Puneeth Birth Anniversary Live: ಮಧ್ಯಾಹ್ನವಾದ್ರೂ ಅಪ್ಪು ಸಮಾಧಿ ಬಳಿ ಕಡಿಮೆ ಆಗಿಲ್ಲ ಫ್ಯಾನ್ಸ್
Kabzaa Movie, Puneeth Birth Anniversary, Jaggesh Birthday Live Updates: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಅಪ್ಪು ಫ್ಯಾನ್ಸ್ ನೆರೆದಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ನಿಯೋಜನೆ ಮಾಡಲಾಗಿದೆ. ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಆ ಬಗ್ಗೆ ಇಲ್ಲಿದೆ ಲೈವ್ ಅಪ್ಡೇಟ್ಸ್.

LIVE NEWS & UPDATES
-
Puneeth Birthday Live: ಮಧ್ಯಾಹ್ನವಾದ್ರೂ ಕಡಿಮೆ ಆಗಿಲ್ಲ ಅಪ್ಪು ಅಭಿಮಾನಿಗಳ ಉತ್ಸಾಹ
ಮಧ್ಯಾಹ್ನವಾದ್ರೂ ಅಪ್ಪು ಅಭಿಮಾನಿಗಳ ಉತ್ಸಾಹ ಕಡಿಮೆ ಆಗಿಲ್ಲ. ಅಪ್ಪು ಉತ್ಸವಕ್ಕೆ ಜನಸಾಗರ ಹರಿದು ಬರುತ್ತಿದೆ. ಕಂಠೀರವ ಸ್ಟೂಡಿಯೋ ಬಳಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಸಮಾಧಿ ದರ್ಶನ ಪಡೆಯುತ್ತಿದ್ದಾರೆ.
-
ಕಲಬುರಗಿ ನಗರದಲ್ಲಿ ಅಪ್ಪು ಜನ್ಮದಿನ ಆಚರಣೆ
ಇಂದು ದಿ.ಪುನಿತ್ ರಾಜಕುಮಾರ ಜನ್ಮದಿನ ಹಿನ್ನೆಲೆ. ಕಲಬುರಗಿ ನಗರದಲ್ಲಿ ಅಪ್ಪು ಜನ್ಮದಿನ ಆಚರಣೆ ಮಾಡಲಾಗಿದೆ. ನಗರದ ಜಗತ್ ವೃತ್ತದಲ್ಲಿ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಪ್ಪು ಪರ ಅಭಿಮಾನಿಗಳು ಜೈಕಾರ ಹಾಕಿದ್ದಾರೆ.
-
-
Puneeth Birthday Live: ಪುನೀತ್ ಜನ್ಮದಿನದಂದು ಹೃದಯ ಪೂರ್ವಕ ನಮನ- ತೇಜಸ್ವಿ ಸೂರ್ಯ ಟ್ವೀಟ್
ನಾಡಿನ ಸಮಸ್ತ ಜನತೆಯ ಮನೆ-ಮನ, ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದ ಸಹೃದಯಿ, ತಮ್ಮ ಪ್ರೇರಣಾದಾಯಿ ವ್ಯಕ್ತಿತ್ವದಿಂದ & ಅನೇಕ ಜನಪರ, ಶ್ಲಾಘನೀಯ ಕಾರ್ಯಗಳ ಮೂಲಕ ಅಪಾರ ಜನ ಮನ್ನಣೆ ಗಳಿಸಿರುವ ನಮ್ಮೆಲ್ಲರ ನೆಚ್ಚಿನ ಪುನೀತ್ ರಾಜಕುಮಾರ್ ರ ಜನ್ಮದಿನದಂದು ಹೃದಯ ಪೂರ್ವಕ ನಮನಗಳು ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
-
Puneeth Birthday Live: ಪುನೀತ್ ರಾಜ್ಕುಮಾರ್ ಜನ್ಮದಿನ ಸ್ಮರಿಸಿ ದೇವೇಗೌಡ ಟ್ವೀಟ್
ಪುನೀತ್ ರಾಜ್ಕುಮಾರ್ ಜನ್ಮದಿನ ಸ್ಮರಿಸಿ H.D.ದೇವೇಗೌಡ ಟ್ವೀಟ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿ ನಾಡಿನ ಕೀರ್ತಿ ಪತಾಕೆ ಹಾರಿಸಿದ, ಎಲ್ಲರಿಗೂ ಸ್ಫೂರ್ತಿ, ಮಾದರಿಯ ಗಣಿಯಾದ ಪುನೀತ್ ಜನ್ಮದಿನ ಸ್ಮರಣೆ. ನಮ್ಮೆಲ್ಲರ ಪ್ರೀತಿಗೆ ಪಾತ್ರವಾಗಿದ್ದ ಅಪ್ಪು ಅವರ ನೆನಪು ಚಿರಂತನ. ಪುನೀತ್ ರಾಜ್ಕುಮಾರ್ ಜನ್ಮದಿನದಂದು ಗೌರವ ಪೂರ್ವಕ ನಮನಗಳು’ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
-
Puneeth Birthday Live: ಅಪ್ಪುಗೆ ಕರ್ನಾಟಕ ಬುಲ್ಡೋಜರ್ಸ್ ಕಡೆಯಿಂದ ವಿಶ್
ದೊಡ್ಮನೆ ರಾಜಕುಮಾರನಿಗೆ ಕಿಚ್ಚ ಆ್ಯಂಡ್ ಟೀಂ ಶುಭಾಶಯ ತಿಳಿಸಿದೆ. ಸಿಸಿಎಲ್ ಕ್ರಿಕೇಟ್ ಆಡುವುದರಲ್ಲಿ ಸುದೀಪ್, ಗಣೇಶ್ ಬ್ಯುಸಿ ಇದ್ದಾರೆ. ‘ಸೂರ್ಯನೊಬ್ಬ ..ಚಂದ್ರನೊಬ್ಬ.. ರಾಜನೂ ಒಬ್ಬ’ ಅಂತ ಅಪ್ಪುಗೆ ಶುಭ ಹಾರೈಕೆ ಮಾಡಲಾಗಿದೆ.
-
-
ನಿನ್ನ ನೆನಪುಗಳು ಎಂದಿಗೂ ಅಮರ, ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಎಂದ ಶಿವಣ್ಣ
‘ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟುಹಬ್ಬದ ಶುಭಾಶಯಗಳು, ಅಪ್ಪು’ ಎಂದು ಟ್ವೀಟ್ ಮಾಡಿದ ಶಿವಣ್ಣ.
ನಿನ್ನ ನೆನಪುಗಳು ಎಂದಿಗೂ ಅಮರ ಹುಟ್ಟುಹಬ್ಬದ ಶುಭಾಶಯಗಳು, ಅಪ್ಪು pic.twitter.com/u6PukGoFCG
— DrShivaRajkumar (@NimmaShivanna) March 17, 2023
-
Puneeth Birthday Live: ಪುನೀತ್ ಅವರನ್ನು ನೆನೆದ ಹೊಂಬಾಳೆ ಫಿಲ್ಮ್ಸ್
‘ನೀ ಪುನೀತ. ನೀ ನಮ್ಮ ಸ್ವಂತ. ಕರುನಾಡಿನ ಯುವರತ್ನ, ನಗುವಿನ ರಾಜಕುಮಾರನ ಜನ್ಮದಿನವಿಂದು ನಮ್ಮೆಲ್ಲರಿಗೂ ಸ್ಫೂರ್ತಿ ದಿನ’ ಎಂದು ಟ್ವೀಟ್ ಮಾಡಿದ ಹೊಂಬಾಳೆ ಫಿಲ್ಮ್ಸ್.
ನೀ ಪುನೀತ. ನೀ ನಮ್ಮ ಸ್ವಂತ. ಕರುನಾಡಿನ ಯುವರತ್ನ, ನಗುವಿನ ರಾಜಕುಮಾರನ ಜನ್ಮದಿನವಿಂದು ನಮ್ಮೆಲ್ಲರಿಗೂ #ಸ್ಫೂರ್ತಿದಿನ Appu’s inspiring legacy continues to guide and motivate us. We celebrate the enduring influence of Dr. #PuneethRajkumar, who exemplified the virtues of compassion, grace & humility. pic.twitter.com/NG7F5vCRyR
— Hombale Films (@hombalefilms) March 17, 2023
-
-
Puneeth Birthday Live: ಅಪ್ಪು ಸದಾ ಅಜರಾಮರ ಎಂದ ಸಿಎಂ ಬೊಮ್ಮಾಯಿ
‘ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಗೈದು, ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು. ಅಪ್ಪು ಸದಾ ಅಜರಾಮರ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
-
Puneeth Birthday Live: ಕೆಲವೇ ಕ್ಷಣಗಳಲ್ಲಿ ಅಪ್ಪು ಸಮಾಧಿಗೆ ರಾಜ್ ಕುಟುಂಬ
ಕೆಲವೇ ಕ್ಷಣಗಳಲ್ಲಿ ಅಪ್ಪು ಸಮಾಧಿಗೆ ರಾಜ್ ಕುಟುಂಬ ಆಗಮಿಸಲಿದೆ. ರಾಘವೇಂದ್ರ ರಾಜ್ ಕುಮಾರ್, ವಿನಯ್, ಯುವ ಸಮಾಧಿ ಬಳಿ ಭೇಟಿ ನೀಡಲಿದ್ದಾರೆ. ಈ ವೇಳೆ ಪೂಜೆ ಸಲ್ಲಿಕೆ ಆಗಲಿದೆ.
-
Puneeth Birthday Live: 19 ದಿನದ ಹಸುಗೂಸಿನೊಂದಿಗೆ ಅಪ್ಪು ಸಮಾಧಿಗೆ ಮಹಿಳೆ ಆಗಮಿಸಿದ ಮಹಿಳೆ
ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಅಭಿಮಾನಿಗಳ ಭೇಟಿ ನೀಡುತ್ತಿದ್ದಾರೆ. 19 ದಿನದ ಹಸುಗೂಸಿನೊಂದಿಗೆ ಅಪ್ಪು ಸಮಾಧಿಗೆ ಮಹಿಳೆ ಆಗಮಿಸಿದ್ದಾರೆ. ತನ್ನ ಮಗುವಿಗೆ ಅಪ್ಪು ಹೆಸರು ಇಡಲು ಸಮಾಧಿ ಬಳಿ ಅವರು ಬಂದಿದ್ದಾರೆ. ಬಳ್ಳಾರಿಯಿಂದ ಬೆಂಗಳೂರಿಗೆ ಆಗಮಿಸಿರುವ ತಾಯಿ, ಮಗು.
-
Kabzaa Movie Relese: ಆರ್ ಚಂದ್ರು ಅವರೇ ನಿಮಗೆ ಯಶಸ್ಸು ಸಿಗಲಿ ಎಂದ ಸುದೀಪ್
ಕಿಚ್ಚ ಸುದೀಪ್ ಅವರು ‘ಕಬ್ಜ’ ಸಿನಿಮಾ ರಿಲೀಸ್ಗೂ ಮೊದಲು ಟ್ವೀಟ್ ಮಾಡಿದ್ದಾರೆ. ಆರ್.ಚಂದ್ರುಗೆ ಯಶಸ್ಸು ಸಿಗಲಿ ಎಂದು ಅವರು ಶುಭಕೋರಿದ್ದಾರೆ.
You have worked very hard for this @rchandru_movies .. wishing you to be blessed wth the success you deserve. Best wshs team #Kabzaa and @nimmaupendra sir . ? pic.twitter.com/PJqRIBGCr8
— Kichcha Sudeepa (@KicchaSudeep) March 17, 2023
-
Kabzaa Release Live: ‘ಕಬ್ಜ’ ಸ್ವಾಗತಕ್ಕೆ ರೆಡಿ ಆದ ನರ್ತಕಿ ಥಿಯೇಟರ್
ಬೆಂಗಳೂರಿನ ಗಾಂಧಿನಗರದಲ್ಲಿರುವ ನರ್ತಕಿ ಥಿಯೇಟರ್ನಲ್ಲಿ ‘ಕಬ್ಜ’ ಸಿನಿಮಾ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆದಿದೆ. ಉಪೇಂದ್ರ, ಸುದೀಪ್ ಹಾಗೂ ಶಿವಣ್ಣ ಅವರ ಕಟೌಟ್ ಹಾಕಲಾಗಿದೆ. ಇದರ ಎದುರು ಫ್ಯಾನ್ಸ್ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
-
Kabzaa Release Live: ಪವನ್ ಕಲ್ಯಾಣ್ ಚಿತ್ರಕ್ಕೆ ಆರ್. ಚಂದ್ರು ನಿರ್ದೇಶನ
ಪವನ್ ಕಲ್ಯಾಣ್ ಚಿತ್ರಕ್ಕೆ ಆರ್. ಚಂದ್ರು ನಿರ್ದೇಶನ? ‘ಕಬ್ಜ’ ನೋಡಿ ಮೆಚ್ಚಿಕೊಂಡ ಪವರ್ಸ್ಟಾರ್
-
Kabzaa Release Live: ‘ಕಬ್ಜ’ ಮೊದಲ ಶೋ ಆರಂಭ
‘ಕಬ್ಜ’ ಚಿತ್ರದ ಮೊದಲ ಶೋ ಬೆಂಗಳೂರಿನ ಸುಂಕದಕಟ್ಟೆ ಬಳಿಯ ಮೀರಜ್ ಸಿನಿಮಾಸ್ನಲ್ಲಿ ಆರಂಭ ಆಗಿದೆ. ಬೆಳಗ್ಗೆ 8:30ಕ್ಕೆ ಶೋ ಶುರುವಾಗಿದೆ.
-
Kabzaa Release Live: ಹೆಚ್ಚಿತು ಆರ್. ಚಂದ್ರು ಖ್ಯಾತಿ
‘ಕಬ್ಜ’ ಚಿತ್ರದಿಂದ ಆರ್. ಚಂದ್ರು ಅವರ ಖ್ಯಾತಿ ಹೆಚ್ಚಿದೆ. ಪವನ್ ಕಲ್ಯಾಣ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದರು. ಈ ವೇಳೆ ಹೊಸ ಸಿನಿಮಾ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
-
Kabzaa Release Live: ಕಬ್ಜ ಚಿತ್ರಕ್ಕೆ ಅನುಪಮ್ ಖೇರ್ ಶುಭಾಶಯ
‘ಕಬ್ಜ’ ಚಿತ್ರಕ್ಕೆ ಬಾಲಿವುಡ್ನ ಖ್ಯಾತ ನಟ ಅನುಪಮ್ ಖೇರ್ ಅವರು ವಿಶ್ ಮಾಡಿದ್ದಾರೆ. ಬಾಲಿವುಡ್ನಲ್ಲಿ ಚಿತ್ರಕ್ಕೆ ದೊಡ್ಡ ಹೈಪ್ ಸೃಷ್ಟಿ ಆಗಿದೆ.
Hearing wonderful things about #Kabzaa. Congratulations and good luck to @anandpandit63 and the entire cast and crew of the film. May it do wonders at the box office! Jai Ho! ?? @nimmaupendra @KicchaSudeep @NimmaShivanna @shriya1109 pic.twitter.com/4bPLJ9olOD
— Anupam Kher (@AnupamPKher) March 16, 2023
-
Kabzaa Release Live: ತಲೆ ಎತ್ತಿದ ಕಟೌಟ್
‘ಕಬ್ಜ’ ಚಿತ್ರ ಮಲ್ಟಿ ಸ್ಟಾರರ್ ಸಿನಿಮಾ. ಉಪೇಂದ್ರ ಜೊತೆ ಕಿಚ್ಚ ಸುದೀಪ್, ಶಿವಣ್ಣ ಕೂಡ ನಟಿಸಿದ್ದಾರೆ. ಹೀಗಾಗಿ, ಮೂರು ಸ್ಟಾರ್ಗಳ ಕಟೌಟ್ನ ಹಾಕಲಾಗಿದೆ.
-
Kabzaa Release Live: ಕಬ್ಜ ಚಿತ್ರದ ಟಿಕೆಟ್ ಬೆಲೆ 150 ರೂಪಾಯಿ ಮಾತ್ರ
ಹಿಂದಿಯಲ್ಲಿ ‘ಕಬ್ಜ’ ನೋಡುವವರಿಗೆ ಬಂಪರ್ ಆಫರ್ ಸಿಕ್ಕಿದೆ. ಈ ಚಿತ್ರದ ಟಿಕೆಟ್ ದರ ಶುಕ್ರವಾರ ಕೇವಲ 150 ರೂಪಾಯಿ ಇದೆ. ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು ಈ ತಂತ್ರ ಉಪಯೋಗಿಸಲಾಗಿದೆ.
-
Kabzaa Release Live: ಕಬ್ಜ ಚಿತ್ರಕ್ಕೆ ಶುಭಕೋರಿದ ತರುಣ್ ಸುಧೀರ್
ಈ ಚಿತ್ರಕ್ಕೆ ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರು ವಿಶ್ ಮಾಡಿದ್ದಾರೆ. ಅವರು ಟ್ವೀಟ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
Waiting for Upendra sir, Shivanna & Sudeep sir to set the screens on fire again with #Kabzaa, tomorrow! A true result of hardwork & creativity! Best wishes to @rchandru_movies and the entire team of #Kabzaa ??@nimmaupendra @NimmaShivanna @KicchaSudeep @aanandaaudio pic.twitter.com/7eE11AWoLm
— Tharun Sudhir (@TharunSudhir) March 16, 2023
-
Kabzaa Release Live: ವಿಶ್ವಾದ್ಯಂತ 4 ಸಾವಿರ ಸ್ಕ್ರಿನ್ಗಳಲ್ಲಿ ‘ಕಬ್ಜ’ ತೆರೆಗೆ
ವಿಶ್ವಾದ್ಯಂತ 4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿ 400 ಚಿತ್ರಮಂದಿರಗಳಖಲ್ಲಿ ಕಬ್ಜ ಬಿಡುಗಡೆ ಆಗುತ್ತಿದೆ. ಕೇರಳದಲ್ಲಿ 200 ಥಿಯೇಟರ್ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಆಂಧ್ರದಲ್ಲಿ 400ಕ್ಕೂ ಹೆಚ್ಚು ಸ್ಕ್ರಿನ್ಮೇಲೆ ‘ಕಬ್ಜ’ ರಿಲೀಸ್ ಆಗಲಿದೆ.
-
ಕಬ್ಜ ಚಿತ್ರಕ್ಕೆ ಸಾಯಿಧರಮ್ ತೇಜ್ ವಿಶ್
ಕಬ್ಜ ಚಿತ್ರಕ್ಕೆ ತೆಲುಗು ನಟ ಸಾಯಿಧರಮ್ ತೇಜ್ ವಿಶ್ ಮಾಡಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೂ ಒಳ್ಳೆಯದಾಗಲಿ ಎಂದು ಹರಸಿದ್ದಾರೆ.
As Kannada Cinema continues its spectacular journey to mark its footprint across the world, #Kabzaa looks like another Grandeur & Raw attempt.
All the best @nimmaupendra Garu @KicchaSudeep sir #ShivaRajkumar sir @shriya1109 Garu @rchandru_movies Garu & @RaviBasrur Garu & team. pic.twitter.com/lLFT7AtzuZ
— Sai Dharam Tej (@IamSaiDharamTej) March 16, 2023
-
ಬೆಂಗಳೂರಲ್ಲಿ ಎಷ್ಟು ಶೋ?
ಬೆಂಗಳೂರಿನಲ್ಲಿ ‘ಕಬ್ಜ’ ಚಿತ್ರಕ್ಕೆ 500+ ಶೋ ಸಿಕ್ಕಿದೆ. ಸದ್ಯ ಯಾವುದೇ ಫ್ಯಾನ್ ಶೋ ಬಗ್ಗೆ ಘೋಷಣೆ ಆಗಿಲ್ಲ. ಬೆಳಗ್ಗೆ 9 ಗಂಟೆಯಿಂದ ಮಾತ್ರ ಶೋಗಳು ಆರಂಭ ಆಗುತ್ತಿವೆ.
-
ದೆಹಲಿಯಲ್ಲಿ ‘ಕಬ್ಜ’ ಚಿತ್ರದ ಅಬ್ಬರ
ರಾಜ್ಯ ರಾಜಧಾನಿ ದೆಹಲಿಯಲ್ಲಿ ‘ಕಬ್ಜ’ ಅಬ್ಬರಿಸೋಕೆ ರೆಡಿ ಆಗಿದೆ. ದೆಹಲಿಯಲ್ಲಿ ‘ಕಬ್ಜ’ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಿಂದಿ ವರ್ಷನ್ಗೆ ಮೊದಲ ದಿನವಾದ ಶುಕ್ರವಾರ (ಮಾರ್ಚ್ 17) 130+ ಶೋಗಳು ಲಭ್ಯವಿದೆ. ಕನ್ನಡಕ್ಕೆ ನಾಲ್ಕು ಶೋಗಳು ಸಿಕ್ಕಿವೆ.
-
‘ಕಬ್ಜ’ ರಿಲೀಸ್ಗೆ ಕ್ಷಣಗಣನೆ
ಆರ್. ಚಂದ್ರು ಅವರ ಕನಸಿನ ಪ್ರಾಜೆಕ್ಟ್ ‘ಕಬ್ಜ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರಕ್ಕೆ ಅಬ್ಬರದ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಪರಭಾಷೆಯಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಹೈದರಾಬಾದ್, ಚೆನ್ನೈ, ದೆಹಲಿ ಹಾಗೂ ಮುಂಬೈ ಭಾಗದಲ್ಲಿ ಸಿನಿಮಾಗೆ ಹೆಚ್ಚಿನ ಶೋಗಳು ಸಿಕ್ಕಿವೆ.
ಇಂದು (ಮಾರ್ಚ್ 17) ಪುನೀತ್ ರಾಜ್ಕುಮಾರ್ ಅವರ ಜನ್ಮದಿನ. ಇದು ಪುನೀತ್ ಇಲ್ಲದೆ ಆಚರಿಸಲಾಗುತ್ತಿರುವ ಎರಡನೇ ಜನ್ಮದಿನ. ಪುನೀತ್ ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಅವರಿಲ್ಲ ಎನ್ನುವ ಬೇಸರದಲ್ಲೇ ಈ ದಿನವನ್ನು ಆಚರಿಸುತ್ತಿರುವುದು ನಿಜಕ್ಕೂ ದುಃಖಕರ ವಿಚಾರ. ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಅಪ್ಪು ಫ್ಯಾನ್ಸ್ ನೆರೆದಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ನಿಯೋಜನೆ ಮಾಡಲಾಗಿದೆ. ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಆ ಬಗ್ಗೆ ಇಲ್ಲಿದೆ ಲೈವ್ ಅಪ್ಡೇಟ್ಸ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - Mar 17,2023 6:33 AM