ರನ್ಯಾ ರಾವ್ಗೆ ಒಂದು ವರ್ಷ ಜೈಲೇ ಗತಿ; ಜಾಮೀನಿನ ಮಾತೇ ಇಲ್ಲ
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ ಎನ್ನಲಾಗಿದೆ. ಕಠಿಣ ಕಾಯ್ದೆಯಾದ COFEPOSA ಅಡಿಯಲ್ಲಿ ದಾಖಲಾಗಿರುವ ಪ್ರಕರಣದಿಂದಾಗಿ ಅವರು ಒಂದು ವರ್ಷ ಜೈಲಿನಲ್ಲಿಯೇ ಇರಬೇಕಾಗಿದೆ. ಅವರು ವಿದೇಶದಿಂದ ಚಿನ್ನವನ್ನು ಸಾಗಾಟ ಮಾಡುತ್ತಿದ್ದರು ಮತ್ತು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಮಾರ್ಚ್ 3ರಂದು ನಟಿ ರನ್ಯಾ ರಾವ್ (Ranya Rao) ಅವರ ಬಂಧನ ಆಯಿತು. ಕಳೆದ ನಾಲ್ಕು ತಿಂಗಳಿಂದ ಅವರು ಜೈಲಿನಲ್ಲೇ ಇದ್ದಾರೆ. ಒಟ್ಟೂ ಒಂದು ವರ್ಷ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಹೇಗಾದರೂ ಮಾಡಿ ಜಾಮೀನು ಪಡೆದು ಹೊರಬರಬೇಕು ಎಂದುಕೊಂಡಿದ್ದ ಅವರಿಗೆ ಈ ವಿಚಾರ ತಿಳಿದು ಮತ್ತಷ್ಟು ಚಿಂತೆ ಉಂಟಾಗಿದೆ. ಹಾಗಾದರೆ ಅವರಿಗೆ ಜಾಮೀನು ಸಿಗದೇ ಇರಲು ಕಾರಣ ಎಂಬುದರ ವಿವರ ಇಲ್ಲಿದೆ.
ರನ್ಯಾ ರಾವ್ ಅವರು ವಿದೇಶದಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದರು. ಈ ರೀತಿಯಲ್ಲಿ ಅವರು ಈಗಾಗಲೇ ಸಾಕಷ್ಟು ವಂಚನೆ ಮಾಡಿದ್ದಾರೆ. ಇದಕ್ಕೆ ರನ್ಯಾ ಪೊಲೀಸ್ ವ್ಯವಸ್ಥೆಯನ್ನು ಕೂಡ ಬಳಕೆ ಮಾಡಿಕೊಂಡ ಆರೋಪ ಇದೆ. ಅವರ ಬಂಧನದ ಬಳಿಕ ಈ ಜಾಲದ ಉದ್ದ-ಅಗಲ ಗೊತ್ತಾಗಿದೆ. ಅವರು ಬಂಧನಕ್ಕೆ ಒಳಗಾದಾಗಿನಿಂದಲೂ ಜಾಮೀನು ಪಡೆಯುವ ಪ್ರಯತ್ನದಲ್ಲಿ ಇದ್ದರು. ಆದರೆ, ಒಂದು ವರ್ಷಗಳ ಕಾಲ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ.
ರನ್ಯಾ ರಾವ್ ಅವರನ್ನು ಬಂಧಿಸಿದ್ದು ಡಿಆರ್ಐ ಅಧಿಕಾರಿಗಳು. ರನ್ಯಾ ಹಾಗೂ ಅವರ ಸಹಚರರ ವಿರುದ್ಧ ಕಠಿಣವಾದ ‘ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ನಿಯಂತ್ರಣ ಕಾಯ್ದೆ’ ಕಾಫೆಪೊಸಾ (COFEPOSA) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇದೊಂದು ಕಠಿಣವಾದ ಕಾಯ್ದೆ ಆಗಿದೆ. ಈ ಕಾಯ್ದೆಯ ಅಡಿ ದೂರು ದಾಖಲಾದರೆ ಜಾಮೀನು ನೀಡಲಾಗುವುದಿಲ್ಲ. ಒಂದೊಮ್ಮೆ ಆರೋಪಿಗಳಿಗೆ ಬೇರೆ ಪ್ರಕರಣಗಳಲ್ಲಿ ಜಾಮೀನು ದೊರೆತರೂ ಸಹ ಅವರ ಬಿಡುಗಡೆ ಆಗುವುದಿಲ್ಲ.
ಇದನ್ನೂ ಓದಿ: ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಪತ್ತೆ: ನಟಿ ರನ್ಯಾ ರಾವ್ಗೆ ಸೇರಿದ ಕೋಟ್ಯಾಂತರ ರೂ. ಆಸ್ತಿ ಜಪ್ತಿ
ಹೀಗಾಗಿ, ರನ್ಯಾ ಜಾಮೀನಿಗೆ ಅರ್ಜಿ ಸಲ್ಲಿಸಬಾರದು ಎಂದು ಕಾಫೆಪೊಸಾ ಅಡ್ವೈಸರಿ ಬೋರ್ಡ್ನಿಂದ ಡಿಆರ್ಐಗೆ ಮಾಹಿತಿ ರವಾನೆ ಆಗಿದೆ. ಡಿಆರ್ಐಯಿಂದ ಜೈಲು ಅಧೀಕ್ಷಕರಿಗೆ ಮಾಹಿತಿ ಹೋಗಿದೆ. ಈ ಮೊದಲು ರನ್ಯಾ ರಾವ್ಗೆ ವಿಶೇಷ ನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು. ಆದರೆ, ಈ ವಿಶೇಷ ಕಾಯ್ದೆ ಅಡಿಯ್ಲ್ಲಿ ಕೇಸ್ ದಾಖಲಾಗಿದ್ದರಿಂದ ಅವರಿಗೆ ಜಾಮೀನು ಸಿಕ್ಕಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.