Mallika Singh: ಕನ್ನಡ ಚಿತ್ರ ಒಪ್ಪಿಕೊಂಡ ‘ರಾಧಾ ಕೃಷ್ಣ’ ಧಾರಾವಾಹಿ​ ನಟಿ ಮಲ್ಲಿಕಾ ಸಿಂಗ್​; ವಿನಯ್​ ರಾಜ್​ಕುಮಾರ್​ಗೆ ಜೋಡಿ

Vinay Rajkumar | Simple Suni: ಸಿಂಪಲ್​ ಸುನಿ ಮತ್ತು ವಿನಯ್​ ರಾಜ್​ಕುಮಾರ್​ ಕಾಂಬಿನೇಷನ್​ನ ಚಿತ್ರದಲ್ಲಿ ಮಲ್ಲಿಕಾ ಸಿಂಗ್​ ನಟಿಸುತ್ತಾರೆ ಎಂದು ವರದಿ ಆಗಿದೆ. ಈ ಚಿತ್ರದ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ.

Mallika Singh: ಕನ್ನಡ ಚಿತ್ರ ಒಪ್ಪಿಕೊಂಡ ‘ರಾಧಾ ಕೃಷ್ಣ’ ಧಾರಾವಾಹಿ​ ನಟಿ ಮಲ್ಲಿಕಾ ಸಿಂಗ್​; ವಿನಯ್​ ರಾಜ್​ಕುಮಾರ್​ಗೆ ಜೋಡಿ
ವಿನಯ್​ ರಾಜ್​ಕುಮಾರ್​, ಮಲ್ಲಿಕಾ ಸಿಂಗ್​
Follow us
ಮದನ್​ ಕುಮಾರ್​
|

Updated on: Feb 27, 2023 | 8:43 PM

ನಟಿ ಮಲ್ಲಿಕಾ ಸಿಂಗ್ (Mallika Singh)​ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಬರೀ ಮಲ್ಲಿಕಾ ಸಿಂಗ್​ ಎಂದರೆ ಕೆಲವರಿಗೆ ಗೊತ್ತಾಗದೇ ಇರಬಹುದು. ‘ರಾಧಾ ಕೃಷ್ಣ’ ಧಾರಾವಾಹಿಯ (Radha Krishna Serial) ರಾಧೆ ಎಂದರೆ ಎಲ್ಲರಿಗೂ ತಿಳಿಯುತ್ತದೆ. ರಾಧೆ ಪಾತ್ರದಿಂದಾಗಿ ಅವರು ಅಷ್ಟು ಫೇಮಸ್​ ಆಗಿದ್ದಾರೆ. ವಿಶೇಷ ಏನೆಂದರೆ, ಈ ನಟಿ ಈಗ ಕನ್ನಡದ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ. ಆ ಮೂಲಕ ಅವರು ಚಂದನವನಕ್ಕೆ ಎಂಟ್ರಿ ನೀಡುತ್ತಿದ್ದಾರೆ. ತಮ್ಮ ಮೊದಲ ಕನ್ನಡ ಸಿನಿಮಾದಲ್ಲಿ ಅವರು ವಿನಯ್​ ರಾಜ್​ಕುಮಾರ್​ (Vinay Rajkumar) ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಸಿಂಪಲ್​ ಸುನಿ ನಿರ್ದೇಶನ ಮಾಡುತ್ತಿದ್ದಾರೆ. ಮಲ್ಲಿಕಾ ಸಿಂಗ್​ ಅವರು ಕನ್ನಡ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ‘ಸಿನಿಮಾ ಎಕ್ಸ್​ಪ್ರೆಸ್​’ ವರದಿ ಮಾಡಿದೆ.

ನಿರ್ದೇಶಕ ಸಿಂಪಲ್​ ಸುನಿ ಮತ್ತು ನಟ ವಿನಯ್​ ರಾಜ್​ಕುಮಾರ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಈಗಾಗಲೇ ಮೊದಲ ಹಂತದ ಶೂಟಿಂಗ್​ ಮುಗಿದಿದೆ. ಪಾತ್ರವರ್ಗದ ಬಗ್ಗೆ ಈಗ ಅಪ್​ಡೇಟ್​ ಸಿಕ್ಕಿದೆ. ಮಲ್ಲಿಕಾ ಸಿಂಗ್​ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಆ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ: ಸೀರಿಯಲ್​ ನೋಡಿ ಕಾಲ ಕಳೆಯುತ್ತಿರುವ ಯಡಿಯೂರಪ್ಪ; ಮಾಜಿ ಸಿಎಂ ಮೆಚ್ಚಿನ ಧಾರಾವಾಹಿಗಳು ಇವು

ಇದನ್ನೂ ಓದಿ
Image
ಈ ಬಾರಿಯ ಲಾಲ್​ಬಾಗ್ ಫ್ಲಾವರ್ ಶೋ ಮೂಲಕ ಡಾ ರಾಜ್ ಮತ್ತು ಪುನೀತ್ ರಾಜಕುಮಾರರಿಗೆ ಶ್ರದ್ಧಾಂಜಲಿ!
Image
Dr Rajkumar: ಡಾ. ರಾಜ್​ಕುಮಾರ್​​ ನಟನೆಯ ‘ಭಾಗ್ಯವಂತರು’ ಚಿತ್ರ ಜುಲೈ 8ಕ್ಕೆ ಮತ್ತೆ ರಿಲೀಸ್​; ಈ ಬಾರಿ ವಿಶೇಷ ಏನು?
Image
ತುಂಬಾ ಪುಣ್ಯ ಮಾಡಿದ್ರೇನೇ ಅಣ್ಣಾವ್ರ ಜತೆ ನಟಿಸೋಕೆ ಆಗೋದು; ನಟಿ ಲಕ್ಷ್ಮೀ
Image
‘ಬಂಗಾರದ ಮನುಷ್ಯ’ ಚಿತ್ರಕ್ಕೆ 50 ವರ್ಷ; ಅಣ್ಣಾವ್ರು ನಟಿಸಿದ ಈ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ

‘ಸ್ಟಾರ್​ ಭಾರತ್​’ ವಾಹಿನಿಯಲ್ಲಿ ‘ರಾಧಾ ಕೃಷ್ಣ’ ಹಿಂದಿ ಸೀರಿಯಲ್​ ಪ್ರಸಾರ ಆಯಿತು. ಈ ಧಾರಾವಾಹಿಯಲ್ಲಿ ರಾಧೆ ಆಗಿ ಮಿಂಚುವ ಅವಕಾಶ ಮಲ್ಲಿಕಾ ಸಿಂಗ್​ ಅವರಿಗೆ ಸಿಕ್ಕಿತು. ಆ ಪಾತ್ರದಿಂದಾಗಿ ಅವರು ಮನೆಮಾತಾದರು. ಮೊದಲ ಕೊವಿಡ್​ ಲಾಕ್​ಡೌನ್​ ಸಂದರ್ಭದಲ್ಲಿ ಈ ಧಾರಾವಾಹಿಯು ಕನ್ನಡಕ್ಕೆ ಡಬ್​ ಆಗಿ ಪ್ರಸಾರ ಕಂಡಿತು. ಆ ಮೂಲಕ ಕರುನಾಡಿನಲ್ಲಿಯೂ ಮಲ್ಲಿಕಾ ಸಿಂಗ್​ ಅವರು ಜನಪ್ರಿಯತೆ ಪಡೆದುಕೊಂಡರು. ಈಗ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆಯುತ್ತಿರುವುದು ಕರುನಾಡಿನಲ್ಲಿನ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ: Radhika Madan: ಧಾರಾವಾಹಿಗಳಿಂದ ಫೇಮಸ್​ ಆದ ಬಳಿಕ ಕಿರುತೆರೆ ಬಗ್ಗೆಯೇ ಕಟು ಟೀಕೆ ಮಾಡಿದ ರಾಧಿಕಾ ಮದನ್​

‘ರಾಧಾ ಕೃಷ್ಣ’ ಸೀರಿಯಲ್​ ಮಾತ್ರವಲ್ಲದೇ ‘ಜೈ ಕನ್ಹಯ್ಯಾ ಲಾಲ್​ ಕಿ’ ಧಾರಾವಾಹಿಯಲ್ಲೂ ಮಲ್ಲಿಕಾ ಸಿಂಗ್​ ನಟಿಸಿದ್ದಾರೆ. ಅದರಲ್ಲಿ ಅವರು ಲಕ್ಷ್ಮೀ ದೇವಿಯ ಪಾತ್ರ ಮಾಡಿದ್ದಾರೆ. ಇನ್ನು, ಹಿಂದಿಯ ‘ಗಲ್ಲಿ ಬಾಯ್​’ ಸಿನಿಮಾ ಮೂಲಕ ಅವರು ಬಾಲಿವುಡ್​ಗೂ ಕಾಲಿಟ್ಟರು.

ಇದನ್ನೂ ಓದಿ: Kannadathi Serial: ಸುಖಾಂತ್ಯ ಕಂಡ ‘ಕನ್ನಡತಿ’ ಧಾರಾವಾಹಿ; 800ನೇ ಎಪಿಸೋಡ್​ಗೆ ಶುಭಂ ಕಾರ್ಡ್​

ವಿನಯ್​ ರಾಜ್​ಕುಮಾರ್​ ನಟನೆಯ ಸಿನಿಮಾದಲ್ಲಿ ಮಲ್ಲಿಕಾ ಸಿಂಗ್​ ಅವರು ಕಾಶ್ಮೀರಿ ಹುಡುಗಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಮಲ್ಲಿಕಾ ಸಿಂಗ್​ ಸಖತ್​ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು