AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯಾ’; ವಿವಾದದ ಮಧ್ಯೆ ಧನಂಜಯ್ ಬೆಂಬಲಕ್ಕೆ ನಿಂತ ಫ್ಯಾನ್ಸ್

ಧನಂಜಯ್ ಅವರು ತುಂಬಾನೇ ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಐಟಿ ಕೆಲಸ ಬಿಟ್ಟು ಸಿನಿಮಾ ರಂಗಕ್ಕೆ ಬಂದರು. ಹಲವು ವರ್ಷಗಳ ಕಾಲ ಯಶಸ್ಸಿಗಾಗಿ ಕಾದರು. ಹಲವು ಅವಮಾನಗಳನ್ನು ಎದುರಿಸಿದರು.

‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯಾ’; ವಿವಾದದ ಮಧ್ಯೆ ಧನಂಜಯ್ ಬೆಂಬಲಕ್ಕೆ ನಿಂತ ಫ್ಯಾನ್ಸ್
ಧನಂಜಯ್
TV9 Web
| Edited By: |

Updated on:Oct 27, 2022 | 12:11 PM

Share

ಧನಂಜಯ್ ನಟನೆಯ ‘ಹೆಡ್ ಬುಷ್’ (Head Bush) ಸಿನಿಮಾ ಈಗ ವಿವಾದದ ಕೇಂದ್ರ ಬಿಂದು ಆಗಿದೆ. ಅನೇಕರು ಸಿನಿಮಾ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಈ ಚಿತ್ರದಲ್ಲಿ ವೀರಗಾಸೆಗೆ ಅವಮಾನ ಆಗಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. ‘ಚಿತ್ರದಲ್ಲಿ ಆ ರೀತಿ ಇಲ್ಲ. ಸರಿಯಾಗಿ ಚಿತ್ರ ನೋಡಿ ನಿರ್ಧಾರಕ್ಕೆ ಬನ್ನಿ’ ಎಂದು ಧನಂಜಯ್ (Dhananjay) ಅವರು ಕೋರಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈಗ ಅನೇಕರು ಧನಂಜಯ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಧನಂಜಯ್ ಪರ ಟ್ವೀಟ್ ಮಾಡಲಾಗುತ್ತಿದೆ.

ಧನಂಜಯ್ ಅವರು ತುಂಬಾನೇ ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಐಟಿ ಕೆಲಸ ಬಿಟ್ಟು ಸಿನಿಮಾ ರಂಗಕ್ಕೆ ಬಂದರು. ಹಲವು ವರ್ಷಗಳ ಕಾಲ ಯಶಸ್ಸಿಗಾಗಿ ಕಾದರು. ಹಲವು ಅವಮಾನಗಳನ್ನು ಎದುರಿಸಿದರು. ‘ಟಗರು’ ಸಿನಿಮಾ ಧನಂಜಯ್​ಗೆ ದೊಡ್ಡ ಯಶಸ್ಸು ನೀಡಿತು. ಆ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ಹಲವು ಹಿಟ್​ ಚಿತ್ರಗಳನ್ನು ನೀಡಿದರು. ವಿಲನ್, ಪೊಲೀಸ್, ಹೀರೋ ಪಾತ್ರಗಳ ಮೂಲಕ ಗಮನ ಸೆಳೆದರು. ‘ಬಡವ ರಾಸ್ಕಲ್​’ ಚಿತ್ರದ ಮೂಲಕ ನಿರ್ಮಾಪಕನಾಗಿ ಮೊದಲ ಪ್ರಯತ್ನದಲ್ಲೇ ಗೆದ್ದರು. ಈಗ ಅವರ ನಿರ್ಮಾಣದ ಎರಡನೇ ಸಿನಿಮಾ ‘ಹೆಡ್ ಬುಷ್’ ವಿವಾದ ಸೃಷ್ಟಿಸಿದೆ.

ಧನಂಜಯ್ ಅವರು ಸದಾ ವಿವಾದದಿಂದ ದೂರ ಇರೋಕೆ ಬಯಸುತ್ತಾರೆ. ಈಗ ‘ಹೆಡ್ ಬುಷ್’ ಚಿತ್ರ ವಿವಾದಕ್ಕೆ ತುತ್ತಾಗಿರುವುದರಿಂದ ಅವರು ಕೂಡ ವಿವಾದದ ಭಾಗವಾಗಿದ್ದಾರೆ. ಅವರು ಹಲವು ಕಡೆಗಳಲ್ಲಿ ಸ್ಪಷ್ಟನೆ ನೀಡಿದರೂ ಈ ಸಿನಿಮಾ ವಿರುದ್ಧ, ತಂಡದ ವಿರುದ್ಧ ಅನೇಕರು ಧ್ವನಿ ಎತ್ತುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಇದು ಧನಂಜಯ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಧನಂಜಯ್ ಅವರ ಸಿನಿಮಾದಲ್ಲಿ ಬರುವ ‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯ’ ಎಂಬ ಡೈಲಾಗ್​​ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಇನ್ಮುಂದೆ ಯೋಚಿಸಿ ಸಿನಿಮಾ ಮಾಡ್ತೀನಿ’; ಡಾಲಿ ಧನಂಜಯ್​ ಹೀಗೆ ಹೇಳಿದ್ದೇಕೆ?

ಧನಂಜಯ್ ಅವರಿಗೆ ಕನ್ನಡ ನಾಡು, ನುಡಿಯ ಬಗ್ಗೆ ವಿಶೇಷ ಪ್ರೀತಿ ಹಾಗೂ ಗೌರವ ಇದೆ. ಇದನ್ನು ಅನೇಕರು ನೆನಪಿಸಿಕೊಂಡಿದ್ದಾರೆ. ‘ಧನಂಜಯ್ ಅವರು ಕನ್ನಡದ ಬಗ್ಗೆ ವಿಶೇಷ ಗೌರವ ಇಟ್ಟುಕೊಂಡಿದ್ದಾರೆ. ಅನೇಕರಿಗೆ ಈ ಪ್ರೀತಿ ಇಲ್ಲ. ಸಾಕಷ್ಟು ಕಷ್ಟಪಟ್ಟು ಅವರು ಬೆಳೆದಿದ್ದಾರೆ. ಸಿನಿಮಾ ನೋಡದೇ ಸುಖಾಸುಮ್ಮನೆ ಈ ರೀತಿ ಕೊಂಕು ತೆಗೆಯೋದು ಸರಿ ಅಲ್ಲ’ ಎಂದು ಕೆಲವರು ವಾದ ಮುಂದಿಟ್ಟಿದ್ದಾರೆ. ಇನ್ನೂ ಕೆಲವರು ‘ಹೆಡ್​ ಬುಷ್​’ ಟಿಕೆಟ್ ಬುಕ್ ಮಾಡಿ ಸಿನಿಪ್ರಿಯರಿಗೆ ಉಚಿತವಾಗಿ ಹಂಚುವ ಕೆಲಸ ಮಾಡುತ್ತಿದ್ದಾರೆ.

Published On - 12:10 pm, Thu, 27 October 22

Follow Us
TV9 Web
TV9 Web

TV9 Kannada

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್