AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಬ್ಯಾನ್ ಆಗಲಿದೆಯೇ ಕಮಲ್ ಹಾಸನ್​ರ ‘ಥಗ್ ಲೈಫ್’ ಸಿನಿಮಾ?

Kamal Haasan: ಕಮಲ್ ಹಾಸನ್ ಇತ್ತೀಚೆಗಷ್ಟೆ ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದೀಗ ರಾಜ್ಯದ ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಿನಿಮಾ ಅನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಸಿನಿಮಾ ಅನ್ನು ಹಾಗೆ ನಿಷೇಧ ಮಾಡುವುದು ಸಾಧ್ಯವೇ? ಕಾನೂನು ಏನು ಹೇಳುತ್ತದೆ?

ಕರ್ನಾಟಕದಲ್ಲಿ ಬ್ಯಾನ್ ಆಗಲಿದೆಯೇ ಕಮಲ್ ಹಾಸನ್​ರ ‘ಥಗ್ ಲೈಫ್’ ಸಿನಿಮಾ?
Thug Life Movie
ಮಂಜುನಾಥ ಸಿ.
|

Updated on:May 28, 2025 | 4:00 PM

Share

ಕಮಲ್ ಹಾಸನ್ (Kamal Haasan), ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ವಿವಾದ ಉಂಟು ಮಾಡಿದೆ. ಅವರ ನಟನೆಯ ‘ಥಗ್ ಲೈಫ್’ ಸಿನಿಮಾದ ಆಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲ್ ಹಾಸನ್, ‘ತಮಿಳಿನಿಂದಲೇ ಕನ್ನಡ ಜನಿಸಿದ್ದು’ ಎಂದಿದ್ದರು. ಕಮಲ್​ರ ಈ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕೆಲ ಕನ್ನಡಪರ ಸಂಘಟನೆಗಳು ಕಮಲ್ ಅವರ ಹೇಳಿಕೆಯನ್ನು ಖಂಡಿಸಿವೆ. ಇದರ ಜೊತೆಗೆ ಕಮಲ್ ನಟನೆಯ ‘ಥಗ್ ಲೈಫ್’ ಸಿನಿಮಾವನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎಂಬ ಒತ್ತಾಯವೂ ಜೋರಾಗಿ ಕೇಳಿ ಬರುತ್ತಿದೆ. ಆದರೆ ಸಿನಿಮಾ ನಿಷೇಧ ಸಾಧ್ಯವೇ? ಕಾನೂನಿನಲ್ಲಿ ಅದಕ್ಕೆ ಅವಕಾಶ ಇದೆಯೇ?

ಕಮಲ್ ನೀಡಿರುವ ಹೇಳಿಕೆಗೆ ವಿರುದ್ಧವಾಗಿ ಅವರ ಸಿನಿಮಾಕ್ಕೆ ರಾಜ್ಯದಲ್ಲಿ ನಿಷೇಧ ಹೇರಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಅಸಲಿಗೆ ಈ ನಿಷೇಧ ಸಾಧ್ಯವಿಲ್ಲ ಎನ್ನುತ್ತದೆ ಕಾನೂನು. ಕೆಲವು ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡರೂ ಸಹ, ನಿಷೇಧ ಎಂಬುದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತವೆ.

‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಸ್ವತಃ ಕೇರಳ ಸರ್ಕಾರ ಆ ಸಿನಿಮಾ ಕೇರಳ ರಾಜ್ಯದಲ್ಲಿ ಬಿಡುಗಡೆ ಆಗದಂತೆ ತಡೆಯಲು ನಾನಾ ಪ್ರಯತ್ನ ಮಾಡಿತು. ಸುಪ್ರೀಂಕೋರ್ಟ್​ನಲ್ಲಿಯೂ ಕಾನೂನು ಹೋರಾಟ ಮಾಡಿತು. ಏನೇ ಪ್ರಯತ್ನ ಮಾಡಿದರೂ ಸಹ ಸಿನಿಮಾ ಬಿಡುಗಡೆಯನ್ನು ತಡೆಯಲು ಸಾಧ್ಯವಾಗಲಿಲ್ಲ.  ಇದೇ ಸಿನಿಮಾದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿತ್ತು. ಆದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಪಕರು ನಿಷೇಧ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್​ನಲ್ಲಿ ಮೊಕದ್ದಮೆ ದಾಖಲಿಸಿತು. ಬಳಿಕ ನಿಷೇಧವನ್ನು ತೆರವು ಮಾಡಲಾಯ್ತು. ಸಿನಿಮಾ ಪಶ್ಚಿಮ ಬಂಗಾಳದಲ್ಲಿ ಬಿಡುಗಡೆ ಸಹ ಆಯ್ತು.

ಬಾಲಿವುಡ್​ನಲ್ಲಂತೂ ಪ್ರತಿ ಎರಡು ತಿಂಗಳಿಗೆ ಯಾವುದಾದರೂ ಒಂದು ಸಿನಿಮಾದ ಬ್ಯಾನ್​ಗೆ ಒತ್ತಾಯ ಕೇಳಿ ಬರುತ್ತದೆ. ಹಲವಾರು ಸಿನಿಮಾಗಳ ಮೇಲೆ ಮುಂಚಿತವಾಗಿ ಪ್ರಕರಣವೂ ದಾಖಲಾಗುತ್ತದೆ ಆದರೆ ಯಾವ ಸಿನಿಮಾ ಸಹ ಬ್ಯಾನ್ ಆಗಿದ್ದು ಇತ್ತೀಚೆಗೆ ನಡೆದಿಲ್ಲ. ‘ದಿ ಕೇರಳ ಸ್ಟೋರಿ’, ‘ಎಮರ್ಜೆನ್ಸಿ’, ‘ರಜಾಕರ್’, ‘ದಿ ಕಶ್ಮೀರ್ ಫೈಲ್ಸ್’, ‘ಪುಲೆ’ ಇನ್ನೂ ಕೆಲವಾರು ಸಿನಿಮಾಗಳ ವಿರುದ್ಧ ನಿಷೇಧದ ಕೂಗು ಕೇಳಿ ಬಂದಿತ್ತು. ಆದರೆ ಯಾವ ಸಿನಿಮಾದ ಮೇಲೂ ನಿಷೇಧ ಹೇರಲಾಗಲಿಲ್ಲ.

ಇದನ್ನೂ ಓದಿ:ರಾಜ್ಯಸಭೆಗೆ ಕಮಲ್ ಹಾಸನ್; ಈ ಪಕ್ಷದ ಬೆಂಬಲದೊಂದಿಗೆ ಮೇಲ್ಮನೆ ಪ್ರವೇಶಿಸಲು ರೆಡಿಯಾದ ನಟ

ಯಾವುದೇ ನಿರ್ದಿಷ್ಟ ಸಿನಿಮಾದ ಬಿಡುಗಡೆಯಿಂದ ಭಾರಿ ದೊಡ್ಡ ಹಾನಿ ಸಂಭವಿಸುತ್ತದೆ, ಗಲಭೆ ಉಂಟಾಗುತ್ತದೆ. ನಾಗರೀಕರ ಭಾವನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದೆನಿಸಿದರೆ ಮಾತ್ರವೇ ನ್ಯಾಯಾಲಯವು ಸಿನಿಮಾಗಳ ಮೇಲೆ, ಪುಸ್ತಕಗಳ ಮೇಲೆ ಇತ್ಯಾದಿಗಳ ಬಿಡುಗಡೆ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸುತ್ತದೆ. ಸಿನಿಮಾಗಳಿಗೆ ಪ್ರಮಾಣ ಪತ್ರ ನೀಡುವ ಸಿಬಿಎಫ್​ಸಿ ಸಹ ಯಾವುದಾದರೂ ಸಿನಿಮಾಕ್ಕೆ ನಿಯಮಾವಳಿಗಳ ಅಡಿಯಲ್ಲಿ ಪ್ರಮಾಣ ಪತ್ರ ನಿರಾಕರಿಸುವ ಹಕ್ಕು ಹೊಂದಿದೆ. ಆದರೆ ಒಂದೊಮ್ಮೆ ಸಿನಿಮಾ ತಂಡವು ನ್ಯಾಯಾಲಯದ ಮೊರೆ ಹೋದರೆ ಪ್ರಕರಣ ಅಲ್ಲಿಯೇ ಇತ್ಯರ್ಥವಾಗಿ ಸಿನಿಮಾ ಬಿಡುಗಡೆ ಆಗಬೇಕೋ ಬೇಡವೊ ಎಂಬುದು ಅಂತಿಮವಾಗಿ ನ್ಯಾಯಾಲಯದಲ್ಲಿಯೇ ತೀರ್ಮಾನ ಆಗುತ್ತದೆ.

ಕನ್ನಡಪರ ಸಂಘಟನೆಗಳು ಹಾಗೂ ಇತರೆ ಕೆಲವು ಸಂಘಟನೆಗಳು ಈ ರೀತಿ ಸಿನಿಮಾಗಳ ನಿಷೇಧಕ್ಕೆ ಒತ್ತಾಯಿಸಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಕೆಲವು ಸಿನಿಮಾ, ಕಲಾವಿದರ ಮೇಲೆ ನಿಷೇಧಕ್ಕೆ ಒತ್ತಾಯ ಹೇರಲಾಗಿದೆ. ಆದರೆ ನಿಷೇಧ ಎಂಬುದು ಕಾನೂನಿಗೆ ವಿರುದ್ಧವಾದುದು. ಇತ್ತೀಚೆಗಷ್ಟೆ ಸೋನು ನಿಗಂ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಲಾಗಿತ್ತು. ಆಗ ಫಿಲಂ ಚೇಂಬರ್, ‘ನಿಷೇಧ ಹೇರುವುದು ಸಾಧ್ಯವಿಲ್ಲ. ಆ ಅಧಿಕಾರ ನಮ್ಮ ಬಳಿ ಇಲ್ಲ, ಅಸಹಕಾರ ತೋರಬಹುದು ಅಷ್ಟೆ’ ಎಂದಿತ್ತು.

ಈಗ ಕಮಲ್ ಸಿನಿಮಾ ‘ಥಗ್ ಲೈಫ್’ ಅನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ನಿಷೇಧ ಸಾಧ್ಯವಿಲ್ಲ. ಆದರೆ ಅಸಹಕಾರ ಸಾಧ್ಯವಿದೆ. ಸಿನಿಮಾ ಅನ್ನು ರಾಜ್ಯದ ಸಿನಿಮಾ ಮಂದಿರಗಳು ಪ್ರದರ್ಶಿಸದೇ ಇರುವ ನಿರ್ಣಯ ತಳೆಯುವುದು, ಕನ್ನಡದ ಪ್ರೇಕ್ಷಕರು ಸಿನಿಮಾ ಅನ್ನು ನೋಡದೇ ಇರುವ ನಿರ್ಧಾರ ತಳೆಯುವುದು, ಈ ರೀತಿ ಸಿನಿಮಾಕ್ಕೆ ಪರೋಕ್ಷ ‘ನಿಷೇಧ’ ಹೇರಿ ಬಿಸಿ ಮುಟ್ಟಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Wed, 28 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ