ರಷ್ಯಾ ವ್ಯಕ್ತಿಯ ಮದುವೆಯಾದ ‘ಕಬ್ಜ’ ನಾಯಕಿ ಶ್ರೀಯಾ ಶರಣ್​ ಬಗ್ಗೆ ನಿಮಗೆಷ್ಟು ಗೊತ್ತು?  

| Updated By: ರಾಜೇಶ್ ದುಗ್ಗುಮನೆ

Updated on: Sep 19, 2022 | 4:03 PM

ಶ್ರೀಯಾ ಶರಣ್​ಗೆ ಈಗ 40 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಯುವ ನಟಿಯರನ್ನೂ ನಾಚಿಸುವಂತಿದ್ದಾರೆ. ಅವರು ಜನಿಸಿದ್ದು ಉತ್ತರ ಪ್ರದೇಶದ ಹರಿದ್ವಾರದಲ್ಲಿ. 2001ರಲ್ಲಿ ತೆರೆಗೆ ಬಂದ ತೆಲುಗಿನ ‘ಇಷ್ಟಂ’ ಅವರ ಮೊದಲ ಸಿನಿಮಾ.

ರಷ್ಯಾ ವ್ಯಕ್ತಿಯ ಮದುವೆಯಾದ ‘ಕಬ್ಜ’ ನಾಯಕಿ ಶ್ರೀಯಾ ಶರಣ್​ ಬಗ್ಗೆ ನಿಮಗೆಷ್ಟು ಗೊತ್ತು?  
Follow us on

‘ಕಬ್ಜ’ ಸಿನಿಮಾದ (Kabza Movie) ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಉಪ್ಪಿ ಜತೆ ಸುದೀಪ್ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅಂಡರ್​​ವರ್ಲ್ಡ್​ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದ ಟೀಸರ್ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ನಟಿ ಶ್ರೀಯಾ ಶರಣ್ (Shriya Saran) ಅವರು ‘ಕಬ್ಜ’ ಚಿತ್ರಕ್ಕೆ ನಾಯಕಿ. ಈ ಚಿತ್ರದಲ್ಲಿ ಅವರು ಮಧುಮತಿ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರ ಕನ್ನಡ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಶ್ರೀಯಾ ಶರಣ್ ಖಾಸಗಿ ಬದುಕಿನ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಗೊತ್ತಿರದ ವಿಚಾರಗಳು ಸಾಕಷ್ಟಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಶ್ರೀಯಾ ಶರಣ್​ಗೆ ಈಗ 40 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಯುವ ನಟಿಯರನ್ನೂ ನಾಚಿಸುವಂತಿದ್ದಾರೆ. ಅವರು ಜನಿಸಿದ್ದು ಉತ್ತರ ಪ್ರದೇಶದ ಹರಿದ್ವಾರದಲ್ಲಿ. 2001ರಲ್ಲಿ ತೆರೆಗೆ ಬಂದ ತೆಲುಗಿನ ‘ಇಷ್ಟಂ’ ಅವರ ಮೊದಲ ಸಿನಿಮಾ. ನಂತರ ಅವರು ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡರು.

ನಂತರ ಶ್ರೀಯಾಗೆ ಹಿಂದಿ, ತಮಿಳು ಸಿನಿಮಾಗಳಿಂದಲೂ ಆಫರ್​ಗಳು ಬರೋಕೆ ಆರಂಭ ಆದವು. ಶ್ರೀಯಾ ಹೆಚ್ಚು ಕಾಣಿಸಿಕೊಂಡಿದ್ದು ಟಾಲಿವುಡ್​ನಲ್ಲಿ. ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ನಟನೆಯ ‘ಅರಸು’ ಸಿನಿಮಾದಲ್ಲಿ ಶ್ರೀಯಾ ಅವರು ಅತಿಥಿ ಪಾತ್ರ ಮಾಡಿ ಗಮನ ಸೆಳೆದಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾ. ನಂತರ ಒಂದು ಕನ್ನಡ ಸಿನಿಮಾದಲ್ಲಿ ಅವರು ನಟಿಸಿದ್ದರು. ಈಗ ‘ಕಬ್ಜ’ ಚಿತ್ರದ ಮೂಲಕ ಶ್ರೀಯಾ ಅವರು ಕನ್ನಡ ಪ್ರೇಕ್ಷಕರನ್ನು ಮತ್ತೆ ಎದುರುಗೊಳ್ಳುತ್ತಿದ್ದಾರೆ.

ಇದನ್ನೂ ಓದಿ
Kabzaa Teaser: ಹೇಗಿದೆ ನೋಡಿ ‘ಕಬ್ಜ’ ಟೀಸರ್​; ಹೊಸ ಹವಾ ಎಬ್ಬಿಸಿದ ಉಪೇಂದ್ರ-ಸುದೀಪ್​ ಚಿತ್ರದ ಝಲಕ್​
Kabza: ‘ಕಬ್ಜ’ ಟೀಸರ್​ ಬಗ್ಗೆ ಮಾತಾಡಿದ ಕಿಚ್ಚ ಸುದೀಪ್​; ಉಪ್ಪಿ ಅಭಿಮಾನಿಗಳಲ್ಲಿ ಜೋರಾಯ್ತು ಕ್ರೇಜ್​
Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್​ ಕೆಲಸ
ಶ್ರೀಯಾ ಶರಣ್​ ಮಗಳಿಗೆ ರಾಧಾ ಎಂದು ಹೆಸರು ಇಟ್ಟಿದ್ದೇಕೆ? ಇದಕ್ಕಿದೆ ರಷ್ಯಾದ ಕನೆಕ್ಷನ್​

ಶ್ರೀಯಾ ಅವರು ವೈಯಕ್ತಿಕ ಜೀವನದ ಬಗ್ಗೆ ಯಾವುದೇ ವಿಚಾರಗಳನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಅವರ ಬಗ್ಗೆ ಕೇಳಿಬರುವ ವದಂತಿಗಳನ್ನು ಅಲ್ಲಗಳೆಯುತ್ತಾರೆ. ಶ್ರೀಯಾ ಅವರು ರಷ್ಯಾ ಮೂಲದ ಆ್ಯಂಡ್ರೇ ಕೊಸ್ಚೆವ್ ಅವರ ಜತೆ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇದನ್ನು ಅವರು ಅಲ್ಲಗಳೆದಿದ್ದರು. 2018ರಲ್ಲಿ ಇಬ್ಬರೂ ಮದುವೆ ಆದರು. ಶ್ರೀಯಾ ಶರಣ್​ಗೆ 2021ರ ಜನವರಿ 10ರಂದು ಹೆಣ್ಣು ಮಗು ಜನಿಸಿತ್ತು. ಅದೇ ವರ್ಷ ಅಕ್ಟೋಬರ್ 12ರಂದು ಈ ವಿಚಾರವನ್ನು ಶ್ರೀಯಾ ರಿವೀಲ್ ಮಾಡಿದ್ದರು.

ಇದನ್ನೂ ಓದಿ: ಶ್ರೀಯಾ ಶರಣ್​ ಮಗಳಿಗೆ ರಾಧಾ ಎಂದು ಹೆಸರು ಇಟ್ಟಿದ್ದೇಕೆ? ಇದಕ್ಕಿದೆ ರಷ್ಯಾದ ಕನೆಕ್ಷನ್​

‘ಕೆಜಿಎಫ್​’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಿಂದ ನಟಿ ಶ್ರೀನಿಧಿ ಶೆಟ್ಟಿ ಖ್ಯಾತಿ ಹೆಚ್ಚಿದೆ. ‘ಕಬ್ಜ’ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾದಿಂದ ಶ್ರೀಯಾ ಖ್ಯಾತಿ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.

Published On - 3:50 pm, Mon, 19 September 22