ಕಿಚ್ಚ ಸುದೀಪ್​ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್​ ‘ಸಲಗ’ ನೋಡೋಕೆ ಇಲ್ಲಿವೆ ಕಾರಣ

TV9 Digital Desk

| Edited By: Rajesh Duggumane

Updated on: Oct 13, 2021 | 10:21 PM

ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್ ಅಭಿನಯದ ‘ಸಲಗ’ ಸಿನಿಮಾ ಅಕ್ಟೋಬರ್​ 14ರಂದು ತೆರೆಗೆ ಬರುತ್ತಿದೆ. ಹಾಗಾದರೆ ಇವೆರಡೂ ಸಿನಿಮಾ ನೋಡೋಕೆ ಕಾರಣಗಳೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಿಚ್ಚ ಸುದೀಪ್​ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್​ ‘ಸಲಗ’ ನೋಡೋಕೆ ಇಲ್ಲಿವೆ ಕಾರಣ
Follow us

ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್ ಅಭಿನಯದ ‘ಸಲಗ’ ಸಿನಿಮಾ ಅಕ್ಟೋಬರ್​ 14ರಂದು ತೆರೆಗೆ ಬರುತ್ತಿದೆ. ಎರಡೂ ಸ್ಟಾರ್​ ನಟರ ಚಿತ್ರ ಮತ್ತು ಬಿಗ್​ ಬಜೆಟ್​ ಸಿನಿಮಾ. ಈ ಕಾರಣಕ್ಕೆ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹಾಗಾದರೆ ಇವೆರಡೂ ಸಿನಿಮಾ ನೋಡೋಕೆ ಕಾರಣಗಳೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಕೋಟಿಗೊಬ್ಬ 3’

ಕೊವಿಡ್ ಗ್ಯಾಪ್

ಕೊವಿಡ್​ ಕಾಣಿಸಿಕೊಂಡಿದ್ದರಿಂದ ಸ್ಯಾಂಡಲ್​ವುಡ್​ ಮಾರುಕಟ್ಟೆ ಡಲ್​ ಆಗಿತ್ತು. ಅದೇ ರೀತಿ ಸಿನಿಮಾ ಕೆಲಸಗಳು ಕೂಡ ಕಡಿಮೆ ಆಗಿದ್ದವು. ‘ಕೋಟಿಗೊಬ್ಬ 3’ ಸಿನಿಮಾ ರಿಲೀಸ್​ ವಿಳಂಬವಾಗೋಕೆ ಇದು ಕೂಡ ಕಾರಣ. ಸುದೀಪ್​ ನಟನೆಯ ‘ಪೈಲ್ವಾನ್​’ 2019ರ ಸೆಪ್ಟೆಂಬರ್​ ತಿಂಗಳಲ್ಲಿ ತೆರೆಗೆ ಬಂದಿತ್ತು. ಇದಾದ ನಂತರ ತೆರೆಗೆ ಬರುತ್ತಿರುವ ಸುದೀಪ್​ ನಟನೆಯ ಕನ್ನಡ ಸಿನಿಮಾ ಇದಾಗಿದೆ. ಹೀಗಾಗಿ, ಕಿಚ್ಚನ ಅಭಿಮನಾನಿಗಳು ಹಬ್ಬದ ಮೂಡ್​ನಲ್ಲಿದ್ದಾರೆ.

ಭರವಸೆ ಮೂಡಿಸಿದ ಟ್ರೆಲರ್

‘ಕೋಟಿಗೊಬ್ಬ 2’ ಸಿನಿಮಾ ಹಿಟ್​ ಆಗಿತ್ತು. ಇದರ ಸೀಕ್ವೆಲ್​ ‘ಕೋಟಿಗೊಬ್ಬ 3’. ಈಗಾಗಲೇ ರಿಲೀಸ್​ ಆಗಿರುವ ಸಿನಿಮಾದ ಟ್ರೇಲರ್ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಭರವಸೆ ಇಟ್ಟುಕೊಳ್ಳಬಹುದು.

ಎರಡು ಶೇಡ್​

ಸುದೀಪ್​ ಅವರು ‘ಕೋಟಿಗೊಬ್ಬ 2’ ಸಿನಿಮಾದಲ್ಲಿ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಕೋಟಿಗೊಬ್ಬ 3’ ಸಿನಿಮಾದಲ್ಲೂ ಅವರು ಹಲವು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೂ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಸುದೀಪ್​ ಆ್ಯಕ್ಷನ್​

‘ಕೋಟಿಗೊಬ್ಬ 3’ ಟ್ರೇಲರ್​ನಲ್ಲಿ ಆ್ಯಕ್ಷನ್​ ಹಾಗೂ ಸ್ಟಂಟ್​ಗಳು ಹೈಲೈಟ್​ ಆಗಿದ್ದವು. ಹೀಗಾಗಿ, ಸಿನಿಮಾದಲ್ಲಿ ಭರಪೂರ ಆ್ಯಕ್ಷನ್​ ಇರುವ ನಿರೀಕ್ಷೆ ಇದೆ. ಇದನ್ನು ಕಣ್ತುಂಬಿಕೊಳ್ಳೋಕೂ ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು.

ಸಲಗ:

ದುನಿಯಾ ವಿಜಯ್​ ನಿರ್ದೇಶನ

ದುನಿಯಾ ವಿಜಯ್ ಚಿತ್ರರಂಗದಲ್ಲಿ ನಟನಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಇದೇ ಅನುಭವ ಇಟ್ಟುಕೊಂಡು ಅವರು ‘ಸಲಗ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರ ಮೊದಲ ನಿರ್ದೇಶನ ಆದ್ದರಿಂದ ಈ ಚಿತ್ರದ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹಿಟ್​ ಸಾಂಗ್​

ಸಲಗ ಸಿನಿಮಾದ ಸಾಂಗ್​ಗಳು ಈಗಾಗಲೇ ಹಿಟ್​ ಆಗಿವೆ. ಸಿನಿಮಾದ ಹಾಡುಗಳು ಹಿಟ್​ ಆದರೆ ಸಿನಿಮಾಗೆ ಮೈಲೇಜ್​ ಸಿಗುತ್ತದೆ. ಈ ಕಾರಣಕ್ಕೂ ಚಿತ್ರಮಂದಿರಕ್ಕೆ ಹೆಜ್ಜೆ ಹಾಕಬಹಹುದು.

ದನಿಯಾ ವಿಜಯ್​ ನಟನೆ

ದುನಿಯಾ ವಿಜಯ್​ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರ ಫ್ಯಾನ್ಸ್​ಗೆ ಈ ಸಿನಿಮಾ ಇಷ್ಟ ಆಗಬಹುದು. ಈ ಸಿನಿಮಾದಲ್ಲಿ ಕೇವಲ ರೌಡಿಸಂ ಮಾತ್ರವಲ್ಲದೆ ಇನ್ನೂ ಹಲವು ವಿಚಾರಗಳನ್ನು ಹೇಳಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ: ‘ಕೋಟಿಗೊಬ್ಬ 3’ ರಿಲೀಸ್​ ಸಂದರ್ಭದಲ್ಲೇ ಕಿಚ್ಚನ ಪುತ್ಥಳಿ; ಉದ್ಘಾಟನೆಗೆ ಆಗಮಿಸಲಿದ್ದಾರೆ ಸುದೀಪ್​

‘ಶಿವಣ್ಣನಿಗೆ ನಾನು ಡೈರೆಕ್ಷನ್​ ಮಾಡ್ತೀನಿ’; ಸಲಗ ರಿಲೀಸ್​ಗೂ ಮೊದಲು ದುನಿಯಾ ವಿಜಯ್​ ಘೋಷಣೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada