AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಥಹಾ ದೃಶ್ಯಗಳನ್ನು ಈ ವರೆಗೆ ನೋಡಿಲ್ಲ: ‘ಟಾಕ್ಸಿಕ್’ ಬಗ್ಗೆ ನಟಿ ಮಾತು

Toxic movie release date: ನಟಿಯರು ಬೇರೆ ಬೇರೆ ಸಂದರ್ಶನಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದು, ಸಿನಿಮಾವನ್ನು, ಮೇಕಿಂಗ್ ಅನ್ನು, ಸಿನಿಮಾದ ಕತೆಯನ್ನು, ಸಿನಿಮಾ ಹೊಂದಿರುವ ಸಂದೇಶವನ್ನು ಕೊಂಡಾಡುತ್ತಿದ್ದಾರೆ. ಇದೀಗ ಇದೇ ಸಿನಿಮಾದ ಭಾಗವಾಗಿರುವ ಖ್ಯಾತ ಬಾಲಿವುಡ್ ನಟಿ ಹುಮಾ ಖುರೇಷಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮತ್ತು ನಟ ಯಶ್ ಬಗ್ಗೆ ಮಾತನಾಡಿದ್ದಾರೆ. ವಿಶೇಷವೆಂದರೆ ನಟಿ, ‘ಟಾಕ್ಸಿಕ್’ ಸಿನಿಮಾದ 8-9 ನಿಮಿಷದ ಕಟ್ ಸಹ ನೋಡಿದ್ದು, ಆ ಬಗ್ಗೆಯೂ ಮಾತನಾಡಿದ್ದಾರೆ.

ಅಂಥಹಾ ದೃಶ್ಯಗಳನ್ನು ಈ ವರೆಗೆ ನೋಡಿಲ್ಲ: ‘ಟಾಕ್ಸಿಕ್’ ಬಗ್ಗೆ ನಟಿ ಮಾತು
Toxic Movie
ಮಂಜುನಾಥ ಸಿ.
|

Updated on:Jun 28, 2026 | 7:53 PM

Share

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇದು ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾನಲ್ಲಿ ಯಶ್ ಜೊತೆಗೆ ಐವರು ಸ್ಟಾರ್ ನಟಿಯರು ನಟಿಸಿದ್ದಾರೆ. ಕೆಲ ನಟಿಯರು ಬೇರೆ ಬೇರೆ ಸಂದರ್ಶನಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದು, ಸಿನಿಮಾವನ್ನು, ಮೇಕಿಂಗ್ ಅನ್ನು, ಸಿನಿಮಾದ ಕತೆಯನ್ನು, ಸಿನಿಮಾ ಹೊಂದಿರುವ ಸಂದೇಶವನ್ನು ಕೊಂಡಾಡುತ್ತಿದ್ದಾರೆ. ಇದೀಗ ಇದೇ ಸಿನಿಮಾದ ಭಾಗವಾಗಿರುವ ಖ್ಯಾತ ಬಾಲಿವುಡ್ ನಟಿ ಹುಮಾ ಖುರೇಷಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮತ್ತು ನಟ ಯಶ್ ಬಗ್ಗೆ ಮಾತನಾಡಿದ್ದಾರೆ. ವಿಶೇಷವೆಂದರೆ ನಟಿ, ‘ಟಾಕ್ಸಿಕ್’ ಸಿನಿಮಾದ 8-9 ನಿಮಿಷದ ಕಟ್ ಸಹ ನೋಡಿದ್ದು, ಆ ಬಗ್ಗೆಯೂ ಮಾತನಾಡಿದ್ದಾರೆ.

ಹುಮಾ ಖುರೇಷಿ ನಟನೆಯ ‘ಬೇಬಿ ಡೂ ಡೈ ಡು’ ಹೆಸರಿನ ಸಿನಿಮಾ ಬಿಡುಗಡೆ ಆಗಿದ್ದು ಸಿನಿಮಾದ ಪ್ರಚಾರ ಕಾರ್ಯದಲ್ಲಿ ಹುಮಾ ಖುರೇಷಿ ಭಾಗವಹಿಸಿದ್ದಾರೆ. ಈ ವೇಳೆ ಅವರಿಗೆ ‘ಟಾಕ್ಸಿಕ್’ ಸಿನಿಮಾದ ಬಗ್ಗೆಯೂ ಕೇಳಲಾಗಿದೆ. ಈ ವೇಳೆ ಸಿನಿಮಾ ಬಗ್ಗೆ ಮತ್ತು ನಟ ಯಶ್ ಬಗ್ಗೆ ಹುಮಾ ಖುರೇಷಿ ಮಾತನಾಡಿದ್ದಾರೆ. ಅಲ್ಲದೆ, ‘ಇಂಥಹಾ ಸಿನಿಮಾ ಅನ್ನು ನಾನು ಈ ವರೆಗೆ ನೋಡಿಲ್ಲ’ ಎಂದು ಕೊಂಡಾಡಿದ್ದಾರೆ.

‘ನಾನು ಯಶ್ ಜೊತೆಗೆ ನಟಿಸುವ ಮುಂಚೆ ಅವರ ಬಗ್ಗೆ ಯಾವು ಅಭಿಪ್ರಾಯವೂ ಇರಲಿಲ್ಲ. ಅಭಿಮಾನಿಗಳನ್ನು ಸಂಪಾದಿಸುವ ನಟ ಎಂದಷ್ಟೆ ಅಂದುಕೊಂಡಿದ್ದೆ, ಆದರೆ ಯಶ್ ಜೊತೆ ನಟಿಸಿದ ಬಳಿಕ, ಅವರು ಕೆಲಸ ಮಾಡುವ ರೀತಿ ನೋಡಿ, ಅವರ ಅಭಿಮಾನಿ ಆಗಿಬಿಟ್ಟೆ. ಅವರು ಕೆಲಸ ಮಾಡುವ ರೀತಿಯೇ ಅದ್ಭುತ, ನಾನು ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ’ ಎಂದಿದ್ದಾರೆ ನಟಿ ಹುಮಾ ಖುರೇಷಿ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಲ್ಲೇ ‘ರಾಮಾಯಣ’ ಪ್ರಚಾರ; ಯಶ್ ಮಾಸ್ಟರ್ ಪ್ಲ್ಯಾನ್

‘ನಮ್ಮ ‘ಟಾಕ್ಸಿಕ್’ ತಂಡದಲ್ಲಿ ಎಲ್ಲರ ಯೋಚನೆ ಒಂದೇ ರೀತಿ ಇದೆ. ನಾವು ಮೊದಲ ದಿನಾಂಕದಂದೇ ಬರುವುದು ನಮಗೆ ಮುಖ್ಯ ಆಗಿರಲಿಲ್ಲ. ನಮಗೆ ಒಳ್ಳೆಯ ಸಿನಿಮಾದ ಜೊತೆಗೆ ಪ್ರೇಕ್ಷಕರ ಮುಂದೆ ಬರುವುದೇ ಮುಖ್ಯವಾಗಿತ್ತು. ನಮ್ಮ ಯೋಚನೆ, ನಿರ್ದೇಶಕಿ ಗೀತು ಮೋಹನ್​​ದಾಸ್ ಯೋಚನೆ, ಯಶ್ ಯೋಚನೆ ಎಲ್ಲವೂ ಒಂದೇ ಆಗಿತ್ತು. ಹಾಗಾಗಿ ನಾವು ಚೆನ್ನಾಗಿ ಕೆಲಸ ಮಾಡಿದೆವು, ಈಗಲೂ ಸಹ ದಿನ-ರಾತ್ರಿ ಎನ್ನದೆ ಕೆಲಸ ನಡೆಯುತ್ತಿದೆ. ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭವವನ್ನು ನೀಡಬೇಕು ಎಂಬುದೇ ನಮ್ಮ ಆಶಯ’ ಎಂದಿದ್ದಾರೆ ನಟಿ.

‘ಟಾಕ್ಸಿಕ್’ ಸಿನಿಮಾದ 8 9 ನಿಮಿಷದ ಕ್ಲಿಪ್ ಒಂದನ್ನು ನಾನು ನೋಡಿದ್ದೀನಿ. ಇಡೀ ಸಿನಿಮಾದ ಗ್ಲಿಂಪ್ಸ್ ಸೇರಿಸಿ ಆ ಕ್ಲಿಪ್ ಮಾಡಿದ್ದಾರೆ. ಒಬ್ಬ ನಟಿಯಾಗಿ ಹೇಳುತ್ತಿದ್ದೇನೆ, ಆ ರೀತಿಯ ದೃಶ್ಯಗಳನ್ನು ನಾನು ಹಿಂದೆಂದೂ ನೋಡಿಲ್ಲ. ಇತ್ತೀಚೆಗೆ ತಾನೆ ಸಿನಿಮಾದ ಮುಖ್ಯ ನಟ-ನಟಿಯರೆಲ್ಲ ಒಟ್ಟಿಗೆ ಊಟಕ್ಕೆ ಸೇರಿದ್ದೆವು. ನಿಜಕ್ಕೂ ನಮ್ಮ ನಡುವೆ ಬಹಳ ಆತ್ಮೀಯತೆ, ಪ್ರೀತಿ ಇತ್ತು. ಏಕೆಂದರೆ ನಮ್ಮಗಳ ನಡುವೆ ಸ್ಪರ್ಧೆ ಎಂಬುದೇ ಇರಲಿಲ್ಲ, ಸಿನಿಮಾನಲ್ಲಿ ಎಲ್ಲರಿಗೂ ಶೈನ್ ಆಗಲು ಸ್ಪೇಸ್ ಇತ್ತು, ಯಾರಿಗೂ ಹೆಚ್ಚು-ಕಡಿಮೆ ಎಂಬುದು ಇರಲಿಲ್ಲ, ಎಲ್ಲರೂ ಶೈನ್ ಆಗಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿದೆ, ಯಶ್ ಅಂತೂ ಎಲ್ಲರನ್ನೂ ಮೀರಿಸಿಬಿಟ್ಟಿದ್ದಾರೆ. ಈ ಸಿನಿಮಾ ಯಶ್ ಅವರ ಅಭಿಮಾನಿಗಳಿಗೆ ಹಬ್ಬವಾಗಲಿದೆ, ನಾವು ಪ್ರಾಮಿಸ್ ಮಾಡುತ್ತೇವೆ, ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭೂತಿಯನ್ನು ಕೊಡುತ್ತೇವೆ’ ಎಂದಿದ್ದಾರೆ ನಟಿ ಹುಮಾ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಮತ್ತು ಯಶ್ ಜಂಟಿಯಾಗಿ ಬಂಡವಾಳ ಹೂಡಿದ್ದು, ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Sun, 28 June 26

Follow Us
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​
ಸಿಎಂ ನಿವಾಸದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
ಸಿಎಂ ನಿವಾಸದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
ಕಾಂಗ್ರೆಸ್​​ ಸೇರ್ತಾರ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ?
ಕಾಂಗ್ರೆಸ್​​ ಸೇರ್ತಾರ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ?