AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ್ ‘ಗೋಲ್ಡನ್ ಸ್ಟಾರ್’ ಆಗೋದಕ್ಕೂ ಮೊದಲಿನ ಜೀವನ ಹೇಗಿತ್ತು ನೋಡಿ..

Ganesh Birthday: ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು ತಮ್ಮ 47ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ‘ಕಾಮಿಡಿ ಟೈಮ್’ ಶೋ ಮತ್ತು ‘ಮುಂಗಾರು ಮಳೆ’ ಚಿತ್ರದಿಂದ ಅವರು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಯಶಸ್ಸಿನ ನಂತರ, ಅವರು ‘ಯುವರ್ ಸಿನ್ಸಿಯರ್ಲಿ ರಾಮ್’ ಮತ್ತು ‘ಪಿನಾಕ’ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಗಣೇಶ್ ‘ಗೋಲ್ಡನ್ ಸ್ಟಾರ್’ ಆಗೋದಕ್ಕೂ ಮೊದಲಿನ ಜೀವನ ಹೇಗಿತ್ತು ನೋಡಿ..
ಗಣೇಶ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 02, 2025 | 6:30 AM

Share

ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರಿಗೆ ಇಂದು (ಜುಲೈ 02) ಜನ್ಮದಿನದ ಸಂಭ್ರಮ. ಅವರಿಗೆ ಈಗ 47 ವರ್ಷ ವಯಸ್ಸು. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಾ ಇವೆ. ಅವರ ಹೊಸ ಸಿನಿಮಾಗಳ ಕಡೆಯಿಂದ ಬರ್ತ್​ಡೇ ಗಿಫ್ಟ್ ಬರೋ ನಿರೀಕ್ಷೆ ಇದೆ. ಗಣೇಶ್ ಅವರು ತುಂಬಾನೇ ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ಈಗ ಅವರು ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಬರ್ತ್​ಡೇ ದಿನ ಗಣೇಶ್ ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳೋಣ.

ಗಣೇಶ್ ಅವರು ಈ ಮೊದಲು 2002ರಲ್ಲಿ ‘ಪ್ರೇಮಾ ಪಿಶಾಚಿಗಳು’ ಸೀರಿಯಲ್​ನಲ್ಲಿ ಕಾಣಿಸಿಕೊಂಡರು. 2003ರಲ್ಲಿ ‘ಕಾಮಿಡಿ ಟೈಮ್’ ಶೋನಲ್ಲಿ ಹೋಸ್ಟ್ ಆಗಿ ಕಾಣಿಸಿಕೊಂಡರು. ಉದಯ ಟಿವಿಯಲ್ಲಿ ಇದು ಪ್ರಸಾರ ಕಂಡಿತು. ಈ ಶೋ ಗಣೇಶ್​ಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು ಎನ್ನಬಹುದು. ಈ ಶೋನಲ್ಲಿ ಕಾಲರ್​ಗಳ ಜೊತೆ ಮಾತನಾಡಿ, ಅವರನ್ನು ನಗಿಸಿ, ವೀಕ್ಷಕರನ್ನು ನಗಿಸುತ್ತಿದ್ದರು. 2006ರಲ್ಲಿ ‘ಚೆಲ್ಲಾಟ’ ಚಿತ್ರದ ಮೂಲಕ ಗಣೇಶ್ ಅವರು ಹೀರೋ ಆದರು.

ಅದೇ ವರ್ಷ ಬಂದ ‘ಮುಂಗಾರು ಮಳೆ’ ಚಿತ್ರ ಸೂಪರ್ ಹಿಟ್ ಆಯಿತು. 2008ರಲ್ಲಿ ಬಂದ ‘ಗಾಳಿಪಟ’ ಚಿತ್ರವು ಮತ್ತೊಂದು ಹಂತಕ್ಕೆ ಹೋಯಿತು. ಆ ಬಳಿಕ ಗಣೇಶ್ ಅವರು ಹಿಂದಿರುಗಿ ನೋಡಲೇ ಇಲ್ಲ. ಗಣೇಶ್ ಅವರು ಈಗಲೂ ‘ಕಾಮಿಡಿ ಕಿಲಾಡಿಗಳು’ ಶೋನ ನೆನಪಿಸಿಕೊಳ್ಳುತ್ತಾರೆ. ಅವರು ತಾವು ನಡೆದು ಬಂದ ಹಾದಿಯನ್ನು ಮರೆತಿಲ್ಲ ಎನ್ನಬಹುದು.

ಇದನ್ನೂ ಓದಿ
Image
‘ತನ್ನದೇ ಮೂತ್ರ ಕುಡಿಯುವ ವ್ಯಕ್ತಿ, ಪ್ರಚಾರಕ್ಕಾಗಿ ಇಷ್ಟು ಮಾಡಲ್ವಾ?’
Image
‘ಮನೆ ಬಾಡಿಗೆ ಏರಿದಂತೆ..’; ಬಿಗ್ ಬಾಸ್ ಸಂಭಾವನೆ ಬಗ್ಗೆ ಕಿಚ್ಚನ ನೇರ ಮಾತು
Image
‘ಒಳ ಉಡುಪು ಹಾಕಿದ್ದೀನಾ, ಇಲ್ಲವಾ ಎಂಬುದನ್ನು ನೀವು ನೋಡಿದ್ದೀರಾ?’;ಖುಷಿ
Image
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

ಗಣೇಶ್ ಅವರು ಕಾಮಿಡಿ ಟೈಮಿಂಗ್​ಗೆ ಸಖತ್ ಫೇಮಸ್. ಅವರ ಕಾಮಿಡಿ ಟೈಮ್ ಶೋಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ ಎಂದು ಹೇಳಬಹುದು. ಗಣೇಶ್ ಅವರ ಬಳಿ ಈಗ ಎಲ್ಲವೂ ಇದೆ. ಆರ್​ಆರ್ ನಗರದಲ್ಲಿ ಅವರು ಒಂದು ಮನೆಯನ್ನು ಖರೀದಿ ಮಾಡಿದ್ದಾರೆ. ಪತ್ನಿ ಹಾಗೂ ಮಕ್ಕಳ ಜೊತೆ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗಣೇಶ್ ಜನ್ಮದಿನ: ಮನೆ ಬಳಿ ಬರಬೇಡಿ ಎಂದು ಕೋರಿದ ಗೋಲ್ಡನ್ ಸ್ಟಾರ್

2024ರಲ್ಲಿ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ಗಣೇಶ್ ಅವರು ‘ಯುವರ್ ಸಿನ್ಸಿಯರ್ಲಿ ರಾಮ್’ ಹಾಗೂ ‘ಪಿನಾಕ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಹೊಸ ಸಿನಿಮಾಗಳು ಇಂದು ಘೋಷಣೆ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!