Vikram Movie on Burj Khalifa: ಕಿಚ್ಚ ಸುದೀಪ್​ ಹಾದಿಯಲ್ಲಿ ಸಾಗ್ತಿದ್ದಾರೆ ಕಮಲ್​ ಹಾಸನ್​; ಕನ್ನಡದ ಟ್ರೆಂಡ್​ ಫಾಲೋ ಮಾಡ್ತಿದೆ ‘ವಿಕ್ರಮ್​’ ಚಿತ್ರ

| Updated By: ಮದನ್​ ಕುಮಾರ್​

Updated on: Jun 01, 2022 | 12:35 PM

Kamal Haasan | Vikram Movie: ಹಲವು ವಿಚಾರಗಳಲ್ಲಿ ಕನ್ನಡ ಚಿತ್ರರಂಗ ಮಾದರಿ ಆಗಿದೆ. ‘ವಿಕ್ರಾಂತ್​ ರೋಣ’ ರೀತಿಯೇ ‘ವಿಕ್ರಮ್​’ ಸಿನಿಮಾ ತಂಡ ಕೂಡ ಪ್ರಚಾರ ಮಾಡುತ್ತಿದೆ.

Vikram Movie on Burj Khalifa: ಕಿಚ್ಚ ಸುದೀಪ್​ ಹಾದಿಯಲ್ಲಿ ಸಾಗ್ತಿದ್ದಾರೆ ಕಮಲ್​ ಹಾಸನ್​; ಕನ್ನಡದ ಟ್ರೆಂಡ್​ ಫಾಲೋ ಮಾಡ್ತಿದೆ ‘ವಿಕ್ರಮ್​’ ಚಿತ್ರ
ಕಮಲ್ ಹಾಸನ್, ಕಿಚ್ಚ ಸುದೀಪ್
Follow us on

ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಕಿಚ್ಚ ಸುದೀಪ್ ಅವರಂತಹ ಸ್ಟಾರ್​ ಕಲಾವಿದರನ್ನು ಅಕ್ಕ-ಪಕ್ಕದ ರಾಜ್ಯಗಳ ಹೀರೋಗಳು ಕೂಡ ಫಾಲೋ ಮಾಡುತ್ತಿದ್ದಾರೆ. ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾದ ಪ್ರಚಾರಕ್ಕೆ ಸುದೀಪ್​ ಅವರು ಹೊಸ ಯೋಜನೆಯೊಂದನ್ನು ರೂಪಿಸಿದ್ದರು. ದುಬೈನ ಬುರ್ಜ್​ ಖಲೀಫಾ ಕಟ್ಟಡದ ಮೇಲೆ ‘ವಿಕ್ರಾಂತ್​ ರೋಣ’ ಚಿತ್ರದ ಟೈಟಲ್​ ಲಾಂಚ್​ ಮಾಡಲಾಗಿತ್ತು. ಈಗ ಕಾಲಿವುಡ್​ ನಟ ಕಮಲ್​ ಹಾಸನ್​ ಕೂಡ ಅದೇ ಟ್ರೆಂಡ್​ ಫಾಲೋ ಮಾಡುತ್ತಿದ್ದಾರೆ. ಕಮಲ್​ ಹಾಸನ್​ ನಟನೆಯ ‘ವಿಕ್ರಮ್​’ ಸಿನಿಮಾ (Vikram Movie) ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರದ ಪ್ರಚಾರ ಕಾರ್ಯದಲ್ಲಿ ಇಡೀ ತಂಡ ತೊಡಗಿಕೊಂಡಿದೆ. ಜೂನ್ 1ರ ರಾತ್ರಿ 8.10ಕ್ಕೆ ಬುರ್ಜ್​ ಖಲೀಫಾ (Burj Khalifa) ಕಟ್ಟಡದ ಮೇಲೆ ಈ ಸಿನಿಮಾದ ಕೆಲವು ತುಣುಕುಗಳನ್ನು ಬಿತ್ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದನ್ನು ನೋಡಲು ಕಮಲ್​ ಹಾಸನ್​ ಫ್ಯಾನ್ಸ್​ ಕಾದಿದ್ದಾರೆ. ಪ್ರಚಾರದ ವಿಚಾರದಲ್ಲಿ ‘ವಿಕ್ರಾಂತ್​ ರೋಣ’ ಚಿತ್ರದ ಶೈಲಿಯನ್ನೇ ‘ವಿಕ್ರಮ್​’ ಸಿನಿಮಾ ಕೂಡ ಅನುಸರಿಸುತ್ತಿರುವುದರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಚರ್ಚೆ ಮಾಡುತ್ತಿದ್ದಾರೆ.

‘ವಿಕ್ರಮ್​’ ಸಿನಿಮಾವನ್ನು ಕಮಲ್​ ಹಾಸನ್​ ಒಡೆತನದ ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​’ ಸಂಸ್ಥೆ ನಿರ್ಮಿಸಿದೆ. ಬುರ್ಜ್​ ಖಲೀಫಾ ಕಟ್ಟದ ಮೇಲೆ ಈ ಚಿತ್ರದ ತುಣುಕುಗಳನ್ನು ಬಿತ್ತರಿಸುವ ಕುರಿತ ಮಾಹಿತಿಯನ್ನು ಈ ನಿರ್ಮಾಣ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದನ್ನು ಕಂಡು ಕಮಲ್​ ಹಾಸನ್​ ಫ್ಯಾನ್ಸ್​ ಖುಷಿ ಆಗಿದ್ದಾರೆ. ಜೂನ್​ 3ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ
‘ವೀಲ್‌ಚೇರ್‌ ರೋಮಿಯೋ’ ಚಿತ್ರಕ್ಕೆ ಕಿಚ್ಚನ ಸಾಥ್; ಇಡೀ ತಂಡಕ್ಕೆ ಸಿಕ್ತು ಸುದೀಪ್ ಕಡೆಯಿಂದ ಬೆಸ್ಟ್ ವಿಶ್
Vikrant Rona: ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್
ರಾಷ್ಟ್ರ ಭಾಷೆ ವಿವಾದದ ಬಳಿಕ ಗಲ್ಲಾ ಪೆಟ್ಟಿಗೆಯಲ್ಲೂ ಕಿಚ್ಚ ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಪೈಪೋಟಿ
‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಕಿಚ್ಚನ ಚಪ್ಪಾಳೆ; ಸುದೀಪ್​ ಬರೆದ ದೀರ್ಘ ಪತ್ರದಲ್ಲಿ ಏನೇನಿದೆ?

ಇತ್ತೀಚೆಗೆ ‘ವಿಕ್ರಮ್​’ ಸಿನಿಮಾಗೆ ಸೆನ್ಸಾರ್​ ಪ್ರಕ್ರಿಯೆ ಮುಗಿದಿದ್ದು, 13 ಕಡೆಗಳಲ್ಲಿ ಕತ್ತರಿ ಹಾಕಲಾಗಿದೆ. ಸೆನ್ಸಾರ್​ ಮಂಡಳಿ ಸದಸ್ಯರು ಸೂಚಿಸಿದ ಕಡೆಗಳಲ್ಲಿ ಕತ್ತರಿ ಪ್ರಯೋಗ ಮಾಡಲಾಗಿದೆ. ನಂತರ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಟ್ರೇಲರ್​ನಲ್ಲಿ ಗೊತ್ತಾಗಿರುವಂತೆ ‘ವಿಕ್ರಮ್​’ ಸಿನಿಮಾ ಸಖತ್​ ಮಾಸ್​ ಆಗಿ ಮೂಡಿಬಂದಿದೆ. ಸಿಕ್ಕಾಪಟ್ಟೆ ಸಾಹಸ ದೃಶ್ಯಗಳು ಕೂಡ ಇವೆ. ಸಿನಿಮಾದ ಕೆಲವು ಸಂಭಾಷಣೆಗಳಲ್ಲಿ ಬೈಗುಳಗಳು ಕೂಡ ಇದ್ದವು. ಅತಿಯಾದ ಹಿಂಸೆಯನ್ನು ತೋರಿಸುವ ಸೀನ್​ಗಳು ಸಹ ಚಿತ್ರದಲ್ಲಿವೆ. ಅವುಗಳಿಗೆ ಕತ್ತರಿ ಹಾಕುವಂತೆ ಸೂಚಿಸಲಾಗಿದೆ.

‘ವಿಕ್ರಮ್​’ ಚಿತ್ರಕ್ಕೆ ಲೋಕೇಶ್​ ಕನಗರಾಜ್​ ನಿರ್ದೇಶನ ಮಾಡಿದ್ದಾರೆ. ಪಾತ್ರವರ್ಗದ ಕಾರಣದಿಂದ ‘ವಿಕ್ರಮ್​’ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕಮಲ್​ ಹಾಸನ್​ ಜೊತೆಗೆ ವಿಜಯ್​ ಸೇತುಪತಿ ಮತ್ತು ಫಹಾದ್​ ಫಾಸಿಲ್​ ನಟಿಸಿದ್ದಾರೆ. ಈ ಮೂವರ ಕಾಂಬಿನೇಷನ್​ ಇರುವ ಕಾರಣದಿಂದ ಈ ಚಿತ್ರಕ್ಕೆ ಮೊದಲ ದಿನ ಭರ್ಜರಿ ಓಪನಿಂಗ್​ ಸಿಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮುಂಗಡ ಟಿಕೆಟ್​ ಬುಕಿಂಗ್​ ಓಪನ್​ ಆಗಿದ್ದು, ಅನೇಕ ಕಡೆಗಳಲ್ಲಿ ಟಿಕೆಟ್​ಗಳು ಸೋಲ್ಡ್​ ಔಟ್​ ಆಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:35 pm, Wed, 1 June 22