ರಾಧಿಕಾ ಪಂಡಿತ್​ಗೆ ಜನ್ಮದಿನದ ಸಂಭ್ರಮ; ವಿಶೇಷ ದಿನದಂದು ನಟಿ ಎದುರು ಹೊಸ ಬೇಡಿಕೆ ಇಟ್ಟ ಫ್ಯಾನ್ಸ್

ರಾಧಿಕಾ ಪಂಡಿತ್​ಗೆ ಜನ್ಮದಿನದ ಸಂಭ್ರಮ; ವಿಶೇಷ ದಿನದಂದು ನಟಿ ಎದುರು ಹೊಸ ಬೇಡಿಕೆ ಇಟ್ಟ ಫ್ಯಾನ್ಸ್
ರಾಧಿಕಾ-ಯಶ್

Radhika Pandit Birthday: 2008ರಲ್ಲಿ ತೆರೆಗೆ ಬಂದ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ರಾಧಿಕಾ ಪಂಡಿತ್​. ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡರು. ಆ ನಂತರ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

TV9kannada Web Team

| Edited By: Rajesh Duggumane

Mar 07, 2022 | 6:00 AM

ನಟಿ ರಾಧಿಕಾ ಪಂಡಿತ್ (Radhika Pandit)​ ಇಂದು (ಮಾರ್ಚ್​ 7) 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್​ ಕಡೆಯಿಂದ ಸೋಶಿಯಲ್​ ಮೀಡಿಯಾದಲ್ಲಿ (Social Media) ಶುಭಾಶಯಗಳು ಹರಿದು ಬರುತ್ತಿವೆ. ರಾಧಿಕಾ ಅವರ ಫೋಟೋ ಹಂಚಿಕೊಂಡು ಬರ್ತ್​ಡೇ ವಿಶ್​ ತಿಳಿಸಲಾಗುತ್ತಿದೆ. ಬರ್ತ್​ ಡೇ ವೇಳೆ ವಿಶೇಷ ಬೇಡಿಕೆ ಒಂದನ್ನು ರಾಧಿಕಾ ಎದುರು ಇಟ್ಟಿದ್ದಾರೆ ಅಭಿಮಾನಿಗಳು (Radhika Pandit Fans). ಅಷ್ಟಕ್ಕೂ ಏನದು ಮನವಿ? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.

2008ರಲ್ಲಿ ತೆರೆಗೆ ಬಂದ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ರಾಧಿಕಾ ಪಂಡಿತ್​. ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡರು. ಆ ನಂತರ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು. ಧ್ರುವ ಸರ್ಜಾ, ಪುನೀತ್​ ರಾಜ್​ಕುಮಾರ್ ಸೇರಿ ಅನೇಕ ಸ್ಟಾರ್ ನಟರ ಜತೆ ರಾಧಿಕಾ ತೆರೆಹಂಚಿಕೊಂಡರು. 2016ರಲ್ಲಿ ತೆರೆಕಂಡ ‘ಸಂತು ಸ್ಟ್ರೇಟ್​ ಫಾರ್ವರ್ಡ್’ ಸಿನಿಮಾ ನಂತರದಲ್ಲಿ ಯಶ್​ ಜತೆ ರಾಧಿಕಾ ವಿವಾಹ ಆಯಿತು. ಆ ಬಳಿಕ ಅವರು ಚಿತ್ರರಂಗದಿಂದ ಒಂದು ಸಣ್ಣ ಬ್ರೇಕ್​ ಪಡೆದರು. 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದ ಮೂಲಕ ಅವರು ಮತ್ತೆ ಕಂಬ್ಯಾಕ್​ ಮಾಡಿದರು. ಆ ನಂತರ ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.

ರಾಧಿಕಾ ಪಂಡಿತ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಎಂಬುದು ಅವರ ಅಭಿಮಾನಿಗಳ ಬಯಕೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯ ಬರುತ್ತಲೇ ಇದೆ. ಆದರೆ, ರಾಧಿಕಾ ಪಂಡಿತ್ ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಂತಿಲ್ಲ. ಅವರು ಮಗಳು ಆಯ್ರಾ ಹಾಗೂ ಯಥರ್ವ್​ ಅವರ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ, ಅವರು ಚಿತ್ರರಂಗಕ್ಕೆ ಯಾವಾಗ ಮರಳುತ್ತಾರೆ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.

ಬರ್ತ್​ಡೇ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ಅವರಿಗೆ ಚಿತ್ರರಂಗಕ್ಕೆ ಮರಳುವಂತೆ ಅನೇಕರು ಒತ್ತಾಯ ಮಾಡಿದ್ದಾರೆ. ಅವರ ಮುಂದಿನ ಸಿನಿಮಾ ಬಗ್ಗೆ ಯಾವಾಗ ಘೋಷಣೆ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಕೊವಿಡ್ ಇರುವ ಕಾರಣ ರಾಧಿಕಾ ಎಲ್ಲಿಯೂ ಹೊರಗೆ ತೆರಳದೆ ಮನೆಯಲ್ಲೇ ಬರ್ತ್​ಡೇ ಆಚರಣೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ಮಿಂಚಿದ ರಾಧಿಕಾ ಪಂಡಿತ್ ಕುಟುಂಬ; ಇಲ್ಲಿವೆ ಫೋಟೋಗಳು

Radhika Pandit: ಜನ್ಮದಿನಕ್ಕೂ ಮುನ್ನ ಸುಂದರ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​; ಹೇಳಿದ್ದೇನು?

Follow us on

Related Stories

Most Read Stories

Click on your DTH Provider to Add TV9 Kannada