ಯಶ್-ರಾಧಿಕಾ ಸುಂದರ ಫೋಟೋಗಳಲ್ಲಿದೆ ನಿರ್ದೇಶಕ ನಾಗರಾಜ್ ಸೋಮಯಾಜಿ ಫೋಕಸ್
Yash Radhika Pandit Photos: ನಾಗರಾಜ್ ಸೋಮಯಾಜಿ ಅವರ ಫೋಟೋಗ್ರಫಿ ತಂಡ ಕ್ಲಿಕ್ಕಿಸಿದ ಫೋಟೋಗಳೆಂದರೆ ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚು. ಈಗ ಈ ತಂಡ 7 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿದೆ.
Updated on: Sep 22, 2022 | 7:30 AM

Yash and Radhika Pandit family photos clicked by Nagaraj Somayaji team

Yash and Radhika Pandit family photos clicked by Nagaraj Somayaji team

ರಮೇಶ್ ಅರವಿಂದ್ ಅವರ ಪರ್ಸನಲ್ ಫೋಟೋಶೂಟ್, ಅವರ ಮಗಳ ರಿಸೆಪ್ಷನ್, ಯಶ್-ರಾಧಿಕಾ ಫ್ಯಾಮಿಲಿ ಕಾರ್ಯಕ್ರಮದ ಫೋಟೋಗಳು, ನಿಖಿಲ್ ಕುಮಾರಸ್ವಾಮಿ ಎಂಗೇಜ್ಮೆಂಟ್, ಶ್ರೀರಾಮುಲು ಮಗಳ ಎಂಗೇಜ್ಮೆಂಟ್, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಹಲವು ಇವೆಂಟ್ ಸೇರಿ ಅನೇಕ ಸುಂದರ ಕ್ಷಣಗಳನ್ನು ಈ ತಂಡ ಸೆರೆ ಹಿಡಿದಿದೆ.

ನಾಗರಾಜ್ ಸೋಮಯಾಜಿ ಅವರ ಈ ಫೋಟೋಗ್ರಫಿ ತಂಡಕ್ಕೆ ಈಗ 7 ವರ್ಷಗಳನ್ನು ಪೂರೈಸಿದ ಖುಷಿ ಇದೆ. ‘ಸಂಚಾರಿ' ರಂಗಭೂಮಿಯಿಂದ ಬಂದು, ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತ, ಫೋಟೋಗ್ರಫಿಯಲ್ಲೂ ಅವರು ಒಂದೊಂದೇ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದಾರೆ.

‘ನಮ್ಮ ತಂಡ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದೆ. ನಮ್ಮ ಕೆಲಸವನ್ನು ನೋಡಿ ಡಿಮ್ಯಾಂಡ್ ಹೆಚ್ಚಿದೆ. ಇದು ತುಂಬ ಖುಷಿಯ ಸಂಗತಿ’ ಎಂದು ನಾಗರಾಜ್ ಸೋಮಯಾಜಿ ಹೇಳಿದ್ದಾರೆ. ಅವರ ತಂಡ ಕ್ಲಿಕ್ಕಿಸಿದ ಫೋಟೋಗಳಿಗೆ ಅಭಿಮಾನಿಗಳಿಂದ ಮತ್ತು ಸೆಲೆಬ್ರಿಟಿಗಳಿಂದ ಸಾಕಷ್ಟು ಮೆಚ್ಚುಗೆ ಸಿಗುತ್ತಿದೆ.
























