AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂತಾರ ನೋಡುವವರು ಮಾಂಸಾಹಾರ ತಿನ್ನಬಾರದಾ? ವೈರಲ್ ಪೋಸ್ಟರ್​​ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ

ಅಕ್ಟೋಬರ್ 2ರಂದು ಅದ್ದೂರಿಯಾಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಒಂದು ಪೋಸ್ಟರ್ ವೈರಲ್ ಆಗಿದೆ. ಅದಕ್ಕೆ ಈಗ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರ ನೋಡುವವರು 3 ವಿಷಯ ಪಾಲಿಸಬೇಕು ಎಂದು ಪೋಸ್ಟರ್​​ನಲ್ಲಿ ಸೂಚಿಸಲಾಗಿತ್ತು.

ಕಾಂತಾರ ನೋಡುವವರು ಮಾಂಸಾಹಾರ ತಿನ್ನಬಾರದಾ? ವೈರಲ್ ಪೋಸ್ಟರ್​​ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ
Viral Poster, Rishab Shetty
ಮದನ್​ ಕುಮಾರ್​
|

Updated on: Sep 22, 2025 | 9:27 PM

Share

ಬಿಡುಗಡೆಗೂ ಮುನ್ನವೇ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಸೆನ್ಸೇಷನ್ ಸೃಷ್ಟಿ ಮಾಡಿದೆ. ಚಿತ್ರತಂಡದ ಪ್ಲ್ಯಾನ್ ಪ್ರಕಾರವೇ ಪ್ರಚಾರ ಕಾರ್ಯ ನಡೆಯುತ್ತಿದೆ. ಇಂದು (ಸೆ.22) ಈ ಸಿನಿಮಾದ ಟ್ರೇಲರ್ (Kantara Chapter 1 Trailer) ಬಿಡುಗಡೆ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡುವಲ್ಲಿ ಈ ಟ್ರೇಲರ್ ಯಶಸ್ವಿಯಾಗಿದೆ. ಬಳಿಕ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಲಾಯಿತು. ಈ ವೇಳೆ ಚಿತ್ರತಂಡಕ್ಕೆ ಒಂದು ಪ್ರಮುಖ ಪ್ರಶ್ನೆ ಎದುರಾಯಿತು. ‘ಈ ಸಿನಿಮಾ ನೋಡುವವರು ಮಾಂಸಾಹಾರ ತಿನ್ನಬಾರದು’ ಎಂದು ಕೆಲವರು ನಕಲಿ ಪೋಸ್ಟರ್ ವೈರಲ್ ಮಾಡಿದ್ದರು. ಅದಕ್ಕೆ ರಿಷಬ್ ಶೆಟ್ಟಿ (Rishab Shetty) ಅವರು ಉತ್ತರ ನೀಡಿದರು.

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ಫೇಕ್ ಪೋಸ್ಟರ್ ಹರಿದಾಡಿತ್ತು. ಅದರಲ್ಲಿ ಪ್ರಸ್ತಾಪಿಸಲಾಗಿದ್ದ ವಿಷಯಗಳ ಸಖತ್ ಚರ್ಚೆ ಹುಟ್ಟುಹಾಕಿದ್ದವು. ಅಲ್ಲದೇ ವಿವಾದಕ್ಕೂ ಕಾರಣ ಆಗುವಂತಿದ್ದವು. ‘ಕಾಂತಾರ ಸಿನಿಮಾ ನೋಡಲು ಬರುವವರು ಮದ್ಯಪಾನ ಮಾಡಬಾರದು, ಧೂಮಪಾನ ಮಾಡಬಾರದು ಹಾಗೂ ಮಾಂಸಾಹಾರ ಸೇವಿಸಬಾರದು’ ಎಂದು ಆ ಪೋಸ್ಟರ್​​ನಲ್ಲಿ ಬರೆಯಲಾಗಿತ್ತು.

ಅದು ಫೇಕ್ ಪೋಸ್ಟರ್ ಎಂದು ರಿಷಬ್ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ. ‘ಊಟೋಪಚಾರಗಳನ್ನು, ಅವರವರ ಅಭ್ಯಾಸಗಳನ್ನು ಪ್ರಶ್ನಿಸೋಕೆ ಯಾರಿಗೂ ಅಧಿಕಾರ ಇರಲ್ಲ. ಅದೆಲ್ಲ ಅವರವರ ಸ್ವಂತ ವಿವೇಚನೆಗೆ ಬಿಟ್ಟಂತಹ ವಿಚಾರಗಳು. ಯಾರೋ ಫೇಕ್ ಪೋಸ್ಟರ್ ಹಾಕಿದ್ದಾರೆ. ಅದರ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಬಂದ ಕೂಡಲೇ ನಾವು ಅಲ್ಲಿಯೇ ಹೋಗಿ ಪ್ರತಿಕ್ರಿಯೆ ನೀಡುವುದು ಕಷ್ಟ ಆಗುತ್ತದೆ. ಆದರೆ ಆ ಪೋಸ್ಟರ್​ ಅನ್ನು ಅವರು ತೆಗೆದು ಹಾಕಿ ಕ್ಷಮೆ ಕೇಳಿದ್ದಾರೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

‘ಆ ಪೋಸ್ಟರ್ ನಮ್ಮ ಪ್ರೊಡಕ್ಷನ್ ಹೌಸ್​​ಗೆ ಯಾವುದೇ ರೀತಿಯ ಸಂಬಂಧ ಇರುವಂಥದ್ದಲ್ಲ. ಅದನ್ನು ನೋಡಿದಾಗ ನಮಗೆ ಶಾಕ್ ಆಯಿತು. ನನಗೆ ಯಾರೋ ಕಳಿಸಿದರು. ನಾನು ಕೂಡಲೇ ಪ್ರೊಡಕ್ಷನ್ ಗ್ರೂಪಿನಲ್ಲಿ ಹಾಕಿದೆ. ಇದನ್ನು ಯಾರು ಮಾಡುತ್ತಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಜನರು ಇದರ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತ ಪ್ರಶ್ನಿಸಿದೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

ಇದನ್ನೂ ಓದಿ: ‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ಕಾಂತಾರ ಅವಘಡ ನೆನೆದು ರಿಷಬ್ ಶೆಟ್ಟಿ ಭಾವುಕ

‘ಬದುಕಿನ ಶೈಲಿ ಪ್ರತಿಯೊಬ್ಬನಿಗೂ ಅವನವನಿಗೆ ಬಿಟ್ಟಿದ್ದು. ಅದನ್ನು ಪ್ರಶ್ನಿಸುವಂತಹ ಅಧಿಕಾರ ಯಾರಿಗೂ ಇಲ್ಲ. ಒಂದು ಸಿನಿಮಾ ಟ್ರೆಂಡ್ ಆಗಿ, ನರೇಟಿವ್ ಸೆಟ್ ಆಗುವಾಗ ಅದರಲ್ಲಿ ತಮ್ಮ ವಿಚಾರವನ್ನು ತೆಗೆದುಕೊಂಡು ಬಂದರೆ ಜನಪ್ರಿಯತೆ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರಿಂದ ಈ ರೀತಿ ಆಗುತ್ತದೆ. ಇದು ಕೂಡ ಅಂಥದ್ದೇ. ಅದಕ್ಕೂ ಪ್ರೊಡಕ್ಷನ್​ ಹೌಸ್​​ಗೂ ಸಂಬಂಧ ಇಲ್ಲ’ ಎಂದು ರಿಷಬ್ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ