SIIMA: ಮಧ್ಯರಾತ್ರಿ 3 ಗಂಟೆವರೆಗೆ ‘ಸೈಮಾ’ ಪಾರ್ಟಿ ಮಾಡಿದ ಸೆಲೆಬ್ರಿಟಿಗಳು; ಎಫ್​ಐಆರ್​ ದಾಖಲು

| Updated By: ಮದನ್​ ಕುಮಾರ್​

Updated on: Sep 21, 2022 | 8:16 AM

SIIMA Awards | FIR: ರಾತ್ರಿ ಒಂದು ಗಂಟೆಗೆ ಪಾರ್ಟಿ ಮುಗಿಸುವಂತೆ ಆಯೋಜಕರಿಗೆ ಪೊಲೀಸರು ಸೂಚನೆ ನೀಡಿದರು. ಆದರೆ ಅದನ್ನು ಪಾಲಿಸದೇ 3.30ರವರೆಗೂ ‘ಸೈಮಾ’ ಪಾರ್ಟಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

SIIMA: ಮಧ್ಯರಾತ್ರಿ 3 ಗಂಟೆವರೆಗೆ ‘ಸೈಮಾ’ ಪಾರ್ಟಿ ಮಾಡಿದ ಸೆಲೆಬ್ರಿಟಿಗಳು; ಎಫ್​ಐಆರ್​ ದಾಖಲು
ಸೈಮಾ
Follow us on

ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ‘ಸೈಮಾ’ ಅವಾರ್ಡ್ಸ್​ (SIIMA Awards 2022) ಕಾರ್ಯಕ್ರಮ ನಡೆಯಿತು. 10ನೇ ವರ್ಷದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಗೊಂಡಿದ್ದು ವಿಶೇಷ. ಆದರೆ ಈ ಕಾರ್ಯಕ್ರಮದ ಬಳಿಕ ಪ್ರತಿಷ್ಠಿತ ಸ್ಟಾರ್​ ಹೋಟೆಲ್​ನಲ್ಲಿ ಪಾರ್ಟಿ (SIIMA Awards Party) ಮಾಡಿದ ಅನೇಕ ಸೆಲೆಬ್ರಿಟಿಗಳಿಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ. ಸೂಕ್ತ ನಿಯಮಗಳನ್ನು ಪಾಲಿಸದೇ ಪಾರ್ಟಿ ನಡೆದಿದೆ ಎಂಬ ಆರೋಪ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಬ್ಬನ್​ ಪಾರ್ಕ್​ ಪೊಲೀಸ್ ಠಾಣೆಯಲ್ಲಿ (Cubbon Park Police Station) ಕೇಸ್​ ದಾಖಲಾಗಿದೆ. ಪಾರ್ಟಿ ಆಯೋಜಕರು ಮತ್ತು ಹೋಟೆಲ್​ ಮ್ಯಾನೇಜರ್​ಗೆ ನೋಟಿಸ್​ ನೀಡಲಾಗಿದೆ. ಆ ಮೂಲಕ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಚಿತ್ರರಂಗದ ಎಂದರೆ ಬಣ್ಣದ ಲೋಕ. ಅಲ್ಲಿ, ಪಾರ್ಟಿಗಳು ಸಹಜ. ಝಗಮಗಿಸುವ ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಔತಣ ಕೂಟಗಳು ನಡೆಯುತ್ತವೆ. ‘ಸೈಮಾ’ ಸಮಾರಂಭ ಮುಗಿದ ನಂತರವೂ ಈ ರೀತಿ ಪಾರ್ಟಿ ಆಯೋಜನೆಗೊಂಡಿತ್ತು. ಅದರಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ತಂತ್ರಜ್ಞರು ಮಾತ್ರವಲ್ಲದೇ ಹಿಂದಿ ಮತ್ತು ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಭಾಗಿ ಆಗಿದ್ದರು.

ನಸುಕಿನವರೆಗೂ ನಡೆದಿತ್ತು ‘ಸೈಮಾ’ ಪಾರ್ಟಿ:

ಇದನ್ನೂ ಓದಿ
‘ಬೆಸ್ಟ್​ ಕನ್ನಡ ಡೈರೆಕ್ಟರ್​ ಅನ್ನೋದು ಬೇಡ’: ಹೊಸ ಸಲಹೆ ನೀಡಿದ ‘ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ
Ranveer Singh: ಸೈಮಾದಲ್ಲಿ ರಣವೀರ್​ ಸಿಂಗ್​ ಝಗಮಗ ಡ್ಯಾನ್ಸ್​; ಹೇಗಿತ್ತು ನೋಡಿ ಜೋಶ್​
SIIMA Awards: ಸೈಮಾ ಸಂಭ್ರಮದಲ್ಲಿ ತಾರೆಯರ ಸಂಗಮ; ಅದ್ದೂರಿ ಸಮಾರಂಭದ ವಿಡಿಯೋ ನೋಡಿ..
ಸೈಮಾ-2022 ಅವಾರ್ಡ್: ಪುನೀತ್​ ರಾಜ್​ಕುಮಾರ್​​ಗೆ ಅತ್ಯುತ್ತಮ ನಟ ಪ್ರಶಸ್ತಿ; ಪೂರ್ತಿ ವಿವರ ಇಲ್ಲಿದೆ

ಬೆಂಗಳೂರಿನ ವಿಠಲ್​ ಮಲ್ಯ ರಸ್ತೆಯಲ್ಲಿ ಇರುವ ಐಷಾರಾಮಿ ಹೋಟೆಲ್​ನಲ್ಲಿ ಸೆಪ್ಟೆಂಬರ್​ 12ರಂದು ‘ಸೈಮಾ’ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ಕಾನೂನು ಪಾಲನೆಯ ಪರಿಶೀಲನೆಗಾಗಿ ಪೊಲೀಸರು ರಾತ್ರಿ 12 ಗಂಟೆ ಸಮಯದಲ್ಲಿ ಹೋಟೆಲ್​ಗೆ ಭೇಟಿ ನೀಡಿದ್ದರು. ಒಂದು ಗಂಟೆಗೆ ಪಾರ್ಟಿ ಮುಗಿಸುವಂತೆ ಆಯೋಜಕರಿಗೆ ಪೊಲೀಸರು ಸೂಚನೆ ನೀಡಿದರು. ಆದರೆ ಅದನ್ನು ಪಾಲಿಸದೇ ನಸುಕಿನ 3.30ರವರೆಗೂ ಪಾರ್ಟಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅದ್ದೂರಿ ಸೈಮಾ ಸಮಾರಂಭ:

ಚಿತ್ರರಂಗದಲ್ಲಿ ಸೈಮಾ ಅವಾರ್ಡ್ಸ್​ಗೆ ಮನ್ನಣೆ ಇದೆ. ಕಳೆದ 10 ವರ್ಷಗಳಿಂದ ಬಹಳ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇಷ್ಟು ವರ್ಷ ಹೊರರಾಜ್ಯದಲ್ಲಿ ಹಾಗೂ ವಿದೇಶದಲ್ಲಿ ಈ ಸಮಾರಂಭ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೈಮಾ ಕಾರ್ಯಕ್ರಮ ನಡೆಯಿತು. ಆದರೆ ಕಾರ್ಯಕ್ರಮದ ನಂತರ ಜರುಗಿದ ಪಾರ್ಟಿಯಲ್ಲಿ ನಿಯಮ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಕಾನೂನಿನ ಸಂಕಷ್ಟ ಎದುರಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:14 am, Wed, 21 September 22