‘ಕಾಂತಾರ’ ಸಿನಿಮಾ (Kantara Movie) ಬಾಕ್ಸ್ ಆಫೀಸ್ನಲ್ಲಿ ಹೊಸ ಹೊಸ ದಾಖಲೆ ಬರೆದು ಮುಂದೆ ಸಾಗುತ್ತಿದೆ. ಇದರ ಜತೆಗೆ ಹಲವು ಚಿತ್ರಗಳು ಬರೆದ ದಾಖಲೆಗಳನ್ನು ಮುರಿಯುತ್ತಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಸಿನಿಪ್ರಿಯರು ತಲೆ ಬಾಗಿದ್ದಾರೆ. ವಿಜಯ್ ಕಿರಗಂದೂರು ಅವರ ‘ಹೊಂಬಾಳೆ ಫಿಲ್ಮ್ಸ್’ (Hombale Films) ನಿರ್ಮಾಣದ ‘ಕೆಜಿಎಫ್ 2’ ಮಾಡಿದ್ದ ದಾಖಲೆಯನ್ನು ‘ಕಾಂತಾರ’ ಸಿನಿಮಾ ಮುರಿದಿದೆ. ಈ ಮೂಲಕ ಮತ್ತಷ್ಟು ರೆಕಾರ್ಡ್ ಸೃಷ್ಟಿ ಮಾಡುವ ಸಾಧ್ಯತೆ ಗೋಚರವಾಗಿದೆ.
ಸೆಪ್ಟೆಂಬರ್ 30ರಂದು ‘ಕಾಂತಾರ’ ಸಿನಿಮಾ ರಿಲೀಸ್ ಆಯಿತು. ಇಂದಿಗೆ (ಅಕ್ಟೋಬರ್ 24) ಈ ಚಿತ್ರ ರಿಲೀಸ್ ಆಗಿ 25 ದಿನ ಕಳೆದಿದೆ. ‘ಕಾಂತಾರ’ ಚಿತ್ರ ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಈಗ ಈ ಚಿತ್ರ ಕರ್ನಾಟಕದಲ್ಲಿ ಹೊಸ ದಾಖಲೆ ಬರೆದಿರುವ ಬಗ್ಗೆ ‘ಹೊಂಬಾಳೆ ಫಿಲ್ಮ್ಸ್’ ಮಾಹಿತಿ ಹಂಚಿಕೊಂಡಿದೆ.
ಹೊಂಬಾಳೆ ಬ್ಯಾನರ್ನಲ್ಲಿ ಈವರೆಗೆ ನಿರ್ಮಾಣವಾದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ‘ಕಾಂತಾರ’ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ‘ಕಾಂತಾರ’ ಚಿತ್ರವನ್ನು ವೀಕ್ಷಿಸಿದ್ದಾರೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ.
‘ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 2017ರಲ್ಲಿ ‘ರಾಜಕುಮಾರ’ ಸಿನಿಮಾ ರಿಲೀಸ್ ಮಾಡಿತು. ಈ ಚಿತ್ರಕ್ಕೆ ಪುನೀತ್ ಹೀರೋ ಆಗಿದ್ದರು ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಕರ್ನಾಟಕದಲ್ಲಿ 65 ಲಕ್ಷ ಜನರು ವೀಕ್ಷಿಸಿದ್ದರು.
ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..!
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ..
ಧನ್ಯವಾದ ಕರ್ನಾಟಕ..? #Kantara #DivineBlockbusterKantara pic.twitter.com/i1yr4lSazG— Hombale Films (@hombalefilms) October 24, 2022
2018ರಲ್ಲಿ ರಿಲೀಸ್ ಆದ ಹೊಂಬಾಳೆ ಫಿಲ್ಮ್ಸ್ನ ‘ಕೆಜಿಎಫ್ 1’ ಹಲವು ದಾಖಲೆ ಬರೆದಿತ್ತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಕರ್ನಾಟಕದಲ್ಲಿ 75 ಲಕ್ಷ ಜನರು ವೀಕ್ಷಿಸಿದ್ದರು. 2022ರಲ್ಲಿ ಬಿಡುಗಡೆಯಾದ ‘ಕೆಜಿಎಫ್ 2’ ದೇಶ-ವಿದೇಶಗಳಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಯಶ್ ಅಭಿನಯದ ಈ ಚಿತ್ರ ಬಾಲಿವುಡ್ನಲ್ಲಿ ಮಾಡಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಕರ್ನಾಟಕದಲ್ಲಿ ಈ ಚಿತ್ರವನ್ನು 72 ಲಕ್ಷ ಮಂದಿ ವೀಕ್ಷಿಸಿದ್ದರು. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣಗೊಂಡು ರಿಲೀಸ್ ಆದ ಚಿತ್ರಗಳು ಮಾಡಿದ ಎಲ್ಲಾ ದಾಖಲೆಗಳನ್ನು ‘ಕಾಂತಾರ’ ಉಡೀಸ್ ಮಾಡಿದೆ.
Published On - 4:16 pm, Mon, 24 October 22