Hariprriya: ಹೇಗಿತ್ತು ನೋಡಿ ಹರಿಪ್ರಿಯಾ ಮೂಗು ಚುಚ್ಚಿಸಿದ ಕ್ಷಣ; ವಿಡಿಯೋ ಹಂಚಿಕೊಂಡ ನಟಿ

ಈ ವಿಡಿಯೋ ನೋಡಿದ ಬಳಿಕ ‘ಇದು ಮದುವೆ ತಯಾರಿ’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಆದರೆ ಇದಕ್ಕೆ ಹರಿಪ್ರಿಯಾ ಅವರು ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ.

Hariprriya: ಹೇಗಿತ್ತು ನೋಡಿ ಹರಿಪ್ರಿಯಾ ಮೂಗು ಚುಚ್ಚಿಸಿದ ಕ್ಷಣ; ವಿಡಿಯೋ ಹಂಚಿಕೊಂಡ ನಟಿ
ಹರಿಪ್ರಿಯಾ
Image Credit source: Instagram Profile
Edited By:

Updated on: Nov 14, 2022 | 2:09 PM

ನಟಿ ಹರಿಪ್ರಿಯಾ (Haripriya) ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಸಿನಿಮಾ ಮತ್ತು ದಿನಚರಿಯ ಬಗ್ಗೆ ಅವರು ಆಗಾಗ ಅಪ್​ಡೇಟ್​ ನೀಡುತ್ತಾ ಇರುತ್ತಾರೆ. ಹೊಸ ಫೋಟೋ ಮತ್ತು ವಿಡಿಯೋಗಳನ್ನೂ ಹಂಚಿಕೊಳ್ಳುತ್ತಾರೆ. ಈಗ ಅವರು ಶೇರ್​ ಮಾಡಿಕೊಂಡಿರುವ ಹೊಸ ವಿಡಿಯೋ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದಿದೆ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ಬಳಿಕ ಅವರ ಮೊಗದಲ್ಲಿ ಮೂಗುತಿ ಅಲಂಕರಿಸಿದೆ. ಈ ಹೊಸ ಲುಕ್​ ಕಂಡು ಫ್ಯಾನ್ಸ್​ ವಾವ್​ ಎನ್ನುತ್ತಿದ್ದಾರೆ. ಮೂಗು ಚುಚ್ಚುವ (Nose Piercing) ಸಂದರ್ಭ ಹೇಗಿತ್ತು ಎಂಬುದನ್ನು ತಿಳಿಸಲು ಹರಿಪ್ರಿಯಾ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ (Haripriya Instagram) ಅನೇಕ ಅಭಿಮಾನಿಗಳು ಇದಕ್ಕೆ ಕಮೆಂಟ್​ ಮಾಡಿದ್ದಾರೆ.

ಚಿತ್ರರಂಗದಲ್ಲಿ ಹರಿಪ್ರಿಯಾ ಅವರಿಗೆ ಹಲವು ವರ್ಷಗಳ ಅನುಭವ ಇದೆ. 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಇಂದಿಗೂ ಚಾರ್ಮ್​ ಉಳಿಸಿಕೊಂಡಿದ್ದಾರೆ. ರಿಷಬ್​ ಶೆಟ್ಟಿ, ರಕ್ಷಿತ್​ ಶೆಟ್ಟಿ, ಶ್ರೀಮುರಳಿ ಮುಂತಾದ ಸ್ಟಾರ್​ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಹಲವು ಚಿತ್ರಗಳು ಅವರ ಕೈಯಲ್ಲಿವೆ.

ಇದನ್ನೂ ಓದಿ
Hariprriya: ಕಿರುತೆರೆಗೆ ಕಾಲಿಡಲಿದ್ದಾರೆ ನಟಿ ಹರಿಪ್ರಿಯಾ; ಏನಿದು ಸಮಾಚಾರ?
ಉಗ್ರಂ ಹರಿಪ್ರಿಯಾ ಪಾತ್ರಕ್ಕೂ ಸಲಾರ್​ ಶ್ರುತಿ ಹಾಸನ್​ ಪಾತ್ರಕ್ಕೂ ಇದೆ ಅಜಗಜಾಂತರ ವ್ಯತ್ಯಾಸ
Hero Kannada Movie: ಹರಿಪ್ರಿಯಾ ಮಾಡಬೇಕಿದ್ದ ಪಾತ್ರವನ್ನು ‘ಮಗಳು ಜಾನಕಿ’ ನಟಿ ಗಾನವಿ ಪಡೆದುಕೊಂಡಿದ್ದು ಹೇಗೆ?
ಕನ್ನಡಿಗರಿಗೆ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಜಾಗವಿಲ್ಲ ಯಾಕೆ? ಹರಿಪ್ರಿಯಾ ಕಿಡಿಕಿಡಿ

ಮದುವೆ ಆಗ್ತಾರಾ ಹರಿಪ್ರಿಯಾ?

ನಟಿ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡ ವಿಡಿಯೋವನ್ನು ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಊಹಿಸುತ್ತಿದ್ದಾರೆ. ‘ಇದು ಮದುವೆ ತಯಾರಿ’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಆದರೆ ಇದಕ್ಕೆ ಹರಿಪ್ರಿಯಾ ಅವರು ಸದ್ಯಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ‘ಮೂಗುತಿ ಸುಂದರಿ’, ‘ಈಗ ನಿಮ್ಮ ಲುಕ್​ ಸೂಪರ್​’ ಎಂದೆಲ್ಲ ಅಭಿಮಾನಿಗಳು ಹೊಗಳಿದ್ದಾರೆ.

ಹರಿಪ್ರಿಯಾ ನಟನೆಯ ‘ಪೆಟ್ರೋಮ್ಯಾಕ್ಸ್​’ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಈ ಚಿತ್ರಕ್ಕೆ ವಿಜಯ್​ ಪ್ರಸಾದ್​​ ನಿರ್ದೇಶನ ಮಾಡಿದ್ದಾರೆ. ಹರಿಪ್ರಿಯಾ ಮತ್ತು ವಿಜಯ್​ ಪ್ರಸಾದ್ ಕಾಂಬಿನೇಷನ್​ನಲ್ಲಿ ಮೂಡಿಬಂದಿದ್ದ ‘ನೀರ್​ ದೋಸೆ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಆದರೆ ‘ಪೆಟ್ರೋಮ್ಯಾಕ್ಸ್​’ ಚಿತ್ರ ಆ ರೀತಿ ಮೋಡಿ ಮಾಡಲು ಸಾಧ್ಯವಾಗಲಿಲ್ಲ.

2019ರಲ್ಲಿ ಹರಿಪ್ರಿಯಾ ಅವರು ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗಿದ್ದವು. ‘ಬೆಲ್​ ಬಾಟಂ’, ‘ಸೂಜಿದಾರ’, ‘ಕನ್ನಡ್​ ಗೊತ್ತಿಲ್ಲ’, ‘ಡಾಟರ್​ ಆಫ್​ ಪಾರ್ವತಮ್ಮ’, ‘ಕಥಾ ಸಂಗಮ’ ಸಿನಿಮಾಗಳು ಗಮನ ಸೆಳೆದಿದ್ದವು. ‘ಬೆಲ್​ ಬಾಟಂ’ ಚಿತ್ರ ದೊಡ್ಡ ಗೆಲುವು ಪಡೆದುಕೊಂಡಿತ್ತು. ಆ ಚಿತ್ರದ ಸೀಕ್ವೆಲ್​ ಸೆಟ್ಟೇರಿದೆ. ಮತ್ತೆ ಹರಿಪ್ರಿಯಾ ಮತ್ತು ರಿಷಬ್​ ಶೆಟ್ಟಿ ಜೋಡಿಯನ್ನು ತೆರೆ ಮೇಲೆ ನೋಡಲು ಫ್ಯಾನ್ಸ್​ ಕಾದಿದೆ. ಚಿತ್ರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಅಪ್​ಡೇಟ್​ ಸಿಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:30 pm, Mon, 14 November 22