
‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾದ ಗಳಿಕೆ ವಾರದ ದಿನಗಳಲ್ಲೂ ತಗ್ಗದೆ ಮುನ್ನುಗ್ಗುತ್ತಿದೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಸೂಚನೆ ಸಿಕ್ಕಿದೆ. ಮುಂದೆ ಬಂದಿದ್ದು ದೀಪಾವಳಿ. ಈ ಸಮಯದಲ್ಲಿ ಸಾಲು ಸಾಲು ರಜೆಗಳು ಬರುತ್ತವೆ. ಇದು ಸಿನಿಮಾಗೆ ಸಹಕಾರಿ ಆಗುವ ಸೂಚನೆ ಸಿಕ್ಕಿದೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರದ ಕಲೆಕ್ಷನ್ 700 ಕೋಟಿ ರೂಪಾಯಿ ಸಮೀಪಿಸಿದೆ ಅನ್ನೋದು ವಿಶೇಷ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಯಿತು. 12 ದಿನಕ್ಕೆ ಈ ಚಿತ್ರ ಭರ್ಜರಿ ಗಳಿಕೆ ಮಾಡಿದೆ. ಈ ಚಿತ್ರದ 11 ದಿನದ ಲೆಕ್ಕಾಚಾರ ನೋಡಿದರೆ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 655 ಕೋಟಿ ರೂಪಾಯಿ ಆಗಿದೆ. 12 ದಿನದ ಗಳಿಕೆಯೂ ಸೇರಿದರೆ ಒಟ್ಟಾರೆ ಕಲೆಕ್ಷನ್ 700 ಕೋಟಿ ರೂಪಾಯಿ ಸಮೀಪಿಸಲಿದೆ. ಭಾರತದಲ್ಲಿ ಈ ಚಿತ್ರದ ಗಳಿಕೆ 438 ಕೋಟಿ ರೂಪಾಯಿ ಆಗಿದೆ. ಕನ್ನಡದಲ್ಲಿ 138 ಕೋಟಿ ರೂಪಾಯಿ ಗಳಿಕೆ ಆದರೆ, ಹಿಂದಿಯಲ್ಲಿ 144.5 ಕೋಟಿ ರೂಪಾಯಿ ಹರಿದು ಬಂದಿದೆ.
ಇದನ್ನೂ ಓದಿ: ಎರಡನೇ ಭಾನುವಾರವೂ ಭರ್ಜರಿ ಕಲೆಕ್ಷನ್ ಮಾಡಿದ ‘ಕಾಂತಾರ: ಚಾಪ್ಟರ್ 1’
‘ಕಾಂತಾರ: ಚಾಪ್ಟರ್ 1’ ಸಿನಿಮಾ ಎರಡನೇ ಸೋಮವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 19 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಾರದ ದಿನ ಸಿನಿಮಾ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡೋದು ಸಣ್ಣ ಮಾತಲ್ಲ. ಅದರಲ್ಲೂ ಸಿನಿಮಾ ಒಂದು ಎರಡನೇ ಸೋಮವಾರ ಇಷ್ಟು ಉತ್ತಮ ಗಳಿಕೆ ಮಾಡಿದ್ದು ನಿಜಕ್ಕೂ ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯ.
ಹಿಂದಿ ಪ್ರೇಕ್ಷಕರ ಸಂಖ್ಯೆ ತುಂಬಾನೇ ದೊಡ್ಡದಿದೆ. ಹೀಗಾಗಿ, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಹಿಂದಿ ಭಾಗದಲ್ಲಿ ಹೆಚ್ಚಿನ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಉತ್ತರ ಭಾರತದಲ್ಲಿ ಸರಿಯಾದ ಪ್ರಚಾರ ಸಿಕ್ಕಿಲ್ಲ ಎಂಬ ಆರೋಪ ಇದೆ. ಒಂದೊಮ್ಮೆ ಆ ಭಾಗದಲ್ಲಿ ಚಿತ್ರವನ್ನು ಅದ್ದೂರಿಯಾಗಿ ಪ್ರಚಾರ ಮಾಡಿದ್ದರೆ, ಇನ್ನಷ್ಟು ಗಳಿಕೆ ಪಕ್ಕಾ ಆಗುತ್ತಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.