ಇಂದು (ಮೇ 29) ವಿಶ್ವಾದ್ಯಂತ ಅಂತಾರಾಷ್ಟ್ರೀಯ ಡ್ಯಾನ್ಸ್ ದಿನಾಚರಣೆಯನ್ನು (International Dance Day) ಆಚರಿಸಲಾಗುತ್ತಿದೆ. ಈ ದಿನ ಕರ್ನಾಕಟದ ಜನತೆಗೆ ವಿಶೇಷವಾಗಿ ನೆನಪಾಗೋದು ಪುನೀತ್ ರಾಜ್ಕುಮಾರ್ (Puneeth Rajkumar) ಅವರು. ಡ್ಯಾನ್ಸ್ ಮಾಡೋದು ಎಂದರೆ ಅವರಿಗೆ ನೀರು ಕುಡಿದಷ್ಟೇ ಸುಲಭ ಆಗಿತ್ತು. ಅವರು ಈ ವಿಚಾರದಲ್ಲಿ ಅನೇಕರಿಗೆ ಮಾದರಿ. ಅವರ ಡ್ಯಾನ್ಸ್ ನೋಡಿ ಸ್ಫೂರ್ತಿ ಪಡೆದವರ ಪಟ್ಟಿ ದೊಡ್ಡದಿದೆ. ಇಂದು ಎಲ್ಲರೂ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಡ್ಯಾನ್ಸ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗುತ್ತಿದೆ.
ಪುನೀತ್ ರಾಜ್ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಅಪ್ಪು’ ಸಿನಿಮಾ ಮೂಲಕ. ಅವರು ಸಿನಿಮಾ ರಂಗಕ್ಕೆ ಕಾಲಿಡುವಾಗಲೇ ನಟನೆ ಜೊತೆಗೆ ಡ್ಯಾನ್ಸ್ ಕೂಡ ಕಲಿತಿದ್ದರು. ಮೊದಲ ಸಿನಿಮಾದಿಂದಲೇ ಅವರು ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದರು. ಅವರು ಹಾಕುತ್ತಿದ್ದ ಸ್ಟೆಪ್ ನೋಡಿ ಅನೇಕರು ಕಣ್ಣರಳಿಸಿದ್ದಾರೆ. ಅವರು ಹಾಕುತ್ತಿದ್ದ ಸ್ಟೆಪ್ನ ಕಾಪಿ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ.
ಪುನೀತ್ ರಾಜ್ಕುಮಾರ್ ಅವರು ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈ ಚಿತ್ರದ ‘ಬಾರೋ ರಾಜ..’ ಹಾಡು ಎಲ್ಲರ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಪುನೀತ್ ರಾಜ್ಕುಮಾರ್ ಹಾಗೂ ಪ್ರಭುದೇವ. ಇಬ್ಬರೂ ಡ್ಯಾನ್ಸ್ಗೆ ಫೇಮಸ್. ಇಬ್ಬರೂ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ ಒಟ್ಟಾಗಿ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ‘ಬಾರೋ ರಾಜ..’ ಹಾಡಿನ ಮೂಲಕ ಇಬ್ಬರೂ ಒಂದಾದರು. ಈ ಹಾಡಿನಲ್ಲಿ ಪುನೀತ್ ರಾಜ್ಕುಮಾರ್ ಅವರು ಮಸ್ತ್ ಡ್ಯಾನ್ಸ್ ಮಾಡಿದರು. ಅವರು ಕಾಣಿಸಿಕೊಂಡ ಕೊನೆಯ ಹಾಡು ಡ್ಯಾನ್ಸ್ಗೆ ಸಂಬಂಧಿಸಿದ್ದಾಗಿತ್ತು.
‘ನಟಸಾರ್ವಭೌಮ’ ಚಿತ್ರದ ‘ಓಪನ್ ದಿ ಬಾಟಲ್..’ ಸೇರಿ ಅನೇಕ ಹಾಡುಗಳಲ್ಲಿ ಪುನೀತ್ ಮಸ್ತ್ ಸ್ಟೆಪ್ ಹಾಕಿದ್ದರು. ಅವರು ನಮ್ಮನ್ನು ಅಗಲಿದರೂ ಆ ಹಾಡುಗಳು, ಅವರು ಹಾಕಿದ ಸ್ಟೆಪ್ ಅಭಿಮಾನಿಗಳ ಮನಸ್ಸಲ್ಲಿ ಸದಾ ಉಳಿದುಕೊಂಡಿರುತ್ತದೆ. ಪುನೀತ್ ನಿಧನಕ್ಕೂ ಕೆಲವೇ ದಿನ ಮೊದಲ ನಡೆದ ‘ಭಜರಂಗಿ 2’ ಪ್ರೀ-ರಿಲೀಸ್ ಇವೆಂಟ್ನಲ್ಲಿ ಪುನೀತ್, ಯಶ್ ಹಾಗೂ ಶಿವರಾಜ್ಕುಮಾರ್ ಒಟ್ಟಾಗಿ ಹೆಜ್ಜೆ ಹಾಕಿದ್ದರು.
ಇದನ್ನೂ ಓದಿ: ಅಭಿಮಾನಿಯ ಮದುವೆಯಲ್ಲಿ ಪುನೀತ್, ರಾಜ್ಕುಮಾರ್ ಫೋಟೋಗಳಿಂದಲೇ ಕಲ್ಯಾಣ ಮಂಟಪದ ಸಿಂಗಾರ
ಅಕ್ಟೋಬರ್ 29, 2021ರಂದು ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಅವರನ್ನು ರಕ್ಷಿಸಿಕೊಳ್ಳಬೇಕು ಎನ್ನುವ ಕುಟುಂಬದ ಪ್ರಯತ್ನ ವಿಫಲವಾಯಿತು. ಇಡೀ ಕುಟುಂಬಕ್ಕೆ ಇದು ಆಘಾತ ತಂದಿತ್ತು. ಅವರು ನಿಧನ ಹೊಂದಿರುವ ವಿಚಾರವನ್ನು ಅಭಿಮಾನಿಗಳ ಬಳಿ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Sat, 29 April 23