ಕೊಲೆ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುತ್ತಿರುವ ದರ್ಶನ್ ವಿರುದ್ಧ ಸಿಕ್ಕಿದೆ ಪ್ರಮುಖ ಸಾಕ್ಷಿಗಳು

ದರ್ಶನ್ ಅವರು ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ದಾರೆ. ಈಗಾಗಲೇ ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಳ್ಳುವ ಹಂತ ತಲುಪಿದೆ. ದರ್ಶನ್ ತಮಗೆ ಇರುವ ಪ್ರಭಾವ ಬಳಸಿಕೊಂಡು ಹೊರಗೆ ಬರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಸದ್ಯ ಪೊಲೀಸರು ದರ್ಶನ್ ವಿರುದ್ಧ ಪ್ರಮುಖ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.

ಕೊಲೆ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುತ್ತಿರುವ ದರ್ಶನ್ ವಿರುದ್ಧ ಸಿಕ್ಕಿದೆ ಪ್ರಮುಖ ಸಾಕ್ಷಿಗಳು
ದರ್ಶನ್
Follow us
Prajwal Kumar NY
| Updated By: ರಾಜೇಶ್ ದುಗ್ಗುಮನೆ

Updated on:Jun 14, 2024 | 8:58 AM

ರೇಣುಕಾ ಸ್ವಾಮಿ ಕೊಲೆ ಬಗ್ಗೆ ದರ್ಶನ್ (Darshan)​ ಏನೆಂದರೆ ಏನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ವಿಚಾರಣೆ ವೇಳೆ ಅವರು ಇದೇ ಹೇಳಿಕೆಯನ್ನು ರಿಪೀಟ್ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಏನೇ ಹೇಳಿಕೆ ನೀಡದಿದರೂ ಅವರ ವಿರುದ್ಧ  ಸಾಕ್ಷ್ಯಗಳು ಬಲವಾಗಿ ಸಿಕ್ಕಿವೆ. ಸದ್ಯ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಹಾಗೂ ದರ್ಶನ್ ಎ2 ಆರೋಪಿ ಆಗಿದ್ದಾರೆ. ಒಟ್ಟೂ 17 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

  1. ಕೊಲೆಯಾದ ಸ್ಥಳದಲ್ಲಿ ದರ್ಶನ್, ಪವಿತ್ರಾಗೌಡ, ನಾಗರಾಜ್, ವಿನಯ್, ಸೇರಿ ಆರು ಮಂದಿ ಮೊಬೈಲ್ ಇತ್ತು ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.
  2. ಕೊಲೆಯ ನಂತರ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳ ಜೊತೆ ಕೃತ್ಯದ ಬಗ್ಗೆ ಚರ್ಚಿಸಿರೋ ಕಾಲ್ ಡಿಟೇಲ್ಸ್ ಸಿಕ್ಕಿದೆ.
  3. ಕೃತ್ಯದ ನಂತರ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್ ಆಗಿದ್ದಾರೆ.
  4. ಮೃತದೇಹ ಬಿಸಾಡಲಿಕ್ಕೆ ಸರೆಂಡರ್​ ಆದವರಿಗೆ ತಲಾ ಐದು ಲಕ್ಷ ನೀಡಲಾಗಿದೆ. ಈಗ ಹಣ ಜಪ್ತಿ ಮಾಡಲಾಗಿದೆ.
  5. ದೀಪಕ್ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗ ಆಗಿದೆ.
  6. ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಬಗ್ಗೆ ಹೇಳಿಕೆ ನೀಡಲಾಗಿದೆ.
  7. ರೇಣುಕಾ ಸ್ವಾಮಿ ತನಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ ಅದನ್ನ ದರ್ಶನ್​ಗೆ ತಿಳಿಸಿದ್ದಾಗಿ ಪವಿತ್ರ ಹೇಳಿಕೆ ನೀಡಿದ್ದಾರೆ.
  8. ರೇಣುಕಾ ಸ್ವಾಮಿಯನ್ನು ತಾವು ಕಿಡ್ನ್ಯಾಪ್ ಮಾಡಿದ್ದಾಗಿ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಒಪ್ಪಿಕೊಂಡಿದ್ದಾರೆ. ಪವನ್, ಪವಿತ್ರಾ ಹಾಗೂ ದರ್ಶನ್ ಹೇಳಿದ್ದಕ್ಕೆ ರೇಣುಕಾಸ್ವಾಮಿ ಕರೆತಂದಿರೋದಾಗಿ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.
  9. ಆರ್.ಆರ್. ನಗರದ ಶೆಡ್​ನಲ್ಲಿ ಮೃತ ರೇಣುಕಾ ಸ್ವಾಮಿಯ ರಕ್ತದ ಕಲೆ, ಕೂದಲು ಹಾಗೂ ಬೆವರಿನ ಸ್ಯಾಂಪಲ್ಸ್ ಸಿಕ್ಕಿದೆ.
  10. ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್, ಬ್ಲಡ್ ಸ್ಯಾಂಪಲ್​ನ ಪೊಲೀಸರು ಪಡೆದಿದ್ದಾರೆ.
  11. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ರೇಣುಕಾಸ್ವಾಮಿ ಬ್ಲಡ್ ಸ್ಯಾಂಪಲ್, ಫಿಂಗರ್ ಪ್ರಿಂಟ್, ಫುಟ್ ಫ್ರಿಂಟ್​​ನ ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್ ಹಾಗೂ ಬ್ಲಡ್ ಸ್ಯಾಂಪಲ್ ಜೊತೆ ಮ್ಯಾಚ್ ಮಾಡಿ ನೋಡೋ ಸಾಧ್ಯತೆ ಇದೆ.
  12. ರೇಣುಕಾ ಸ್ವಾಮಿಯ ಕೊಲೆಯಾದ ನಂತರ ದೀಪಕ್, ವಿನಯ್ ಹಾಗೂ ಪವನ್ ಪದೇ ಪದೇ ದರ್ಶನ್​ಗೆ ಕರೆ ಮಾಡಿದ್ದಾರೆ. ಇದು ಪ್ರಮುಖ ಸಾಕ್ಷಿ ಎನಿಸಿಕೊಂಡಿದೆ.ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:58 am, Fri, 14 June 24

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ