Jaggesh Birthday: 60ನೇ ವಸಂತಕ್ಕೆ ಕಾಲಿಟ್ಟ ಜಗ್ಗೇಶ್​; ಈ ಪ್ರಾಯದಲ್ಲೂ ಯುವಜನತೆಗೆ ಸ್ಫೂರ್ತಿ ನೀಡುವ ‘ನವರಸ ನಾಯಕ’

Happy Birthday Jaggesh: ‘ನವರಸ ನಾಯಕ’ ಜಗ್ಗೇಶ್​ ಅವರಿಗೆ ಇಂದು (ಮಾ.17) ಜನ್ಮದಿನದ ಸಂಭ್ರಮ. ಅವರು ಸಾಗಿಬಂದ ಹಾದಿಯನ್ನು ಮೆಲುಕು ಹಾಕುತ್ತ ಅಭಿಮಾನಿಗಳು ಬರ್ತ್​ಡೇ ವಿಶ್​ ಮಾಡುತ್ತಿದ್ದಾರೆ.

Jaggesh Birthday: 60ನೇ ವಸಂತಕ್ಕೆ ಕಾಲಿಟ್ಟ ಜಗ್ಗೇಶ್​; ಈ ಪ್ರಾಯದಲ್ಲೂ ಯುವಜನತೆಗೆ ಸ್ಫೂರ್ತಿ ನೀಡುವ ‘ನವರಸ ನಾಯಕ’
ಜಗ್ಗೇಶ್
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Mar 17, 2023 | 6:52 AM

ಚಂದನವನದ ಖ್ಯಾತ ನಟ ಜಗ್ಗೇಶ್​ (Jaggesh) ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಬಣ್ಣದ ಲೋಕದಲ್ಲಿ ಅವರು ಮಾಡಿದ ಸಾಧನೆ ಅನೇಕರಿಗೆ ಮಾದರಿ. ಏಕಾಏಕಿ ಜಗ್ಗೇಶ್​ ಸ್ಟಾರ್​ ಆದವರಲ್ಲ. ಒಂದೊಂದೇ ಮೆಟ್ಟಿಲುಗಳನ್ನು ಏರಿ ಅವರು ಸಾಧಕನ ಪಟ್ಟ ಅಲಂಕರಿಸಿದರು. ಇಂದು (ಮಾರ್ಚ್​ 17) ಜಗ್ಗೇಶ್​ ಜನ್ಮದಿನ. 60ನೇ ವರ್ಷಕ್ಕೆ ಅವರು ಕಾಲಿರಿಸಿದ್ದಾರೆ. ‘ನವರಸ ನಾಯಕ’ನ ಹುಟ್ಟುಹಬ್ಬದ (Jaggesh Birthday) ಪ್ರಯುಕ್ತ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ರಾಜಕೀಯದಲ್ಲೂ ಸಕ್ರಿಯವಾಗಿರುವ ಜಗ್ಗೇಶ್​ ಅವರು ಅನೇಕ ವಿಚಾರಗಳಲ್ಲಿ ಮಾದರಿ ಆಗಿದ್ದಾರೆ. ಅವರು ಬೆಳೆದು ಬಂದ ಹಾದಿಯೇ ಅನೇಕರಿಗೆ ಸ್ಫೂರ್ತಿ.

ಕನ್ನಡ ಚಿತ್ರರಂಗದಲ್ಲಿ ಜಗ್ಗೇಶ್​ ಬಹುಬೇಡಿಕೆಯ ನಟ. ಇಂದಿಗೂ ಅವರು ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. 60ರ ಪ್ರಾಯದಲ್ಲೂ ಕ್ರಿಯಾಶೀಲವಾದ ಜೀವನ ಶೈಲಿಯನ್ನು ಪಾಲಿಸುತ್ತಿದ್ದಾರೆ. ಯುವ ಜನತೆಯನ್ನು ಪ್ರೇರೇಪಿಸುವ ಅನೇಕ ಕಾರ್ಯಗಳು ಅವರಿಂದ ಆಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ಜಗ್ಗೇಶ್​ ಅವರು ತಮ್ಮ ಬದುಕಿನ ಅನೇಕ ಅನುಭವಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: Jaggesh: ಕುಟುಂಬ ಸಮೇತರಾಗಿ ಪ್ರಧಾನಿ ಮೋದಿ ಭೇಟಿ ಮಾಡಿದ ಜಗ್ಗೇಶ್​; ಇಲ್ಲಿದೆ ಫೋಟೋ ಗ್ಯಾಲರಿ

ಇದನ್ನೂ ಓದಿ
Image
Puneetha Parva: ‘ಪುನೀತ ಪರ್ವ’ಕ್ಕೆ ಜಗ್ಗೇಶ್​ ಯಾಕೆ ಬರಲಿಲ್ಲ? ‘ನವರಸ ನಾಯಕ’ ನೀಡಿದ ಕಾರಣ ಇಲ್ಲಿದೆ..
Image
Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ
Image
Jaggesh: ‘ಆ ಮಠ ನನ್ನ ಜಾತಿ ನೋಡಿಲ್ಲ, ಶೂದ್ರನಾದ ನನಗೆ ದೊಡ್ಡ ಸ್ಥಾನ ನೀಡಿದೆ’: ಜಗ್ಗೇಶ್​
Image
Totapuri: ಮಂತ್ರಿ ಮಾಲ್​ ಜಾಗ ಮೊದಲು ಏನಾಗಿತ್ತು? ಹಿಂದಿನ ಘಟನೆ ಮೆಲುಕು ಹಾಕಿದ ಜಗ್ಗೇಶ್​

ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತ ಚಿತ್ರರಂಗಕ್ಕೆ ಜಗ್ಗೇಶ್​ ಕಾಲಿಟ್ಟರು. ಒಮ್ಮೆಲೇ ಅವರಿಗೆ ಸ್ಟಾರ್​ ಪಟ್ಟ ಸಿಗಲಿಲ್ಲ. ತಮಗೆ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದರ ಫಲವಾಗಿ ಅವರಿಗೆ ಯಶಸ್ಸು ದಕ್ಕಿತು. ‘ತರ್ಲೆ ನನ್​ ಮಗ’ ಸಿನಿಮಾದಿಂದ ಹೀರೋ ಆದ ಅವರು ಕಾಮಿಡಿ ಪ್ರೇಕ್ಷಕರ ಫೇವರಿಟ್​ ನಟನಾಗಿ ಬೆಳೆದು ನಿಂತರು. ಪುನೀತ್​ ರಾಜ್​ಕುಮಾರ್​ ಕೂಡ ಜಗ್ಗೇಶ್​ಗೆ ಅಭಿಮಾನಿ ಆಗಿದ್ದರು. ಅದನ್ನು ಅಪ್ಪು ಅವರು ಅನೇಕ ವೇದಿಕೆಗಳಲ್ಲಿ ಹೇಳಿಕೊಂಡಿದ್ದುಂಟು.

ಇದನ್ನೂ ಓದಿ: Jaggesh: ತಮ್ಮದೇ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ವೀಕ್ಷಿಸಿ ವಿಮರ್ಶೆ ನೀಡಿದ ಜಗ್ಗೇಶ್

ತಮ್ಮದೇ ಆದಂತಹ ಮ್ಯಾನರಿಸಂ ಮೂಲಕ ಜಗ್ಗೇಶ್​ ಅವರು ವಿಶೇಷ ಛಾಪು ಮೂಡಿಸಿದರು. ಅದನ್ನು ಬೇರೆ ಯಾವ ನಟರೂ ಕಾಪಿ ಮಾಡಲು ಸಾಧ್ಯವಿಲ್ಲ. ಕಾಮಿಡಿ ಅಷ್ಟೇ ಅಲ್ಲದೇ, ಸೆಂಟಿಮೆಂಟ್​ ದೃಶ್ಯಗಳಲ್ಲೂ ಅಷ್ಟೇ ಸಮರ್ಥವಾಗಿ ಅಭಿನಯಿಸಬಲ್ಲಂತಹ ಕಲಾವಿದ ಅವರು. ಆರಂಭದ ದಿನಗಳಲ್ಲಿ ಜಗ್ಗೇಶ್​ ಎದುರಿಸಿದ ಅವಮಾನಗಳು ಒಂದೆರಡಲ್ಲ. ಅವೆಲ್ಲವನ್ನೂ ಮೆಟ್ಟಿನಿಂತ ಅವರು ಬಳಿಕ ಸೂಪರ್​ ಸ್ಟಾರ್​ ಆದರು.

ಇದನ್ನೂ ಓದಿ: Jaggesh: ಹಳೆಯ ದಿನಗಳ ನೆನೆಯುತ್ತಾ ಪತ್ನಿಯೊಟ್ಟಿಗೆ ರಾಯರ ದರ್ಶನಕ್ಕೆ ತೆರಳಿದ ಜಗ್ಗೇಶ್

ಕನ್ನಡದ ಬಗ್ಗೆ ಜಗ್ಗೇಶ್​ ಅವರಿಗೆ ಅಪಾರ ಪ್ರೀತಿ. ಆ ವಿಷಯದಲ್ಲೂ ಅವರು ಎಲ್ಲರಿಗೂ ಮಾದರಿ ಎಂದರೆ ತಪ್ಪಾಗಲಾರದು. ರಾಜ್ಯಸಭೆಯಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ಅವರು ಗಮನ ಸೆಳೆಯುತ್ತಾರೆ. ಕನ್ನಡದಲ್ಲೇ ಟ್ವೀಟ್​ ಮಾಡಿ, ಇತರರಿಗೂ ಕನ್ನಡ ಬಳಕೆ ಬಗ್ಗೆ ಉತ್ತೇಜನ ನೀಡುತ್ತಾರೆ. ಈ ಕಾರಣದಿಂದ ಅವರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಗೌರವಿಸುತ್ತಾರೆ.

ಸ್ಟಾರ್​ ನಟನಾಗಿ ಬೆಳೆದ ನಂತರವೂ ಜಗ್ಗೇಶ್​ಗೆ ಸವಾಲುಗಳು ತಪ್ಪಲಿಲ್ಲ. ಎಲ್ಲವನ್ನೂ ಅವರು ನಿಭಾಯಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ಅವರು ನಟಿಸಿರುವ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದಿದ್ದಾರೆ. ಇಂದು ಜಗ್ಗೇಶ್​ ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾಗಳ ಬಗ್ಗೆ ಅಪ್​ಡೇಟ್​ ಸಿಗುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:50 am, Fri, 17 March 23