4 ತಿಂಗಳ ಹಿಂದೆಯೇ ನಡೆದಿತ್ತು ನಟಿ ರನ್ಯಾ ರಾವ್ ಮದುವೆ; ಬಂಧನದ ಬಳಿಕ ಹಲವು ರಹಸ್ಯ ಬಯಲು

ಕೆಲವೇ ದಿನಗಳ ಅಂತರದಲ್ಲಿ ರನ್ಯಾ ರಾವ್ ಅವರು ಹತ್ತಾರು ಬಾರಿ ದುಬೈಗೆ ಹೋಗಿ ಬಂದಿದ್ದಾರೆ! ಹಾಗಾಗಿ, ಅವರ ಚಲನವಲನದ ಮೇಲೆ ಅಧಿಕಾರಿಗಳಿಗೆ ಅನುಮಾನ ಬಂತು. ರನ್ಯಾ ಅವರು ದೊಡ್ಡ ಸ್ಮಗ್ಲಿಂಗ್ ಜಾಲದಲ್ಲಿ ಭಾಗಿ ಆಗಿರುವ ಸಾಧ್ಯತೆ ಇದೆ. ತನಿಖೆ ನಡೆದಂತೆಲ್ಲ ಅನೇಕರ ಹೆಸರುಗಳು ಹೊರಬರಲಿದೆ.

4 ತಿಂಗಳ ಹಿಂದೆಯೇ ನಡೆದಿತ್ತು ನಟಿ ರನ್ಯಾ ರಾವ್ ಮದುವೆ; ಬಂಧನದ ಬಳಿಕ ಹಲವು ರಹಸ್ಯ ಬಯಲು
Ranya Rao
Updated By: ಮದನ್​ ಕುಮಾರ್​

Updated on: Mar 05, 2025 | 4:08 PM

ನಟಿ ರನ್ಯಾ ರಾವ್ (Ranya Rao) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡಿದ ಆರೋಪ ಅವರ ಮೇಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರನ್ನು ರೆಡ್​ಹ್ಯಾಂಡ್​ ಆಗಿ ಹಿಡಿಯಲಾಗಿದೆ. ಬಳಿಕ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬರೋಬ್ಬರಿ 14 ಕೆಜಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡುವಾಗ ರನ್ಯಾ ರಾವ್ ಸಿಕ್ಕಿಬಿದ್ದಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಅನೇಕ ರಹಸ್ಯಗಳು ಈಗ ಬಯಲಾಗುತ್ತಿವೆ.

ಕನ್ನಡದ ‘ಮಾಣಿಕ್ಯ’, ‘ಪಟಾಕಿ’ ಸಿನಿಮಾಗಳಲ್ಲಿ ರನ್ಯಾ ರಾವ್ ನಟಿಸಿದ್ದಾರೆ. ಆ ಬಳಿಕ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರಲಿಲ್ಲ. 4 ತಿಂಗಳ ಹಿಂದೆಯೇ ರನ್ಯಾ ರಾವ್ ಅವರ ಮದುವೆ ಆಗಿತ್ತು ಎಂಬುದು ಈಗ ತಿಳಿದುಬಂದಿದೆ. ಈ ಬಗ್ಗೆ ರನ್ಯಾ ರಾವ್ ಮಲತಂದೆ ಡಿಜಿಪಿ ಕೆ. ರಾಮಚಂದ್ರ ರಾವ್ ಅವರು ‘ಟೈಮ್ಸ್​ ಆಫ್​ ಇಂಡಿಯಾ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ನಂತರ ತಮ್ಮನ್ನು ರನ್ಯಾ ಸಂಪರ್ಕಿಸಿಲ್ಲ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ ಎಂದು ವರದಿ ಆಗಿದೆ.

ರನ್ಯಾ ಅವರು ಪದೇಪದೇ ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದರು. ಹಾಗಾಗಿ ಡಿಆರ್​ಐ ಅಧಿಕಾರಿಗಳಿಗೆ ರನ್ಯಾ ಮೇಲೆ ಅನುಮಾನ ಮೂಡಿತ್ತು. ಪ್ರತಿ ಬಾರಿಯೂ ಅವರು ಹಿರಿಯ ಅಧಿಕಾರಿಗಳ ಸೆಕ್ಯೂರಿಟಿ ಪ್ರೋಟೋಕಾಲ್ ಬಳಸಿ ಭದ್ರತಾ ತಪಾಸಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. 2025ರಲ್ಲಿ ಅವರು ಸುಮಾರು 10 ಬಾರಿ ಗಲ್ಫ್ ರಾಷ್ಟ್ರಗಳಿಗೆ ಹೋಗಿಬಂದಿದ್ದಾರೆ. 15 ದಿನಗಳಲ್ಲಿ 4 ಸಲ ಅವರು ದುಬೈಗೆ ಹೋಗಿ ಬಂದಿದ್ದಾರೆ. ಈ ಬಾರಿ ಸಿಕ್ಕಿಬಿದ್ದಿದ್ದಾರೆ. ಪ್ರತಿ ಬಾರಿ ದುಬೈಗೆ ತೆರಳಿದ್ದಾಗಲೂ ಅವರು ಒಂದೇ ಡ್ರೆಸ್​ ಧರಿಸಿದ್ದರು ಎನ್ನಲಾಗಿದೆ!

ಇದನ್ನೂ ಓದಿ
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!
ನಟಿ ರನ್ಯಾ ಚಿನ್ನ ಸ್ಮಗ್ಲಿಂಗ್​ನಲ್ಲಿ ಮಲತಂದೆ ಡಿಜಿಪಿಯ ಕೈವಾಡವೂ ಇತ್ತೇ?
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ

ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ

ಈ ಮೊದಲು ರನ್ಯಾ ರಾವ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವಿಡಿಯೋಗಳನ್ನು ಕೂಡ ಈಗ ಪರಿಶೀಲಿಸಲಾಗುತ್ತಿದೆ. ಈ ಹಿಂದೆ ಕೂಡ ಅವರು ಚಿನ್ನ ಕಳ್ಳಸಾಗಣೆ ಮಾಡಿರಬಹುದು ಎಂಬ ಅನುಮಾನ ಮೂಡಿದೆ. ಅಲ್ಲದೇ, ಅವರೊಂದಿಗೆ ದೊಡ್ಡ ದೊಡ್ಡ ವ್ಯಕ್ತಿಗಳು ಕೂಡ ಕೈ ಜೋಡಿಸಿರುವ ಸಾಧ್ಯತೆ ಇದೆ. ರನ್ಯಾ ಅವರು ದೊಡ್ಡ ಸ್ಮಗ್ಲಿಂಗ್ ಜಾಲದ ಜೊತೆ ನಂಟು ಹೊಂದಿರುವ ಶಂಕೆ ಇದೆ. ಈ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ರನ್ಯಾ ಮನೆಯಲ್ಲಿ ಕೂಡ ಶೋಧಕಾರ್ಯ ನಡೆಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.