‘ಯಾಕಿಂಗೆ 2’ ಹಾಡು ಸೂಪರ್​ ಹಿಟ್​; 2 ಮಿಲಿಯನ್​ ಸನಿಹಕ್ಕೆ ಅಲೋಕ್​ ಹೊಸ ಸಾಂಗ್​

| Updated By: ಮದನ್​ ಕುಮಾರ್​

Updated on: Jan 16, 2022 | 4:26 PM

ಈ ಹಾಡಿನಲ್ಲಿ ಪುನೀತ್​ ರಾಜ್​ಕುಮಾರ್​, ಸಂಚಾರಿ ವಿಜಯ್​, ಚಿರಂಜೀವಿ ಸರ್ಜಾ ಅವರಿಗೆ ನಮನ ಸಲ್ಲಿಸಲಾಗಿದೆ. ಹಾಗಾಗಿ ಅವರ ಅಭಿಮಾನಿಗಳು ಕೂಡ ಈ ಗೀತೆಯನ್ನು ಇಷ್ಟಪಟ್ಟಿದ್ದಾರೆ.

‘ಯಾಕಿಂಗೆ 2’ ಹಾಡು ಸೂಪರ್​ ಹಿಟ್​; 2 ಮಿಲಿಯನ್​ ಸನಿಹಕ್ಕೆ ಅಲೋಕ್​ ಹೊಸ ಸಾಂಗ್​
ಅಲೋಕ್​, ವೈಷ್ಣವಿ
Follow us on

ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಮ್ಯೂಸಿಕ್​ ವಿಡಿಯೋಗಳ (Music Video) ಸಂಖ್ಯೆ ಕಡಿಮೆ. ಕೆಲವೇ ಕೆಲವು ಗಾಯಕರು ಮತ್ತು ಸಂಗೀತ ನಿರ್ದೇಶಕರು ಈ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ. ಆ ಪೈಕಿ ಅಲೋಕ್​ ಕೂಡ ತುಂಬ ಫೇಮಸ್​. ಆಲ್​​ ಓಕೆ (All OK) ಎಂಬ ಹೆಸರಿನಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಅವರು ಈಗಾಗಲೇ ಅನೇಕ ಹಿಟ್​ ಹಾಡುಗಳನ್ನು ನೀಡಿದ್ದಾರೆ. ‘ಡೋಂಟ್​ ವರಿ’, ‘ಹ್ಯಾಪಿ ಆಗಿದೆ’, ‘ಮಾರಮ್ಮನ ಡಿಸ್ಕೋ’, ‘ಯಾಕಿಂಗೆ ಮಗಾ ಹಾಕಿಂಗೆ’ ಮುಂತಾದ ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಅದರಿಂದಾಗಿ ಆಲ್​ ಓಕೆ ಯಶಸ್ಸು ಪಡೆದುಕೊಂಡರು. ಈಗ ‘ಯಾಕಿಂಗೆ 2’ (Yaakinge 2) ಹಾಡು ಮಾಡಿ ಮತ್ತೆ ಸೈ ಎನಿಸಿಕೊಂಡಿದ್ದಾರೆ. ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಒಂದೇ ದಿನಕ್ಕೆ ಈ ಹಾಡು ಒಂದು ಮಿಲಿಯನ್​ ವೀವ್ಸ್​ ಪಡೆದುಕೊಂಡಿತು. ಈಗ 2 ಮಿಲಿಯನ್​ ಕಡೆಗೆ ಮುನ್ನುಗ್ಗುತ್ತಿದೆ. ಈ ಪರಿ ರೆಸ್ಪಾನ್ಸ್​ ಸಿಗುತ್ತಿರುವುದಕ್ಕೆ ಅಲೋಕ್​ ಖುಷಿ ಆಗಿದ್ದಾರೆ.

ಅಲೋಕ್​ ಅಭಿಮಾನಿಗಳು ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಈ ಗೀತೆಯ ಇನ್ನೊಂದು ವಿಶೇಷ ಏನೆಂದರೆ ಬಿಗ್​ ಬಾಸ್​ ಖ್ಯಾತಿ ಹಲವು ಸೆಲೆಬ್ರಿಟಿಗಳು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಅಲೋಕ್​ ಅವರ ಈ ಹಿಂದಿನ ಹಾಡುಗಳಲ್ಲಿ ಕೂಡ ಚಿತ್ರರಂಗದ ಅನೇಕರು ಅತಿಥಿಗಳಾಗಿ ಕಾಣಿಸಿಕೊಂಡಿದ್ದರು. ‘ಯಾಕಿಂಗೆ 2’ ಸಾಂಗ್​ನಲ್ಲೂ ಟ್ರೆಂಡ್​ ಮುಂದುವರಿದಿದೆ. ‘ಬಿಗ್​ ಬಾಸ್​ ಕನ್ನಡ 8’ರಲ್ಲಿ ಮಿಂಚಿದ ವೈಷ್ಣವಿ, ಅರವಿಂದ್ ಕೆ.ಪಿ., ದಿವ್ಯಾ ಉರುಡುಗ, ರಘು ಗೌಡ ಸಹ ಅಲೋಕ್​ ಜೊತೆ ಡ್ಯಾನ್ಸ್​ ಮಾಡಿದ್ದಾರೆ.

ಈ ಹಾಡಿನಲ್ಲಿ ಪುನೀತ್​ ರಾಜ್​ಕುಮಾರ್​, ಸಂಚಾರಿ ವಿಜಯ್​, ಚಿರಂಜೀವಿ ಸರ್ಜಾ ಅವರಿಗೆ ನಮನ ಸಲ್ಲಿಸಲಾಗಿದೆ. ಹಾಗಾಗಿ ಅವರ ಅಭಿಮಾನಿಗಳು ಕೂಡ ಈ ಗೀತೆಯನ್ನು ಇಷ್ಟಪಟ್ಟಿದ್ದಾರೆ. ಅಶೋಕ್​ ಜೋಷಿ ಛಾಯಾಗ್ರಹಣ, ಲೋಟು ಲೋಹರ್​ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಅಲೋಕ್​ ನಿಭಾಯಿಸಿದ್ದಾರೆ.

2018ರಲ್ಲಿ ರಿಲೀಸ್​ ಆಗಿದ್ದ ‘ಯಾಕಿಂಗೆ’ ಹಾಡು ಈವರೆಗೆ 12 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಈಗ ‘ಯಾಕಿಂಗೆ ಪಾರ್ಟ್​ 2’ ಹಾಡಿಗೆ ಎಷ್ಟು ವೀವ್ಸ್​ ಆಗಲಿದೆ ಎಂಬ ಕುತೂಹಲ ನಿರ್ಮಾಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಸಾಂಗ್​ ವೈರಲ್​ ಆಗ್ತಿದೆ.

ಇದನ್ನೂ ಓದಿ:

‘ಹ್ಯಾಪಿ ಆಗಿದೆ..’ ಎಂದು ಕನ್ನಡ ಹಾಡಿಗೆ ತಲೆದೂಗಿದ ಕೊವಿಡ್​ ಸೋಂಕಿತರು; ಕಡುಕಷ್ಟದಲ್ಲೂ ಆಲ್​ ಓಕೆ

‘ಪಬ್‌ಗಳಲ್ಲಿ ಕನ್ನಡ ಹಾಡು ಹಾಕೋದಿಲ್ಲ, ಅಸಲಿಗೆ ಅವ್ರೆಲ್ಲ ಕನ್ನಡದವ್ರೇ ಅಲ್ಲ.. ಆದ್ರೂ ಪಬ್ ನಡೆಸೋಕೆ ಇಲ್ಲಿ ಜಾಗ ಬೇಕು’