ಖ್ಯಾತ ನಟ ರವಿ ಕಿಶನ್ (Ravi Kishan) ಅವರು ಬಹುಭಾಷೆಯಲ್ಲಿ ಫೇಮಸ್ ಆಗಿದ್ದಾರೆ. ಮೂಲತಃ ಭೋಜ್ಪುರಿ ಚಿತ್ರರಂಗದವರಾದ ಅವರಿಗೆ ಎಲ್ಲ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲೂ ಬೇಡಿಕೆ ಇದೆ. ಕನ್ನಡ (Sandalwood), ತೆಲುಗು, ಹಿಂದಿ, ತಮಿಳು, ಭೋಜ್ಪುರಿ ಚಿತ್ರಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನೂ ರವಿ ಕಿಶನ್ ಮಾಡಿದ್ದಾರೆ. ಅದರಲ್ಲೂ ವಿಲನ್ ಪಾತ್ರಗಳಲ್ಲಿ ಅವರನ್ನು ಜನರು ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ. ರಿಯಲ್ ಲೈಫ್ನಲ್ಲಿ ರಾಜಕಾರಣಿ ಆಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಸಿನಿಮಾ ರಂಗದಿಂದ ಅನೇಕ ಆಫರ್ಗಳಿದ್ದರೂ ಕೂಡ ಅವುಗಳನ್ನು ಒಪ್ಪಿಕೊಳ್ಳುವಲ್ಲಿ ಅವರು ಹೆಚ್ಚು ಚ್ಯೂಸಿ ಆಗಿದ್ದಾರೆ. ಎಲ್ಲವನ್ನೂ ಅಳೆದು-ತೂಗಿ ಒಂದೊಂದೇ ಪ್ರಾಜೆಕ್ಟ್ಗಳಿಗೆ ಸಹಿ ಮಾಡುತ್ತಿದ್ದಾರೆ. ಅದು ಕೂಡ ಒಂದು ಕಂಡೀಷನ್ ಮೇರೆಗೆ. ಏನದು? ಸದ್ಯ ಅವರು 10 ಪಟ್ಟು ಸಂಭಾವನೆ (Remuneration) ಹೆಚ್ಚಿಸಿಕೊಂಡಿದ್ದಾರೆ. ಅಷ್ಟು ಮೊತ್ತವನ್ನು ನೀಡಲು ನಿರ್ಮಾಪಕರ ಮುಂದೆ ಬಂದರೆ ಮಾತ್ರ ರವಿ ಕಿಶನ್ ನಟಿಸುತ್ತಾರೆ. ಆ ಬಗ್ಗೆ ಇಲ್ಲಿದೆ ವಿವರ..
1992ರಿಂದಲೂ ರವಿ ಕಿಶನ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಿಂದುಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನಾನು ದೊಡ್ಡ ಕುಟುಂಬವನ್ನು ನೋಡಿಕೊಳ್ಳಬೇಕು. ನಾನೀಗ ದುಬಾರಿ ನಟ. ನನ್ನ ಸಂಭಾವನೆಯಲ್ಲಿ 10 ಪಟ್ಟು ಹೆಚ್ಚಾಗಿದೆ. ನನ್ನ ಜನರಿಗಾಗಿ ಮತ್ತು ಸಮಾಜಮುಖಿ ಕೆಲಸಗಳಿಗಾಗಿ ನಾನು ಸ್ವಂತ ಹಣ ಖರ್ಚು ಮಾಡುತ್ತಿದ್ದೇನೆ’ ಎಂದು ರವಿ ಕಿಶನ್ ಹೇಳಿದ್ದಾರೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ನಟರಿಗೆ ಸಿಕ್ಕಿದೆ ಕೋಟಿ ರೂ. ಸಂಬಳ; ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?
‘ನಿರ್ಮಾಪಕರಿಗೆ ನನ್ನ ಡೇಟ್ಸ್ ಬೇಕಿರುವುದರಿಂದ ಅವರು ಖುಷಿಯಿಂದ ನನಗೆ ಹಣ ನೀಡುತ್ತಿದ್ದಾರೆ. ನಾನು ಅಂದಾಜು 15 ವರ್ಷ ಉಚಿತವಾಗಿ ಕೆಲಸ ಮಾಡಿದೆ. ಯಾರೂ ನನಗೆ ಹಣ ನೀಡುತ್ತಿರಲಿಲ್ಲ. ಜನರು ನನ್ನನ್ನು ಬಳಸಿಕೊಂಡರು. ಆದರೆ ‘ತೇರೆ ನಾಮ್’ ಸಿನಿಮಾ ಬಳಿಕ ಕಾಲ ಬದಲಾಯಿತು. ನನ್ನ ಪ್ರತಿಭೆ ಮತ್ತು ಅಭಿಮಾನಿ ಬಳಗ ಹೇಗಿದೆ ಎಂಬುದು ಜನರಿಗೆ ತಿಳಿಯಿತು’ ಎಂದು ರವಿ ಕಿಶನ್ ಹೇಳಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾ ಮೂಲಕ ರವಿ ಕಿಶನ್ ಅವರು ಕನ್ನಡಕ್ಕೆ ಎಂಟ್ರಿ ನೀಡಿ ಇಲ್ಲಿನ ಪ್ರೇಕ್ಷಕರನ್ನೂ ರಂಜಿಸಿದ್ದಾರೆ. ‘ರಾಬರ್ಟ್’, ‘ದ್ರೋಣ’, ‘ಶಿವಾರ್ಜುನ’ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.