‘ಹುಡುಗರು’ ಸಿನಿಮಾ ನಟಿ ಅಭಿನಯಾ ಎಂಗೇಜ್​ಮೆಂಟ್; ಫೋಟೋ ಮೂಲಕ ಸಿಹಿ ಸುದ್ದಿ

ಅಭಿನಯಾ ಅವರಿಗೆ ಮಾತನಾಡಲು ಬರುವುದಿಲ್ಲ, ಸರಿಯಾಗಿ ಕಿವಿ ಕೇಳಿಸಲ್ಲ. ಆದರೆ ಅವರ ನಟನೆ ಅತ್ಯುತ್ತಮವಾಗಿದೆ. ಈಗ ಅಭಿನಯಾ ಅವರು ಮದುವೆಗೆ ಸಜ್ಜಾಗಿದ್ದಾರೆ. ಪ್ರಿಯಕರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಒಂದು ಫೋಟೋ ಹಂಚಿಕೊಳ್ಳುವ ಮೂಲಕ ಅವರು ಸಿಹಿ ಸುದ್ದಿ ನೀಡಿದ್ದಾರೆ. ಹುಡುಗನ ಹೆಸರು ಇನ್ನೂ ಬಹಿರಂಗ ಆಗಿಲ್ಲ.

‘ಹುಡುಗರು’ ಸಿನಿಮಾ ನಟಿ ಅಭಿನಯಾ ಎಂಗೇಜ್​ಮೆಂಟ್; ಫೋಟೋ ಮೂಲಕ ಸಿಹಿ ಸುದ್ದಿ
Abhinaya

Updated on: Mar 10, 2025 | 4:58 PM

ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ನಟಿ ಅಭಿನಯಾ (Abhinaya) ಅವರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಆರಂಭ ಆಗಿದೆ. ಅಭಿನಯಾ ಅವರು ಈಗ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಬಾಯ್​ಫ್ರೆಂಡ್ ಜೊತೆ ಅವರ ಎಂಗೇಜ್​ಮೆಂಟ್​ ನಡೆದಿದೆ. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. ಎಂಗೇಜ್​ಮೆಂಟ್ ವಿಷಯ ತಿಳಿಸಲು ಅವರು ಫೋಟೋ ಹಂಚಿಕೊಂಡಿದ್ದಾರೆ. ಅಭಿನಯಾ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಕನ್ನಡದ ‘ಹುಡುಗರು’ ಸಿನಿಮಾದಲ್ಲಿ ಅಭಿನಯಾ ಅವರು ನಟಿಸಿದ್ದಾರೆ. ಪುನೀತ್ ರಾಜ್​ಕುಮಾರ್​ ತಂಗಿ ಪಾತ್ರದಲ್ಲಿ ಅವರು ಕಾಣಿಸಿಕೊಂಡರು. 2011ರಲ್ಲಿ ಬಿಡುಗಡೆ ಆದ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ‘ಹುಡುಗರು’ ಸಿನಿಮಾ ನೋಡಿದ ಎಲ್ಲರೂ ಅಭಿನಯಾ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಅಭಿನಯಾ ಅವರು ನಿಶ್ಚಿತಾರ್ಥ ಮಾಡಿಕೊಂಡು ಗುಡ್​ ನ್ಯೂಸ್ ನೀಡಿದ್ದಾರೆ.

ಈ ಮೊದಲು ಮಾಧ್ಯಮದೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿನಯಾ ಅವರು ಒಂದು ವಿಚಾರವನ್ನು ಹಂಚಿಕೊಂಡಿದ್ದರು. ತಾವು ಹಲವು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿ ಇರುವುದಾಗಿ ಅವರು ಹೇಳಿಕೊಂಡಿದ್ದರು. ಆದರೆ ಹುಡುಗ ಯಾರು ಎಂಬುದನ್ನು ತಿಳಿಸಿರಲಿಲ್ಲ. ಈಗಲೂ ಕೂಡ ಅವರು ಹುಡುಗನ ಪರಿಚಯ ಮಾಡಿಕೊಟ್ಟಿಲ್ಲ. ಗಂಟೆ ಬಾರಿಸುತ್ತಿರುವ ಎರಡು ಕೈಗಳ ಫೋಟೋ ಮಾತ್ರ ಹಂಚಿಕೊಂಡಿದ್ದಾರೆ. ಹುಡುಗನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಭಿನಯಾ ಅವರ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಅಭಿನಯಾ ಅವರು ವಿಶೇಷ ನಟಿ. ಅವರಿಗೆ ಸರಿಯಾಗಿ ಕಿವಿ ಕೇಳಿಸಲ್ಲ, ಮಾತನಾಡಲು ಬರುವುದಿಲ್ಲ. ಸನ್ನೆ ಭಾಷೆಯ ಮೂಲಕ ಅವರು ಮಾತನಾಡುತ್ತಾರೆ. ಅವರ ಸಹಾಯಕರು ಅದನ್ನು ಭಾಷಾಂತರಿಸಿ ಹೇಳುತ್ತಾರೆ. ಇಷ್ಟೆಲ್ಲ ಸವಾಲು ಇದ್ದರೂ ಕೂಡ ಅವರು ಯಾರಿಗೂ ಕಮ್ಮಿ ಇಲ್ಲದಂತೆ ನಟಿಸುತ್ತಾರೆ. ಆ ಕಾರಣದಿಂದ ಅಭಿನಯಾ ಮೇಲೆ ಪ್ರೇಕ್ಷಕರು ವಿಶೇಷ ಪ್ರೀತಿ ತೋರಿಸುತ್ತಾರೆ.

ಇದನ್ನೂ ಓದಿ: ವಿಶಾಲ್​ ಜೊತೆ ನಗುನಗುತ್ತಾ ಪೋಸ್​ ನೀಡಿದ ‘ಹುಡುಗರು’ ನಟಿ ಅಭಿನಯಾ

ನಟ ವಿಶಾಲ್ ಮತ್ತು ಅಭಿನಯಾ ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಿತ್ತು. ಅವರಿಬ್ಬರು ಮದುವೆ ಆಗುತ್ತಾರೆ ಎಂದು ವದಂತಿ ಹರಡಿತ್ತು. ಆದರೆ ಆ ವಿಷಯಕ್ಕೆ ಸಂಬಂಧಿಸಿದಂತೆ ವಿಶಾಲ್ ಅವರು ಪ್ರತಿಕ್ರಿಯೆ ನೀಡಿದ್ದರು. ಅದು ಶುದ್ಧ ಸುಳ್ಳು ಎಂದು ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.