲ್​ವುಡ್ (Sandalwood)​ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅಭಿನಯದ ರವಿ ಬೋಪಣ್ಣ (Ravi Bopanna) ಚಿತ್ರದ ಹಾಡಿನ ಝಲಕ್ ಬಿಡುಗಡೆಯಾಗಿದೆ. ಈ ಶರೀರ ಯಾಕೆ ಹಿಂಗೆ…ಎಂಬ ಸಾಹಿತ್ಯ ಹೊಂದಿರುವ ಈ ಗೀತೆಯ ಹೆಣ್ಣಿನ ಮೈಮಾಟವನ್ನು ವರ್ಣಿಸುವ ಪ್ರಯತ್ನ ಮಾಡಿದ್ದಾರೆ ಕ್ರೇಜಿ ಸ್ಟಾರ್​.

ಈ ಹಾಡಿನಲ್ಲಿ ಮೈ ಚಳಿ ಬಿಟ್ಟು ಕಾವ್ಯ ಶೆಟ್ಟಿ ಕಾಣಿಸಿಕೊಂಡಿದ್ದು, ನಟಿಯ ಮಾದಕತೆಗೆ ಪಡ್ಡೆ ಹುಡುಗರು ಫಿದಾ ಆಗುವುದಂತು ಗ್ಯಾರೆಂಟಿ ಎನ್ನಬಹುದು. ಈಗಾಗಲೇ ಟ್ರೇಲರ್ ಮೂಲಕ ಭಾರೀ ಕುತೂಹಲ ಮೂಡಿಸಿರುವ ರವಿ ಬೋಪಣ್ಣ ಚಿತ್ರವು ಇದೇ ತಿಂಗಳು 12 ರಂದು ತೆರೆಕಾಣಲಿದೆ. ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಕೂಡ ಎಂಟ್ರಿ ಕೊಡಲಿದ್ದಾರೆ.
ಮಾಣಿಕ್ಯ ಮತ್ತು ಹೆಬ್ಬುಲಿಯಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ಮಿಂಚಿದ್ದ ಕಿಚ್ಚ-ಕ್ರೇಜಿ ಜೋಡಿ ರವಿ ಬೋಪಣ್ಣ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಇಲ್ಲಿ ರವಿಚಂದ್ರನ್ ನಿವೃತ್ತ ಕಾನ್ಸ್​ಟೇಬಲ್​ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಿಚ್ಚ ಸುದೀಪ್ ಲಾಯರ್ ರೋಲ್​ನಲ್ಲಿ ಕ್ಲೈಮ್ಯಾಕ್ಸ್​ ವೇಳೆ ಕರಿಕೋಟಿನಲ್ಲಿ ಎಂಟ್ರಿ ಕೊಡಲಿದ್ದಾರೆ. ರವಿಚಂದ್ರನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ದೇಹಾಂಗಗಳ​ ಮಾಫಿಯಾ ಜಾಲದ ಸುತ್ತ ಹೆಣೆಯಲಾಗಿರುವ ಕಥಾಹಂದರ ಹೊಂದಿದೆ. ಈ ಸಿನಿಮಾವು ಮಲಯಾಳಂನಲ್ಲಿ ಸೂಪರ್ ಡೂಪರ್ ಆಗಿದ್ದ ‘ಜೋಸೆಫ್’ ಚಿತ್ರದ ರಿಮೇಕ್ ಎಂಬುದು ವಿಶೇಷ.

ಈ ಹಿಂದೆ ಮಲಯಾಳಂನಲ್ಲಿ ಸೂಪರ್ ಹಿಟ್​ ಆಗಿದ್ದ ದೃಶ್ಯಂ ಚಿತ್ರದ ರಿಮೇಕ್​ನಲ್ಲಿ ರವಿಚಂದ್ರನ್ ನಟಿಸಿದ್ದರು. ಆ ಸಿನಿಮಾ ಸ್ಯಾಂಡ್​ವುಡ್ ಬಾಕ್ಸಾಫೀಸ್​ನಲ್ಲೂ ಸೌಂಡ್ ಮಾಡಿತ್ತು. ಇದೀಗ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಿಗೆ ಕ್ರೇಜಿಸ್ಟಾರ್ ಪ್ರೇಕ್ಷಕರ ಮುಂದೆ ಬರಲು ಹಣಿಯಾಗಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಅಲ್ಲದೆ, ರಚಿತಾ ರಾಮ್, ಜೈ ಜಗದೀಶ್, ರಮ್ಯಾ ಕೃಷ್ಣನ್, ರವಿಶಂಕರ್ ಗೌಡ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಬಣ್ಣ ಹಚ್ಚಿದ್ದಾರೆ.

 

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada