
ಜಗ್ಗೇಶ್ಗೆ ರಾಯರ ಮೇಲೆ ಅಪಾರ ಭಕ್ತಿ. ಅವರ ಇಡೀ ಕುಟುಂಬ ರಾಯರ ಮೇಲೆ ಅಪಾರ ಭಕ್ತಿಯನ್ನು ಹೊಂದಿದೆ. ಗುರು ರಾಯರನ್ನು ಅವರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಜಗ್ಗೇಶ್ ಅವರ ಬದುಕು ಸಂಪೂರ್ಣವಾಗಿ ಬದಲಾಗಿದ್ದು ರಾಯರಿಂದ ಎಂದು ಅವರು ಅಪಾರವಾಗಿ ನಂಬುತ್ತಾರೆ. ಗುರುವಿನ ಮೇಲಿನ ನಂಬಿಕೆಯನ್ನು ಅವರು ಎಂದಿಗೂ ಕಳೆದುಕೊಳ್ಳುವುದಿಲ್ಲ. ತಮ್ಮ ಜೀವನ ರಾಯರಿಮದ ಯಾವ ರೀತಿಯಲ್ಲಿ ಬದಲಾಯಿತು ಎಂಬುದನ್ನು ಅವರು ಈ ಮೊದಲು ಹೇಳಿದ್ದರು. ಗುರು ಪೂರ್ಣಿಮೆ (Guru Poornima) ದಿನ ಅದನ್ನು ನೆನಪಿಸಿಕೊಳ್ಳೋಣ.
‘ಪರಿಮಳ ಎಂಬ ಪಕ್ಕದ ರಾಜ್ಯದ ಮಹಿಳೆ. ಅವಳಿಗೂ ನನಗೂ ಸಂಬಂಧವೇ ಇರಲಿಲ್ಲ. ಈ ಹೆಸರನ್ನು ಇಡಿಸಿದ್ದು ರಾಯರು. ರಾಯರು ಜನ್ಮ ಜನ್ಮವನ್ನು ನೋಡ್ತಾರೆ. ನಾವಿಬ್ಬರೂ ಮದುವೆ ಆದೆವು. ಮದುವೆ ಆದ ಬಳಿಕ ನಮ್ಮನ್ನು ಹೊರಕ್ಕೆ ಹಾಕಿದರು. ಆಗಿನ ಕಾಲದಲ್ಲಿ ಪ್ರೇಮ ವಿವಾಹವನ್ನು ಬೆಂಬಲಿಸುತ್ತಿರಲಿಲ್ಲ. ನಾವು ಹಳ್ಳಿಯಿಂದ ನೇರವಾಗಿ ಬೆಂಗಳೂರಿನ ಗೋವರ್ಧನ ಥಿಯೇಟರ್ ಬಳಿ ಬಂದೆವು. ಅಲ್ಲಿ ಮಂತ್ರಾಲಯ ಬಸ್ ಕಾಣುತ್ತದೆ. ಬಸ್ ಹತ್ತಿ ನಾವು ಅಲ್ಲಿಗೆ ಹೋದೆವು’ ಎಂದು ಜಗ್ಗೇಶ್ ಹೇಳಿದರು. ಅ
‘ನಿತ್ಯ ಮಠದಲ್ಲಿ ಹೊಟ್ಟೆ ತುಂಬ ಊಟ ಮಾಡೋದು. ರಾಯರ ಗುಡಿ ಹುಚ್ಚರ ರೀತಿ ಸುತ್ತೋದು. ಅಲ್ಲೊಂದು ಆನೆ ಇತ್ತು, ಅದನ್ನು ನೋಡೋದು. ಟೆಂಟ್ ಇಟ್ಟಿದ್ದರು, ಟೆಂಟ್ನಲ್ಲಿ ಸಿನಿಮಾ ನೋಡದು. ಇದೇ ಕೆಲಸ ಆಗಿತ್ತು. ದಯವಿಟ್ಟು ನನ್ನತ್ರ ಕರೆದುಕೊಳ್ಳಿ ಎಂದು ರಾಯರ ಬಳಿ ಕೇಳಿದೆ. ವೃತ್ತಿ ಹಾಗೂ ಪತ್ನಿಯನ್ನು ಜೋಪಾನ ಮಾಡಿಕೊಳ್ಳಬೇಕು ಎಂದು ಕೇಳಿದೆ’ ಎಂದಿದ್ದರು ಜಗ್ಗೇಶ್.
‘ಪತ್ನಿ ಬಳಿ ಹೇಳಿದೆ.. ನಮಗೆ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಒಬ್ಬನಿಗೆ ಗುರುರಾಜ್, ಮತ್ತೊಬ್ಬನಿಗೆ ಯತಿರಾಜ್ ಎಂದು ಇಡ್ತೀನಿ ಎಂದೆ. ಹಾಗೆಯೇ ಆಯ್ತು. ಮೊಮ್ಮೊಗನಿಗೆ ಅರ್ಜುನ ಎಂದು ಹೆಸರು ಇಟ್ಟೆ. ನನ್ನ ಪುಟ್ಟ ಪರಿವಾರ ರಾಯರ ಕುಟುಂಬ ಆಯ್ತು’ ಎಂದಿದ್ದರು ಅವರು.
ಇದನ್ನೂ ಓದಿ: ಗುರುಪೂರ್ಣಿಮೆ: ಗುರು ರಾಯರಿಂದ ಸಾಕಷ್ಟು ಪ್ರಭಾವಿತರಾಗಿದ್ದ ರಾಜ್ಕುಮಾರ್
‘ರಾಜ್ಕುಮಾರ್ ಎರಡನೇ ರಾಯರ ತರಹ ಕಂಡರು. ಅವರು ರಾಯರ ಕಥೆ ಹೇಳಿದರು. ರಾಯರ ಮೇಲಿನ ನಂಬಿಕೆ ಹೆಚ್ಚುವಂತೆ ಮಾಡಿದರು’ ಎಂದು ಹೇಳಿದ್ದರು ಜಗ್ಗೇಶ್. ರಾಜ್ಕುಮಾರ್ ಹಾಗೂ ಜಗ್ಗೇಶ್ ಸೇರಿದಾಗಲೆಲ್ಲ ರಾಯರ ಬಗ್ಗೆಯೇ ಚರ್ಚೆಗಳು ಆಗುತ್ತಿದ್ದವಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:08 am, Thu, 10 July 25