ನಟಿ ಮೃಣಾಲ್ ಠಾಕೂರ್​​ಗೆ ಬಂತು ಮದುವೆ ಪ್ರಪೋಸಲ್​; ಒಂದೇ ಮಾತಲ್ಲಿ ರಿಜೆಕ್ಟ್ ಮಾಡಿದ ನಟಿ

|

Updated on: Feb 28, 2023 | 8:01 AM

ಸೋಫಾ ಮೇಲೆ ಕುಳಿತು ಕೂದಲು ಹಾರುತ್ತಿರುವುದನ್ನು ಸ್ಲೋಮೋಷನ್​ನಲ್ಲಿ ಸೆರೆ ಹಿಡಿದಿದ್ದಾರೆ ಮೃಣಾಲ್ ಠಾಕೂರ್. ಇದನ್ನು ಅವರು ಹಂಚಿಕೊಂಡಿದ್ದಾರೆ.

ನಟಿ ಮೃಣಾಲ್ ಠಾಕೂರ್​​ಗೆ ಬಂತು ಮದುವೆ ಪ್ರಪೋಸಲ್​; ಒಂದೇ ಮಾತಲ್ಲಿ ರಿಜೆಕ್ಟ್ ಮಾಡಿದ ನಟಿ
ಮೃಣಾಲ್ ಠಾಕೂರ್
Follow us on

ನಟಿ ಮೃಣಾಲ್ ಠಾಕೂರ್ (Mrunal Thakur) ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಇದಕ್ಕೆ ಕಾರಣ ಆಗಿದ್ದು ‘ಸೀತಾ ರಾಮಂ’ ಚಿತ್ರ. ಈ ಸಿನಿಮಾಗೆ ವಿಮರ್ಶಕರಿಂದ, ಜನರಿಂದ ಮೆಚ್ಚುಗೆ ಸಿಕ್ಕಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸ್​ನಲ್ಲೂ ಒಳ್ಳೆಯ ಕಮಾಯಿ ಮಾಡಿದೆ. ಈ ಚಿತ್ರದಲ್ಲಿ ದುಲ್ಖರ್ ಸಲ್ಮಾನ್ ಹಾಗೂ ಮೃಣಾಲ್ ಕೆಮಿಸ್ಟ್ರಿ ಕೆಲಸ ಮಾಡಿತ್ತು. ಹೀಗಾಗಿ, ಈ ನಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಫ್ಯಾನ್ಸ್​​ಗೋಸ್ಕರ ಮೃಣಾಲ್ ಅವರು ಹೊಸ ಹೊಸ ಪೋಸ್ಟ್ ಹಂಚಿಕೊಳ್ಳುತ್ತಾ ಇರುತ್ತಾರೆ. ಅವರು ಹಂಚಿಕೊಂಡಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಈ ಪೋಸ್ಟ್​ಗೆ ಅಭಿಮಾನಿ ಕಡೆಯಿಂದ ಮದುವೆ ಪ್ರಪೋಸಲ್ ಬಂದಿದ್ದು, ಮೃಣಾಲ್​ ಕಡೆಯಿಂದ ಇದಕ್ಕೆ ಉತ್ತರ ಸಿಕ್ಕಿದೆ.

ಸೋಫಾ ಮೇಲೆ ಕುಳಿತು ಕೂದಲು ಹಾರುತ್ತಿರುವುದನ್ನು ಸ್ಲೋಮೋಷನ್​ನಲ್ಲಿ ಸೆರೆ ಹಿಡಿದಿದ್ದಾರೆ ಮೃಣಾಲ್ ಠಾಕೂರ್. ಇದನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಅವರು, ‘ಕ್ಯೂಟ್ ಆಗಿ ಕಾಣುತ್ತಿದೆ. ಬಹುಶಃ ನಂತರ ವಿಡಿಯೋ ಡಿಲೀಟ್ ಮಾಡಬಹುದು’ ಎಂದಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ನಟಿ ಇಶಾ ಗುಪ್ತಾ ಅವರು, ‘ಡಿಲೀಟ್ ಮಾಡಬೇಡಿ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ
Jr NTR: ಜೂನಿಯರ್​ ಎನ್​ಟಿಆರ್​ ಮನೆಯಲ್ಲಿ ಅಪ್ಪು ಫೋಟೋ; ಕರುನಾಡ ಗೆಳೆಯನಿಗೆ ತೆಲುಗು​ ನಟನ ಗೌರವ
ಪುನೀತ್​ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ; ​ ನಟ ಜೂ. ಎನ್​ಟಿಆರ್-ರಜನಿಕಾಂತ್​ ಭಾಗಿ
ಜ್ಯೂ. ಎನ್​ಟಿಆರ್ ಭೇಟಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ​; ಇಲ್ಲಿದೆ ಫೋಟೋ ಗ್ಯಾಲರಿ
‘ಪುನೀತ್​ ನಟನೆಯ ಜೇಮ್ಸ್​ ನೋಡಿದ್ರಾ?’; ಈ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಜ್ಯೂ.ಎನ್​ಟಿಆರ್​

ಸೆಲೆಬ್ರಿಟಿಗಳ ಪೋಸ್ಟ್​​ಗೆ ಮದುವೆ ಪ್ರಪೋಸಲ್, ಲವ್ ಪ್ರಪೋಸಲ್ ಬರೋದು ಕಾಮನ್. ಅದೇ ರೀತಿ ಮೃಣಾಲ್​ ಪೋಸ್ಟ್​ಗೆ ಮದುವೆ ಪ್ರಪೋಸಲ್ ಬಂದಿದೆ. ‘ನನ್ನ ಕಡೆಯಿಂದ ಸಂಬಂಧ ಬೆಳೆಸಲು ಒಪ್ಪಿಗೆ ಇದೆ’ ಎಂದು ಅಭಿಮಾನಿ ಬರೆದುಕೊಂಡಿದ್ದ. ಇದಕ್ಕೆ ಉತ್ತರಿಸಿರುವ ನಟಿ, ‘ನನ್ನ ಕಡೆಯಿಂದ ಸಂಬಂಧ ಬೆಳೆಸಲು ಅನುಮತಿ ಇಲ್ಲ’ ಎಂದಿದ್ದಾರೆ. ಮೃಣಾಲ್ ಠಾಕೂರ್ ಅವರ ಉತ್ತರ ಸಿಕ್ಕಿದ್ದಕ್ಕೆ ಅಭಿಮಾನಿ ಖುಷಿಪಟ್ಟಿದ್ದಾನೆ.

ಇದನ್ನೂ ಓದಿ: Mrunal Thakur: ‘ಎನ್​ಟಿಆರ್​ 30’ ಚಿತ್ರಕ್ಕೆ ಮೃಣಾಲ್​ ಠಾಕೂರ್​ ನಾಯಕಿ? ‘ಸೀತಾ ರಾಮಂ’ ಸುಂದರಿಗೆ ಭರ್ಜರಿ ಆಫರ್​

ಮೃಣಾಲ್ ಅವರು ಚಿತ್ರರಂಗಕ್ಕೆ ಬಂದಿದ್ದು 2014ರಲ್ಲಿ. ಅವರು ಮರಾಠಿ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದರು. ನಂತರ ಸಾಲು ಸಾಲು ಹಿಂದಿ ಚಿತ್ರಗಳಲ್ಲಿ ನಟಿಸಿದರು. ಅವರು ನಟಿಸಿದ ಮೊದಲ ತೆಲುಗು ಸಿನಿಮಾ ‘ಸೀತಾ ರಾಮಂ’ ಸಾಕಷ್ಟು ಜನಪ್ರಿಯತೆ ಪಡೆಯಿತು. ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಹೊಡೆಸಿಕೊಂಡ ‘ಸೆಲ್ಫೀ’ ಚಿತ್ರದಲ್ಲಿ ಮೃಣಾಲ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಸದ್ಯ ಅವರ ಕೈಯಲ್ಲಿ ಐದು ಚಿತ್ರಗಳಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ