‘ಹೇಗೂ ಸುದ್ದಿ ಆಗಿದೆ, ತಂದೆ ಆಗ್ಬಿಡು ಅಂದ್ರು’; ವೈರಲ್ ವಿಡಿಯೋ ಬಗ್ಗೆ ಚಂದನ್​ ಶೆಟ್ಟಿ ಮಾತು

Rajesh Duggumane

Updated on: Jan 24, 2023 | 8:35 AM

Niveditha Gowda: ‘ಬಿಗ್​ ಬಾಸ್​ ಕನ್ನಡ ಸೀಸನ್​ 5’ರಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಇಬ್ಬರ ಮಧ್ಯೆ ಪರಸ್ಪರ ಫ್ರೆಂಡ್​ಶಿಪ್ ಬೆಳೆಯಿತು. ಇಬ್ಬರೂ ಪ್ರೀತಿಸಿದರು. ಮೂರು ವರ್ಷಗಳ ಹಿಂದೆ ಈ ಜೋಡಿ ಮದುವೆ ಆಗಿದೆ.

‘ಹೇಗೂ ಸುದ್ದಿ ಆಗಿದೆ, ತಂದೆ ಆಗ್ಬಿಡು ಅಂದ್ರು’; ವೈರಲ್ ವಿಡಿಯೋ ಬಗ್ಗೆ ಚಂದನ್​ ಶೆಟ್ಟಿ ಮಾತು
ಚಂದನ್ ಶೆಟ್ಟಿ-ನಿವೇದಿತಾ ಗೌಡ


ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ ಮದುವೆ ಆಗಿ ಮೂರು ವರ್ಷ ಕಳೆದಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಚಂದನ್ ಶೆಟ್ಟಿ ಅವರು ತಂದೆ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದಕ್ಕೆ ಕಾರಣವಾಗಿದ್ದು ಅವರು ಮಾಡಿದ ರೀಲ್ಸ್​. ಈಗ ಈ ವಿಚಾರದ ಬಗ್ಗೆ ಚಂದನ್​ ಶೆಟ್ಟಿ ಟಿವಿ9 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. ಆ ವಿಡಿಯೋ ಮಾಡಿದ್ದರ ಹಿಂದಿನ ಉದ್ದೇಶ ಏನು ಎಂಬುದನ್ನು ಹೇಳಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 5’ರಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಇಬ್ಬರ ಮಧ್ಯೆ ಪರಸ್ಪರ ಫ್ರೆಂಡ್​ಶಿಪ್ ಬೆಳೆಯಿತು. ಇಬ್ಬರೂ ಪ್ರೀತಿಸಿದರು. ಮೂರು ವರ್ಷಗಳ ಹಿಂದೆ ಈ ಜೋಡಿ ಮದುವೆ ಆಗಿದೆ. ಇತ್ತೀಚೆಗೆ ರೀಲ್ಸ್ ಒಂದನ್ನು ಚಂದನ್ ಶೆಟ್ಟಿ ಹಂಚಿಕೊಂಡಿದ್ದರು.

ವಿಡಿಯೋದಲ್ಲೇನಿದೆ?

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಸಮಯ ಸಿಕ್ಕಾಗೆಲ್ಲ ರೀಲ್ಸ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಚಂದನ್ ಅವರು ರೀಲ್ಸ್​ ಹಂಚಿಕೊಂಡಿದ್ದರು. ಈ ರೀಲ್ಸ್​ನಲ್ಲಿ Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್​ ಶೆಟ್ಟಿ ಕೇಳಿದ್ದರು. ಅದಕ್ಕೆ ಉತ್ತರ ‘ಫಾದರ್​’! ಹಾಗಾಗಿ ಚಂದನ್​ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್​ ಊಹಿಸಿದ್ದರು.

ಚಂದನ್ ಏನ್ ಅಂದ್ರು?

‘ಸಮಯ ಸಿಕ್ಕಾಗ ಮಾಡಿದ್ದ ವಿಡಿಯೋ ಅದು. ಇಂಗ್ಲಿಷ್​ನಲ್ಲಿ ಹಲವು ಶಬ್ದಗಳಿವೆ. ಅದನ್ನು ಫನ್ ಮಾಡಲು ಹೋಗಿದ್ದೆವು. ಆದರೆ, ಎಲ್ಲರೂ ಶುಭಾಶಯ ಕೋರಿದ್ರು. ಹೇಗಂದ್ರೂ ಸುದ್ದಿ ಆಗಿದೆ ತಂದೆ ಆಗ್ಬಿಡು ಎಂದು ಗೆಳೆಯನೋರ್ವ ಸಲಹೆ ಕೊಟ್ಟಿದ್ದ. ಯಾರ್ಯಾರೋ ಹೇಳಿದ್ರು, ಸುದ್ದಿ ಆಗಿದೆ ಅಂತೆಲ್ಲ ಮಗುನ ಮಾಡಿಕೊಳ್ಳೋಕೆ ಆಗಲ್ಲ. ನಾವು ಅದಕ್ಕೆ ಇನ್ನೂ ರೆಡಿ ಇಲ್ಲ. ನಾನು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದೇನೆ. ನಿವೇದಿತಾ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಇದ್ದಾಳೆ. ಸಿಹಿ ಸುದ್ದಿ ಕೊಡುವಾಗ ನಾನೇ ಕೊಡ್ತೀನಿ’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿವೇದಿತಾ ಗೌಡ-ಚಂದನ್​ ಶೆಟ್ಟಿ; ಗುಡ್​ ನ್ಯೂಸ್​ ನೀಡಿದ ಕ್ಯೂಟ್​ ಜೋಡಿ

‘ನಿವೇದಿತಾ ಬೇಸರ ಮಾಡಿಕೊಂಡಿಲ್ಲ. ಅವಳಿಗೆ ಖುಷಿ ಆಗಿದೆ. ನಮ್ಮ ಬಗ್ಗೆ ಜನರಿಗೆ ಇನ್ನೂ ಕ್ರೇಜ್ ಇದೆ ಎಂಬುದು ನಮಗೆ ಆಗಾಗ ಗೊತ್ತಾಗುತ್ತಿದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada