ಪೊಲೀಸರ ಕೈಗೆ ಸಿಗದ ಗುರು ದೇಶಪಾಂಡೆ; ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರದ ಭರವಸೆ

| Updated By: ಮದನ್​ ಕುಮಾರ್​

Updated on: Aug 10, 2021 | 2:23 PM

Fighter Vivek Death: ಸದ್ಯ ಗುರು ದೇಶಪಾಂಡೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅದರ ನಡುವೆಯೇ ಸ್ನೇಹಿತರೊಬ್ಬರ ಮೂಲಕ ಕಾನ್ಫರೆನ್ಸ್​ ಕಾಲ್​ ಮಾಡಿರುವ ಅವರು ವಿವೇಕ್​ ಕುಟುಂಬದವರ ಜೊತೆಗೆ ಮಾತನಾಡಿದ್ದಾರೆ.

ಪೊಲೀಸರ ಕೈಗೆ ಸಿಗದ ಗುರು ದೇಶಪಾಂಡೆ; ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರದ ಭರವಸೆ
ನಿರ್ಮಾಪಕ ಗುರು ದೇಶಪಾಂಡೆ, ಮೃತ ಫೈಟರ್​ ವಿವೇಕ್​
Follow us on

ಅಜಯ್​ ರಾವ್ (Ajay Rao)​ ಮತ್ತು ರಚಿತಾ ರಾಮ್ (Rachita Ram)​ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದ ‘ಲವ್​ ಯೂ ರಚ್ಚು’ (Love You Racchu) ಸಿನಿಮಾ ಶೂಟಿಂಗ್​ ವೇಳೆ ಫೈಟರ್​ ವಿವೇಕ್​ (Fighter Vivek) ಮೃತಪಟ್ಟ ಬಳಿಕ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ (Guru Deshpande) ಪರಾರಿ ಆಗಿದ್ದಾರೆ. ಪ್ರಕರಣದಲ್ಲಿ ಅವರನ್ನು 2ನೇ ಆರೋಪಿ ಎಂದು ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ. ಗುರು ದೇಶಪಾಂಡೆಗಾಗಿ ಶೋಧ ನಡೆಸಲಾಗುತ್ತಿದೆ. ಸದ್ಯ ಯಾರಿಗೂ ಕಾಣಿಸಿಕೊಳ್ಳದ ಅವರು ವಿವೇಕ್​ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ವಿವೇಕ್ ಸಂಬಂಧಿಕರು ಹೇಳಿಕೆ ನೀಡಿದ್ದಾರೆ.

ರಾಮನಗರ ತಾಲೂಕಿನ ಜೋಗನಪಾಳ್ಯದ ಬಳಿ ಸೋಮವಾರ (ಆ.9) ಈ ಅವಘಡ ಸಂಭವಿಸಿತ್ತು. ಘಟನೆ ಬಳಿಕ ನಿರ್ಮಾಪಕ ಗುರು ದೇಶಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಪರಾರಿ ಆಗಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಗುರು ದೇಶಪಾಂಡೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅದರ ನಡುವೆಯೇ ಸ್ನೇಹಿತರೊಬ್ಬರ ಮೂಲಕ ಕಾನ್ಫರೆನ್ಸ್​ ಕಾಲ್​ ಮಾಡಿರುವ ಅವರು ವಿವೇಕ್​ ಕುಟುಂಬದವರ ಜೊತೆಗೆ ಮಾತನಾಡಿದ್ದಾರೆ. ಕುಟುಂಬವರಿಗೆ 10 ಲಕ್ಷ ರೂ. ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಫೈಟರ್​ ರಂಜಿತ್​ ಅವರಿಗೆ ರಾಜರಾಜೇಶ್ವರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಬಳಿ ಚಿತ್ರತಂಡದ ಯಾರೂ ಸುಳಿದಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಅದಕ್ಕೆ ಅಜಯ್​ ರಾವ್​ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಬರಬೇಕಿತ್ತು ಎಂದು ಭಾವುಕನಾಗಿ ರಂಜಿತ್​ ನಿರೀಕ್ಷಿಸಿದ್ದರಲ್ಲಿ ತಪ್ಪಿಲ್ಲ. ರಂಜಿತ್​ ಅವರನ್ನು ಭೇಟಿ ಮಾಡೋಕೆ ನಾನು ಆಸ್ಪತ್ರೆಗೆ ಹೋಗಿದ್ದೆ. ಆದರೆ ಅಲ್ಲಿ ನಮ್ಮನ್ನು ಐಯುಸಿ ಒಳಗೆ ಬಿಡಲಿಲ್ಲ. ನಿನ್ನೆಯಿಂದಲೂ ನಾನು ಎಲ್ಲರಿಗೂ ಉತ್ತರ ನೀಡುತ್ತಿದ್ದೇನೆ. ಮೃತ ವಿವೇಕ್ ಅವರ​ ಚಿಕ್ಕಪ್ಪನ ಬಳಿಕ ನಾನು ಮಾತನಾಡಿದ್ದೇನೆ. ಅವರ ಜೊತೆಗೆ ನಾನಿದ್ದೇನೆ’ ಎಂದು ಅಜಯ್​ ರಾವ್​ ಹೇಳಿದ್ದಾರೆ.

ಘಟನೆ ನಡೆದು ಒಂದು ದಿನ ಕಳೆದ ಬಳಿಕ ರಚಿತಾ ರಾಮ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿವೇಕ್​ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ‘ವಿದ್ಯುತ್​ ಅವಘಡದಿಂದ ಸಾವನ್ನಪಿದ ಫೈಟರ್​ ವಿವೇಕ್​ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ’ ಎಂದು ರಚಿತಾ ಪೋಸ್ಟ್​ ಮಾಡಿದ್ದಾರೆ. ಆದರೆ ಇಷ್ಟು ಮಾತ್ರದಿಂದ ಜನರು ಸಮಾಧಾನ ಆಗಿಲ್ಲ. ಮೃತ ವಿವೇಕ್​ ಕುಟುಂಬಕ್ಕೆ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರಂಜಿತ್​ ಅವರಿಗೆ ಹಣದ ಸಹಾಯ ಮಾಡಿ ಎಂದು ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್​ಗೆ ನ್ಯಾಯ ಸಿಗುವವರೆಗೆ ಶೂಟಿಂಗ್​ಗೆ​ ಬರಲ್ಲ’; ಅಜಯ್​ ರಾವ್

Fighter Vivek Death: ‘ಲವ್​ ಯೂ ರಚ್ಚು’ ಚಿತ್ರದ ನಿರ್ದೇಶಕ ಸೇರಿದಂತೆ ಮೂವರಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ