‘ಕಾಂತಾರ: ಚಾಪ್ಟರ್ 1’ ಪ್ರೀಮಿಯರ್ ಶೋ ಯಾವಾಗ? ಮಾಹಿತಿ ಕೊಟ್ಟ ರಿಷಬ್

ರಿಷಬ್ ಶೆಟ್ಟಿ ನಿರ್ದೇಶನದ "ಕಾಂತಾರ: ಚಾಪ್ಟರ್ 1" ಸಿನಿಮಾ ಅಕ್ಟೋಬರ್ 2ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಪ್ರೀಮಿಯರ್ ಶೋ ಅಕ್ಟೋಬರ್ 1 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಖಚಿತಪಡಿಸಲಾಗಿದೆ. ಬುಕ್‌ಮೈಶೋ ಮೂಲಕ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುವುದು. ಈ ಸಿನಿಮಾದ ಟ್ರೇಲರ್ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದೆ.

‘ಕಾಂತಾರ: ಚಾಪ್ಟರ್ 1’ ಪ್ರೀಮಿಯರ್ ಶೋ ಯಾವಾಗ? ಮಾಹಿತಿ ಕೊಟ್ಟ ರಿಷಬ್
ರಿಷಬ್

Updated on: Sep 23, 2025 | 8:59 AM

ಇತ್ತೀಚೆಗೆ ಸ್ಯಾಂಡಲ್​ವುಡ್​ನಲ್ಲಿ ಪ್ರೀಮಿಯರ್ ಶೋ ಟ್ರೆಂಡ್ ಜೋರಾಗಿದೆ. ಯಾವುದೇ ಸಿನಿಮಾ ರಿಲೀಸ್ ಆಗುತ್ತದೆ ಎಂದಾದರೆ ಅದಕ್ಕೂ ಕೆಲವು ದಿನ ಮೊದಲೇ ವಿಶೇಷ ಶೋಗಳನ್ನು ಆಯೋಜನೆ ಮಾಡಲಾಗುತ್ತದೆ. ‘ಸು ಫ್ರಮ್ ಸೋ’ ಸಿನಿಮಾ ಈ ಟ್ರೆಂಡ್​ನ ಫಾಲೋ ಮಾಡಿ ಗೆಲುವು ಕಂಡಿತ್ತು. ಈಗ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಚಿತ್ರಕ್ಕೂ ವಿಶೇಷ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆಯಂತೆ. ಅದು ಯಾವಾಗ? ಎಲ್ಲಿ ಎಂಬುದರ ಬಗ್ಗೆ ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಈಗಾಗಲೇ ರಿಲೀಸ್ ಆಗಿರೋ ಟ್ರೇಲರ್ ಮೆಚ್ಚುಗೆ ಪಡೆದಿದೆ. ಅಕ್ಟೋಬರ್ 1ರಂದು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡೋದಾಗಿ ಅವರು ಖಚಿತಪಡಿಸಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಸಿನಿಮಾ ರಿಲೀಸ್​ಗೂ ಒಂದು ದಿನ ಮೊದಲೇ ಚಿತ್ರ ವೀಕ್ಷಿಸಬಹುದಾಗಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಸೆಪ್ಟೆಂಬರ್ 22ರಂದು ನಡೆಯಿತು. ಆಗ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ರಿಷಬ್ ಸೇರಿದಂತೆ ಸಿನಿಮಾದ ಅನೇಕರು ಭಾಗಿ ಆಗಿದ್ದರು. ರಿಷಬ್ ಅವರು ವೇದಿಕೆ ಮೇಲೆ ಮಾತನಾಡುವಾಗ ಪ್ರೀಮೀಯರ್ ಶೋಗಳ ಬಗ್ಗೆ ಪ್ರಶ್ನೆ ಎದುರಾಯಿತು. ‘ಅಕ್ಟೋಬರ್ 1ರಂದು ಪ್ರೀಮಿಯರ್ ಶೋ ಇರುತ್ತೆ ಅಲ್ವಾ ಅಣ್ಣ’ ಎಂದು ವಿಜಯ್ ಬಳಿ ರಿಷಬ್ ಕೇಳಿದರು. ಇದಕ್ಕೆ ವಿಜಯ್ ಕಿರಗಂದೂರು ಅವರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ
ರಿಯಾಲಿಟಿ ಶೋ ತೊರೆಯುವ ನಿರ್ಧಾರಕ್ಕೆ ಬಂದ ಧನಶ್ರೀ; ಕಾರಣ ಏನು?
‘ಕಾಂತಾರ: ಚಾಪ್ಟರ್ 1’ ಅವಧಿ ಅದೆಷ್ಟು ದೀರ್ಘ; ಇಲ್ಲಿದೆ ಸೆನ್ಸಾರ್ ವಿವರ
ಮಾಡಿದ ಆ ಒಂದು ತಪ್ಪಿಗೆ ವೇದಿಕೆ ಮೇಲೆ ಅನುಶ್ರೀಗೆ ಕ್ಷಮೆ ಕೇಳಿದ ರಿಷಬ್
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅವಧಿ ಅದೆಷ್ಟು ದೀರ್ಘ; ಸೆನ್ಸಾರ್ ಸರ್ಟಿಫಿಕೇಟ್​ನಲ್ಲಿದೆ ವಿವರ

ಸಂಜೆ 6 ಗಂಟೆ ಬಳಿಕ ಬೆಂಗಳೂರಿನ ಅನೇಕ ಕಡೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಚಿತ್ರದ ಪೇಡ್ ಪ್ರೀಮಿಯರ್ ನಡೆಯಲಿದೆ. ಅಂದರೆ ಬುಕ್ ಮೈ ಶೋನಲ್ಲಿ ಟಿಕೆಟ್ ಬಿಡುತ್ತಾರೆ. ಹಣ ಕೊಟ್ಟು ಖರೀದಿಸಿ ಜನರು ಸಿನಿಮಾ ವೀಕ್ಷಿಸಬಹುದು. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:58 am, Tue, 23 September 25