Hamsalekha Birthday: ಹಂಸಲೇಖ ಜನ್ಮದಿನ: ಚಿತ್ರರಂಗದಲ್ಲಿ ‘ನಾದಬ್ರಹ್ಮ’ ಮಾಡಿದ ಸಾಧನೆ ಬಗ್ಗೆ ಇಲ್ಲಿದೆ ವಿವರ
ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಲು ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತದ ಕೊಡುಗೆ ಅಪಾರ. ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿರುವ ಅವರು ಈಗಲೂ ಬ್ಯುಸಿ ಆಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಹಂಸಲೇಖ (Hamsalekha) ನೀಡಿದ ಕೊಡುಗೆ ದೊಡ್ಡದು. ಗೀತರಚನಕಾರರಾಗಿ, ಸಂಗೀತ ನಿರ್ದೇಶಕರಾಗಿ ಹಂಸಲೇಖ ಅವರು ಗುರುತಿಸಿಕೊಂಡಿದ್ದಾರೆ. ನಾದಬ್ರಹ್ಮ ಎಂಬ ಬಿರುದೂ ಅವರಿಗೆ ಸಿಕ್ಕಿದೆ. ತಮ್ಮ ಸಂಗೀತದ ಮೂಲಕ ಕೇಳುಗರ ಹೃದಯದಲ್ಲಿ ಜಾಗ ಪಡೆದ ಹಂಸಲೇಖ ಅವರಿಗೆ ಇಂದು (ಜೂನ್ 23) ಜನ್ಮದಿನ (Hamsalekha Birthday). ಅವರಿಗೆ ಎಲ್ಲರೂ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಯಾರೂಎಂದಿಗೂ ಮರೆಯಲು ಸಾಧ್ಯವಿಲ್ಲ.
ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಲು ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತದ ಕೊಡುಗೆ ಅಪಾರ. ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿರುವ ಅವರು ಈಗಲೂ ಬ್ಯುಸಿ ಆಗಿದ್ದಾರೆ. ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಯುವ ಪ್ರತಿಭೆಗಳನ್ನು ತಿದ್ದುವ ಕೆಲಸ ಇವರಿಂದ ಆಗುತ್ತಿದೆ. ಈ ವಯಸ್ಸಿನಲ್ಲೂ ಹಂಸಲೇಖ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಅವರಿಗೆ ಅನಾರೋಗ್ಯ ಕಾಡಿತ್ತು. ಆಸ್ಪತ್ರೆಗೂ ದಾಖಲಾಗಿದ್ದರು. ಅವರಿಗೆ ದೇವರು ಮತ್ತಷ್ಟು ಆರೋಗ್ಯ ನೀಡಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.
ಚಿತ್ರರಂಗದಲ್ಲಿರುವ ಅನೇಕರಿಗೆ ಹಂಸಲೇಖ ಅವರೇ ಮಾದರಿ. ಅವರನ್ನು ಅನೇಕರು ಮಾನಸ ಗುರುಗಳು ಎಂದು ಕರೆದಿದ್ದಾರೆ. ಹಂಸಲೇಖ ಅವರ ಸಾಧನೆಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ರಾಷ್ಟ್ರ ಪ್ರಶಸ್ತಿ ಒಂದು ಬಾರಿ, ಫಿಲ್ಮ್ ಫೇರ್ ಪ್ರಶಸ್ತಿ ಆರು ಬಾರಿ, ರಾಜ್ಯ ಪ್ರಶಸ್ತಿ 10 ಬಾರಿ ಪಡೆದಿದ್ದು ಅವರ ಹೆಚ್ಚುಗಾರಿಕೆ.
ಹಂಸಲೇಖ ಮೂಲ ಹೆಸರು ಗಂಗರಾಜು ಎಂದು. ಚಿಕ್ಕ ವಯಸ್ಸಿನಲ್ಲೇ ಸಂಗೀತದ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇತ್ತು. ಕನ್ನಡ ಚಿತ್ರರಂಗವನ್ನೇ ಆಳುವ ಸಂಗೀತ ನಿರ್ದೇಶಕನಾಗಿ ಅವರು ಬೆಳೆದು ನಿಂತರು. ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಸಿನಿಮಾಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ ಅನ್ನೋದು ವಿಶೇಷ. ಸಾವಿರಾರು ಸೂಪರ್ ಹಿಟ್ ಗೀತೆಗಳನ್ನು ನೀಡಿ ಅವರು ಜನಮನ ಗೆದ್ದಿದ್ದಾರೆ.
ಇದನ್ನೂ ಓದಿ: ‘ನನ್ನ ಮುಟ್ಟಿದರೂ ಕನ್ನಡ, ನಾನು ಬಿದ್ರೂ ಕನ್ನಡ, ಕೊಂದರೂ ಕನ್ನಡ’: ಹಂಸಲೇಖ
ಹಂಸಲೇಖ ಅವರು ಚೌಕಟ್ಟು ಹಾಕಿಕೊಂಡು ಬದುಕಿದವರಲ್ಲ. ಹಲವು ಡ್ಯುಯೆಟ್ ಸಾಂಗ್ ಬರೆದ ಹಂಸಲೇಖ ಅವರೇ ಭಕ್ತಿಪ್ರಧಾನ ಗೀತೆಯನ್ನೂ ರಚಿಸಿದ್ದಾರೆ. ಪಡ್ಡೆಗಳಿಗೆ ಇಷ್ಟ ಆಗುವ ‘ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು..’ ಹಾಡನ್ನು ಬರೆದು ಗಮನ ಸೆಳೆದಿದ್ದಾರೆ. ಕನ್ನಡದ ಮಣ್ಣಿನ ಹಾಡು, ಸ್ಯಾಡ್ ಸಾಂಗ್ಗಳು ಅವರ ಲೇಖನಿಯಿಂದ ಮೂಡಿ ಬಂದಿವೆ ಅನ್ನೋದು ವಿಶೇಷ. ಅವರಿಗೆ ಸರಿಸಾಟಿಯಾಗುವಂತಹ ಮತ್ತೋರ್ವ ವ್ಯಕ್ತಿ ಇಲ್ಲ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:58 am, Fri, 23 June 23