ಗುರು ಕಿರಣ್ ದುಡ್ಡು ಕೊಟ್ಟರೂ ಸಿನಿಮಾ ಮಾಡಲ್ಲಾ; ಕಾರಣವೇನು?

ಗುರು ಕಿರಣ್ ಅವರು ಕನ್ನಡ ಚಿತ್ರರಂಗದಲ್ಲಿ ಕಡಿಮೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ದೊಡ್ಡ ಸಂಭಾವನೆಗಿಂತ ಒಳ್ಳೆಯ ಪ್ರಾಜೆಕ್ಟ್ ಅವರಿಗೆ ಮುಖ್ಯ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಚಿತ್ರರಂಗದ ಪ್ರವೃತ್ತಿ ಮತ್ತು ಅವರ ವೈಯಕ್ತಿಕ ಆದ್ಯತೆಗಳನ್ನು ಅವರು ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಗುರು ಕಿರಣ್ ದುಡ್ಡು ಕೊಟ್ಟರೂ ಸಿನಿಮಾ ಮಾಡಲ್ಲಾ; ಕಾರಣವೇನು?
ಗುರು ಕಿರಣ್
Edited By:

Updated on: Mar 20, 2025 | 7:55 AM

ಸಂಗೀತ ನಿರ್ದೇಶಕ, ಗಾಯಕ ಗುರು ಕಿರಣ್ (Guru Kiran) ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದರು. ಇತ್ತೀಚೆಗೆ ಅವರು ಸಿನಿಮಾಗಳನ್ನು ಮಾಡೋದು ಕಡಿಮೆ ಮಾಡಿದ್ದಾರೆ. ಅಲ್ಲೊಂದು, ಇಲ್ಲೊಂದು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಹಾಗಾದರೆ ಅವರಿಗೆ ಆಫರ್ ಬರುತ್ತಿಲ್ಲವಾ ಅಥವಾ ಅವರೇ ಮಾಡುತ್ತಿಲ್ಲವಾ? ಈ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ. ಈ ಮೂಲಕ ಎಲ್ಲಾ ವದಂತಿಗಳಿಗೆ ಗುರು ಕಿರಣ್ ತೆರೆ ಎಳೆದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಗುರು ಕಿರಣ್ ಅವರು ಸಿನಿಮಾ ಮಾಡಲು ಕಡಿಮೆ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಅವರ ಕಡೆಯಿಂದಲೇ ಉತ್ತರ ಸಿಕ್ಕಿದೆ. ದೊಡ್ಡ ಸಂಭಾವನೆ ನೀಡುತ್ತೇನೆ ಎಂದ ಮಾತ್ರಕ್ಕೆ ತಾವು ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ವಿವರಿಸಿದ್ದಾರೆ. ‘ಕನ್ನಡ ಪಿಕ್ಚರ್ಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ
ಪ್ರಶಾಂತ್ ನೀಲ್ ನಿರ್ದೇಶನದ ಹಿಟ್ ಚಿತ್ರ ರೀ-ರಿಲೀಸ್; ದಾಖಲೆ ಗಳಿಕೆ
ತನ್ನದೇ ಹೆಸರನ್ನು ತಪ್ಪಾಗಿ ಕರೆದುಕೊಂಡು ರಣಬೀರ್; ಆಮಿರ್ ರಿಯಾಕ್ಷನ್ ನೋಡಿ
ರಾಮ್ ಚರಣ್ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ ಎಂಎಸ್ ಧೋನಿ?
ದೆಹಲಿ ಸಂಸತ್ತು ಹತ್ತಲಿದ್ದಾರೆ ಶಿವರಾಜ್​ಕುಮಾರ್; ಸಿಕ್ಕಿತು ಹೊಸ ಸುದ್ದಿ

‘ಸಿನಿಮಾ ಕಮ್ಮಿ ಮಾಡಿದ್ದೇನೆ. ನನಗೆ ದುಡ್ಡು ಕೊಟ್ಟು ಸಿನಿಮಾ ಮಾಡಿಸಿಕೊಳ್ಳೋಕೆ ಆಗಲ್ಲ. ಪ್ರಾಜೆಕ್ಟ್ ಇಷ್ಟ ಆಗಬೇಕು. ದೊಡ್ಡ ಪ್ರಾಜೆಕ್ಟ್ ಒಂದು ಪ್ಯಾಟರ್ನ್​​ನಲ್ಲಿ ಹೋಗ್ತಾ ಇದೆ. ಸಣ್ಣ ಚಿತ್ರಗಳು ಹೋಗ್ತಾ ಇಲ್ಲ. ಇದಕ್ಕೆ ಚಿತ್ರರಂಗ ಗುರಿಯಾಗುತ್ತಿದೆ. ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ. ಮೊದಲಿನಷ್ಟು ಖುಷಿ ಸಿಗುತ್ತಿಲ್ಲ. ಹೀಗಾಗಿ ಒಂದು ಬ್ರೇಕ್ ಕೊಡೋಣ ಅಂತ’ ಎಂದಿದ್ದಾರೆ ಅವರು.

‘ಅಪ್ಪು’ ಚಿತ್ರಕ್ಕೆ ಗುರು ಕಿರಣ್ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಇತ್ತೀಚಿಗೆ ರೀ-ರಿಲೀಸ್ ಆಗಿದೆ. ಪುನೀತ್ ರಾಜ್​ಕುಮಾರ್ ಚಿತ್ರದ ಹೀರೋ. ಅವರ ಜನ್ಮದಿನದ ಪ್ರಯುಕ್ತ ಸಿನಿಮಾ ರೀ-ರಿಲೀಸ್ ಕಂಡಿದೆ. ಈ ಸಂದರ್ಭದಲ್ಲಿ ಅವರು ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಅಪ್ಪು ಸಿನಿಮಾಗೆ ರೆಹಮಾನ್ ಮ್ಯೂಸಿಕ್ ಮಾಡ್ತಾರೆ ಎಂದುಕೊಂಡಿದ್ದೆ’; ಹಳೆಯ ಘಟನೆ ನೆನೆದ ಗುರುಕಿರಣ್

‘ಅಪ್ಪು’ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ಸಿನಿಮಾ ಸದ್ದು ಮಾಡಲು ಗುರು ಕಿರಣ್ ಸಂಗೀತ ಸಂಯೋಜನೆಯೂ ಕಾರಣ ಆಯಿತು. ಇದನ್ನು ಅನೇಕರು ಈಗಲೂ ಒಪ್ಪಿಕೊಳ್ಳುತ್ತಾರೆ. ಗುರು ಕಿರಣ್ ಅವರು ನಟನಾಗಿಯೂ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈಗ ಅಲ್ಲೊಂದು, ಇಲ್ಲೊಂದು ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Thu, 20 March 25