Upendra: ನಟ ಉಪೇಂದ್ರ ತಲೆಗೆ ರಾಡ್​ನಿಂದ ಪೆಟ್ಟು! ಕಬ್ಜ ಸಿನಿಮಾ ಶೂಟಿಂಗ್​ ವೇಳೆ ಅವಘಡ

Kabza Movie: ಆರ್. ಚಂದ್ರು ನಿರ್ದೇಶನ ಮಾಡುತ್ತಿರುವ ‘ಕಬ್ಜ’ ಸಿನಿಮಾದ ಚಿತ್ರೀಕರಣದ ವೇಳೆ ಸಹನಟ ರಾಡ್​ ಬೀಸಿದಾಗ ಉಪೇಂದ್ರ ತಪ್ಪಿಸಿಕೊಳ್ಳಬೇಕಿತ್ತು. ಆದರೆ ತಪ್ಪಿಸಿಕೊಳ್ಳಲು ಸಾಧ್ಯವಾಗದ ಕಾರಣ ರಿಯಲ್​ ಸ್ಟಾರ್​ ತಲೆಗೆ ಗಾಯವಾಗಿದೆ.

Upendra: ನಟ ಉಪೇಂದ್ರ ತಲೆಗೆ ರಾಡ್​ನಿಂದ ಪೆಟ್ಟು! ಕಬ್ಜ ಸಿನಿಮಾ ಶೂಟಿಂಗ್​ ವೇಳೆ ಅವಘಡ
ಉಪೇಂದ್ರ - ಕಬ್ಜ ಸಿನಿಮಾ ಪೋಸ್ಟರ್​

Updated on: Apr 03, 2021 | 10:46 AM

‘ರಿಯಲ್​ ಸ್ಟಾರ್​’ ಉಪೇಂದ್ರ ಅಭಿಮಾನಿಗಳ ಪಾಲಿಗೆ ಇದು ಬ್ಯಾಡ್​ ನ್ಯೂಸ್​. ಬಹುನಿರೀಕ್ಷಿತ ಕಬ್ಜ ಸಿನಿಮಾದ ಶೂಟಿಂಗ್​ ಸಮಯದಲ್ಲಿ ಅವಘಡ ಸಂಭವಿಸಿದ್ದು, ನಟ ಉಪೇಂದ್ರ ತಲೆಗೆ ಪೆಟ್ಟಾಗಿದೆ. ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಫೈಟಿಂಗ್​ ದೃಶ್ಯವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಸಹ ನಟ ಮಾಡಿದ ತಪ್ಪಿನಿಂದಾಗಿ ಉಪೇಂದ್ರ ಗಾಯಗೊಂಡಿದ್ದಾರೆ.

ಖ್ಯಾತ ನಿರ್ದೇಶಕ ಆರ್​. ಚಂದ್ರು ಅವರು ‘ಕಬ್ಜ’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಬಹುಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ವಿಭಿನ್ನ ಗೆಟಪ್​ ಇದೆ. ಅಂಡರ್​ವರ್ಲ್ಡ್​ ಕಥಾಹಂದರ ಇರುವುದರಿಂದ ಆ್ಯಕ್ಷನ್​ ದೃಶ್ಯಗಳು ಭರ್ಜರಿಯಾಗಿ ಇರಲಿವೆ. ಅದಕ್ಕಾಗಿ ಹಲವು ಬಗೆಯ ಸೆಟ್​ಗಳನ್ನು ಹಾಕಲಾಗಿದೆ. ಮಿನರ್ವ ಮಿಲ್​ನಲ್ಲಿ ಆಯಿಲ್​ ಮಾರ್ಕೆಟ್​ನ ಸೆಟ್​ ಹಾಕಿ ಚಿತ್ರೀಕರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಉಪೇಂದ್ರ ಅವರಿಗೆ ಪೆಟ್ಟಾಗಿದೆ.

ಸಾಹಸ ನಿರ್ದೇಶಕ ರವಿವರ್ಮಾ ಅವರ ನೇತೃತ್ವದಲ್ಲಿ ಫೈಟಿಂಗ್​ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸಹನಟ ರಾಡ್​ ಬೀಸಿದಾಗ ಉಪೇಂದ್ರ ತಪ್ಪಿಸಿಕೊಳ್ಳಬೇಕಿತ್ತು. ಆದರೆ ತಪ್ಪಿಸಿಕೊಳ್ಳಲು ಸಾಧ್ಯವಾಗದ ಕಾರಣ ರಿಯಲ್​ ಸ್ಟಾರ್​ ತಲೆಗೆ ಗಾಯವಾಗಿದೆ. ಪೆಟ್ಟಾಗಿದ್ದರೂ ಕೂಡ ಅವರು ಶೂಟಿಂಗ್​ ಮುಗಿಸಿ ಮನೆಗೆ ತೆರಳಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಡಿಫರೆಂಟ್​ ಆದ ಪೋಸ್ಟರ್​ಗಳ ಮೂಲಕವೇ ಕಬ್ಜ ಸಿನಿಮಾ ಗಮನ ಸೆಳೆದಿದೆ. ಜಗಪತಿ ಬಾಬು ಅವರಂತಹ ಘಟಾನುಘಟಿ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ಕಿಚ್ಚ ಸುದೀಪ್​ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ರವಿ ಬಸ್ರೂರು ಸಂಗೀತ ನಿರ್ದೇಶನ ಹಾಗೂ ಎ.ಜೆ. ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಲಾಕ್​ಡೌನ್​ ಕಾರಣದಿಂದಾಗಿ ಚಿತ್ರದ ಕೆಲಸಗಳು ತಡವಾಗಿದ್ದವು. ಈಗ ಉಪೇಂದ್ರ ಗಾಯಗೊಂಡಿರುವುದರಿಂದ ತಂಡಕ್ಕೆ ಮತ್ತೆ ವಿಘ್ನ ಎದುರಾದಂತಾಗಿದೆ.

ಇದನ್ನೂ ಓದಿ: ವರುಣ್​ ತೇಜ ಜತೆ ಟಾಲಿವುಡ್​ನಲ್ಲಿ ನಟಿಸಲಿದ್ದಾರೆ ಉಪೇಂದ್ರ!

‘ಕಬ್ಜ’ ಮಾಡಲು ಲಾಂಗ್ ಹಿಡಿದ ಸ್ಯಾಂಡಲ್​ವುಡ್​ನ ಸೂಪರ್​ ಸ್ಟಾರ್​ ಉಪೇಂದ್ರ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us