ಫಿಲಂಫೇರ್: ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ, ಸಿರಿ ಅತ್ಯುತ್ತಮ ನಟಿ, ‘ಡಿಡಿಎಂ’ ಅತ್ಯುತ್ತಮ ಸಿನಿಮಾ
Filmfare South Awards 2024: ಫಿಲಂಫೇರ್ ದಕ್ಷಿಣ ಅವಾರ್ಡ್ಸ್ 2024, ಪ್ರಶಸ್ತಿಗಳ ಪಡೆದ ಕನ್ನಡದ ನಟ, ನಟಿಯರು ಮತ್ತು ತಂತ್ರಜ್ಞರ ಪಟ್ಟಿ ಇಲ್ಲಿದೆ.
ಫಿಲಂಫೇರ್ ದಕ್ಷಿಣ 2024 (Filmfare South 2024) ಪ್ರಶಸ್ತಿ ವಿತರಣೆ ಸಮಾರಂಭ ನಿನ್ನೆ (ಆಗಸ್ಟ್ 03) ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ನಡೆದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. ನೆರೆಯ ಚಿತ್ರರಂಗದ ಸ್ಟಾರ್ ನಟರುಗಳಾದ ಮಮ್ಮುಟಿ, ವಿಕ್ರಂ, ಬ್ರಹ್ಮಾನಂದಂ, ಸಿದ್ಧಾರ್ಥ್, ನಟಿ ಕೀರ್ತಿ ಸುರೇಶ್ ಇನ್ನೂ ಹಲವಾರು ಮಂದಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದರು. ಕನ್ನಡದ ಯಾವ ಸಿನಿಮಾಗಳಿಗೆ, ತಂತ್ರಜ್ಞರಿಗೆ ಪ್ರಶಸ್ತಿ ಬಂತು? ಇಲ್ಲಿದೆ ಪಟ್ಟಿ…
ಅತ್ಯುತ್ತಮ ಸಿನಿಮಾ: ಡೇರ್ಡೆವಿಲ್ ಮುಸ್ತಫಾ
ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)
ಅತ್ಯುತ್ತಮ ನಟಿ: ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ)
ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ಪಿಂಕಿ ಎಲ್ಲಿ?
ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಮೈಸೂರು ಪೂರ್ಣ (ಆರ್ಕೆಸ್ಟ್ರಾ ಮೈಸೂರು)
ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ಟಗರು ಪಲ್ಯ)
ಅತ್ಯುತ್ತಮ ಪೋಷಕ ನಟಿ: ಸುಧಾ ಬೆಳವಾಡಿ (ಕೌಸಲ್ಯ ಸುಪ್ರಜಾ ರಾಮ)
ಅತ್ಯುತ್ತಮ ಹೊಸ ನಟ: ಶಿಶಿರ್ ಬೈಕಾಡಿ (ಡೇರ್ಡೆವಿಲ್ ಮುಸ್ತಫ)
ಅತ್ಯುತ್ತಮ ಹೊಸ ನಟಿ: ಅಮೃತಾ ಪ್ರೇಮ್ (ಟಗರು ಪಲ್ಯ)
ಅತ್ಯುತ್ತಮ ಹಾಡುಗಳು: ಚರಣ್ ರಾಜ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಸಾಹಿತ್ಯ: ಬಿಆರ್ ಲಕ್ಷ್ಮಣರಾವ್ (ಯಾವ ಚುಂಬಕ, ಚೌಕಬಾರ)
ಅತ್ಯುತ್ತಮ ಗಾಯಕ: ಕಪಿಲ್ ಕಪಿಲನ್ (ನದಿಯೇ: ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಗಾಯಕಿ: ಶ್ರೀಲಕ್ಷ್ಮಿ ಬೆಲಮಣ್ಣು (ಕಡಲನು ಕಾಣ ಹೊರಟ: ಸಪ್ತ ಸಾಗರದಾಚೆ ಎಲ್ಲೊ)
ಜೀವಮಾನ ಸಾಧನೆ: ಹಿರಿಯ ನಟ ಶ್ರೀನಾಥ್
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ