ಅಕ್ರಮ ಚಿನ್ನ ಸಾಗಣೆ ಕೇಸ್: ನಟಿ ರನ್ಯಾ ರಾವ್​ಗೆ 102.55 ಕೋಟಿ ರೂಪಾಯಿ ದಂಡ

ಕನ್ನಡದ ನಟಿ ರನ್ಯಾ ರಾವ್ ಅವರು ಅಕ್ರಮವಾಗಿ 127.3 ಕೆಜಿ ಚಿನ್ನ ಸಾಗಾಟ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಹಾಗಾಗಿ ಅವರಿಂದ ದಂಡ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಅವರಿಗೆ ನೋಟಿಸ್ ನೀಡಲಾಗಿದೆ. ಬರೋಬ್ಬರಿ 102.55 ಕೋಟಿ ರೂ. ದಂಡ ಪಾವತಿಸುವಂತೆ ರನ್ಯಾ ರಾವ್​​ಗೆ ಡಿಆರ್​ಐ ಸೂಚಿಸಿದೆ.

ಅಕ್ರಮ ಚಿನ್ನ ಸಾಗಣೆ ಕೇಸ್: ನಟಿ ರನ್ಯಾ ರಾವ್​ಗೆ 102.55 ಕೋಟಿ ರೂಪಾಯಿ ದಂಡ
Ranya Rao
Updated By: ಮದನ್​ ಕುಮಾರ್​

Updated on: Sep 02, 2025 | 4:10 PM

ನಟಿ ರನ್ಯಾ ರಾವ್ (Ranya Rao) ಅವರು ಅಕ್ರಮ ಚಿನ್ನ ಸಾಗಾಣಿಕೆ ಕೇಸ್​​ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ಅವರು ವಿದೇಶದಿಂದ ಅಕ್ರಮವಾಗಿ ಭಾರತಕ್ಕೆ ತಂದಿದ್ದರು. ಇದರ ತನಿಖೆ ನಡೆದಿದ್ದು, ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ (Gold Smuggling) ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ರನ್ಯಾ ರಾವ್​ಗೆ ಡಿಆರ್​ಐ (Directorate of Revenue Intelligence) ಶಾಕ್ ಕೊಟ್ಟಿದೆ. ಬರೋಬ್ಬರಿ 102.55 ಕೋಟಿ ರೂ. ದಂಡ ಪಾವತಿಸುವಂತೆ ಡಿಆರ್​ಐ ನೋಟಿಸ್ ನೀಡಿದೆ.

ಡಿಆರ್​ಐ ಅಧಿಕಾರಿಗಳು ಅಡ್ ಜುಡಿಕೇಷನ್ ಮಾಡಿ ನೋಟಿಸ್ ನೀಡಿದ್ದಾರೆ. ಮಾರ್ಚ್ 4ರಂದು ಗೋಲ್ಡ್ ಸೀಜ್ ಮಾಡಿ ರನ್ಯಾ ರಾವ್ ಅವರನ್ನು ಡಿಆರ್​ಐ ಬಂಧಿಸಿತ್ತು. ಕಳ್ಳಸಾಗಣೆ ವಸ್ತುಗಳನ್ನು 6 ತಿಂಗಳಲ್ಲಿ ಡಿಆರ್​ಐ ಅಧಿಕಾರಿಗಳು ವಸೂಲಿ ಮಾಡಬೇಕಿದೆ. ರನ್ಯಾ ರಾವ್ ಅವರು ಅಕ್ರಮವಾಗಿ 127.3 ಕೆಜಿ ಚಿನ್ನ ಸಾಗಾಟ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ.

102.55 ಕೋಟಿ ರೂ. ದಂಡ ಪಾವತಿಸುವಂತೆ DRIನಿಂದ ನೋಟಿಸ್ ಜಾರಿ ಆಗಿದೆ. ಇಂದು (ಸೆಪ್ಟೆಂಬರ್ 2) ಜೈಲಿಗೆ ತೆರಳಿ ರನ್ಯಾ ಸೇರಿ ನಾಲ್ವರೂ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ದಂಡ ಪಾವತಿ ಮಾಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶವಿದೆ. ಎ2 ಆರೋಪಿ ತರುಣ್ ಕೊಂಡುರು ರಾಜು 67.6 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವುದು ಧೃಡವಾಗಿದೆ.

ತರುಣ್ ಕೊಂಡುರು ರಾಜು ಗೆ 62 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಸಾಹಿಲ್ ಜೈಲ್ ಮತ್ತು ಭರತ್ ಜೈನ್ ತಲಾ 63.61 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವುದು ಧೃಡಪಟ್ಟಿದೆ. ಭರತ್ ಜೈನ್ ಹಾಗೂ ಸಾಹಿಲ್ ಜೈನ್ 53 ಕೋಟಿ ದಂಡ ಪಾವತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಜೊತೆಗೆ ಕ್ರಿಮಿನಲ್ ಕೇಸ್ ಕೂಡ ಮುಂದುವರಿಯುತ್ತೆ.

ಇದನ್ನೂ ಓದಿ: ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಪತ್ತೆ: ನಟಿ ರನ್ಯಾ ರಾವ್​ಗೆ ಸೇರಿದ ಕೋಟ್ಯಾಂತರ ರೂ. ಆಸ್ತಿ ಜಪ್ತಿ

ನೋಟಿಸ್ ಸೇರಿ 2,500 ಪುಟಗಳ ದಾಖಲೆಗಳನ್ನ ನೀಡಿಲಾಗಿದೆ. ಇಂದು ಹೈಕೋರ್ಟ್​​ನಲ್ಲಿ ಕಾಫಿಪೋಸಾ ಅರ್ಜಿ ಕೂಡ ವಿಚಾರಣೆ ಆಗಿದೆ. ಕಾಫಿಪೋಸಾ ಅರ್ಜಿಯನ್ನು ಸೆ.11ಕ್ಕೆ ಮುಂದೂಡಲಾಗಿದೆ. ಡಿಅರ್ಐ ಅಧಿಕಾರಿಗಳು ಅತ್ಯಂತ ತ್ವರಿತ ಗತಿಯಲ್ಲಿ ತ‌ನಿಖೆ ನಡೆಸಿ ರಿಕವರಿಗೆ ಮುಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.