ಯಶಸ್ಸು ಅಂದರೆ ಇದು; ರಿಷಬ್ ಶೆಟ್ಟಿಗೆ ಮುಂಬೈನಲ್ಲಿ ಸಿಕ್ತು ವಿಶೇಷ ಗೌರವ

ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ ಭಾರಿ ಯಶಸ್ಸು ಕಂಡಿದೆ. ಈ ಚಿತ್ರ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಕನ್ನಡಕ್ಕಿಂತ ಹೆಚ್ಚು ಗಳಿಸಿ ಅಚ್ಚರಿ ಮೂಡಿಸಿದೆ. ಮುಂಬೈನಲ್ಲಿ ಅದ್ಧೂರಿ ಸ್ವಾಗತ ಪಡೆದ ರಿಷಬ್, ಅಮಿತಾಭ್ ಬಚ್ಚನ್ ಅವರ 'ಕೌನ್ ಬನೇಗಾ ಕರೋಡ್ಪತಿ' ಶೋಗೆ ಅತಿಥಿಯಾಗಿ ಆಹ್ವಾನಿತರಾಗಿದ್ದಾರೆ.

ಯಶಸ್ಸು ಅಂದರೆ ಇದು; ರಿಷಬ್ ಶೆಟ್ಟಿಗೆ ಮುಂಬೈನಲ್ಲಿ ಸಿಕ್ತು ವಿಶೇಷ ಗೌರವ
ರಇಷಬ್

Updated on: Oct 12, 2025 | 11:28 AM

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ಕಂಡ ಗೆಲುವು ತುಂಬಾನೇ ದೊಡ್ಡದು. ಈ ಚಿತ್ರದ ಬಗ್ಗೆ ಅವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನು ಮೀರಿ ಸಿನಿಮಾ ಮೂಡಿ ಬಂದಿದೆ. ರಿಷಬ್​ಗೆ ಮುಂಬೈನಲ್ಲಿ ಸಿಕ್ಕ ದೊಡ್ಡ ಸ್ವಾಗತವೇ ಇದಕ್ಕೆ ಸಾಕ್ಷಿ. ಹಿಂದಿ ಮಂದಿ ರಿಷಬ್​ನ ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಸ್ವಾಗತ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಿಂದ ದೊಡ್ಡ ಗೆಲುವು ಕಂಡರು. ಈ ಸಿನಿಮಾ ಹಿಂದಿಯಲ್ಲೂ ಸದ್ದು ಮಾಡಿತ್ತು. ತಡವಾಗಿ ಹಿಂದಿಗೆ ಡಬ್ ಆಗಿ ರಿಲೀಸ್ ಮಾಡಿದರೂ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಏಕಕಾಲಕ್ಕೆ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಪರಭಾಷೆಯ ಮಂದಿ ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ
‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ-ಅಮೂಲ್ಯ ವಿವಾಹ; ದೊಡ್ಡ ಟ್ವಿಸ್ಟ್
ಈ ವಾರ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ

ಕಲೆಕ್ಷನ್​ನಲ್ಲೂ ಮೇಲುಗೈ

‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲತಃ ಕನ್ನಡದ ಚಿತ್ರ. ಹಾಗಾಗಿ, ಕನ್ನಡದಲ್ಲಿ ಈ ಚಿತ್ರ ಮೇಲುಗೈ ಸಾಧಿಸಬೇಕು. ಅಚ್ಚರಿ ಎಂದರೆ, ಕನ್ನಡದ ಕಲೆಕ್ಷನ್​ಗಿಂತ ಹಿಂದಿ ಕಲೆಕ್ಷನ್ ಹೆಚ್ಚಿದೆ ಅನ್ನೋದು ವಿಶೇಷ. 9 ದಿನಗಳಲ್ಲಿ ಕನ್ನಡದಲ್ಲಿ 114 ಕೋಟಿ ರೂಪಾಯಿ ಕಲೆಕ್ಷನ್ ಆದರೆ, ಹಿಂದಿಯಲ್ಲಿ 116 ಕೋಟಿ ರೂಪಾಯಿ ಗಳಿಕೆ ಆಗಿದೆ.

ಇದನ್ನೂ ಓದಿ: ಕಿಚ್ಚನಿಂದ ಸ್ಫೂರ್ತಿ ಪಡೆದು ಈ ನಿರ್ಧಾರ ತೆಗೆದುಕೊಂಡರು ರಿಷಬ್ ಶೆಟ್ಟಿ

ಅದ್ದೂರಿ ಸ್ವಾಗತ

ರಿಷಬ್ ಶೆಟ್ಟಿ ಅವರು ಮಂಬೈನ ‘ಗೆಯಟಿ ಗ್ಯಾಲಕ್ಸಿ’ ಥಿಯೇಟರ್​ಗೆ ತೆರಳಿದ್ದಾರೆ. ಅವರು ಕಾರಿನಲ್ಲಿ ಬರುವಾಗ ಪುಷ್ಪವೃಷ್ಟಿ ಸುರಿಸಿ ಸ್ವಾಗತಿಸಲಾಗಿದೆ. ಇದು ರಿಷಬ್ ಶೆಟ್ಟಿಗೆ ಸಿಕ್ಕ ನಿಜವಾದ ಗೆಲುವು ಎಂದು ಅನೇಕರು ಹೇಳಿದ್ದಾರೆ. ಮುಂಬೈ ಜನತೆ ತೋರಿದ ಪ್ರೀತಿಗೆ ಅವರ ಹೃದಯ ತುಂಬಿ ಬಂದಿದೆ.

ಕೌನ್ ಬನೇಗಾ ಕರೋಡ್ಪತಿ ಶೋ

ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌಬ್ ಬನೇಗಾ ಕರೋಡ್ಪತಿ ಶೋಗೆ ಕನ್ನಡಿಗರಿಗೆ ಅವಕಾಶ ಸಿಗುತ್ತದೆ ಎಂದರೆ ಅದು ನಿಜಕ್ಕೂ ಹೆಮ್ಮೆ. ರಿಷಬ್ ಶೆಟ್ಟಿಗೆ ಈ ಶೋಗೆ ಅತಿಥಿಯಾಗಿ ತೆರಳೋ ಅವಕಾಶ ದೊರೆತಿದ್ದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:28 am, Sun, 12 October 25