ಹೊಸ ಪರಿಕಲ್ಪನೆಯ ಟೂರ್ನಿವಲ್​ಗೆ ಸಾಥ್​ ನೀಡಿದ ಕನ್ನಡದ ಸ್ಟಾರ್​ ಕಲಾವಿದರು

‘ಸಿನಿಮಾ, ಸಂಸ್ಕೃತಿ ಮತ್ತು ಕ್ರೀಡೆ ಎಂದರೆ ಎಲ್ಲರಿಗೂ ಇಷ್ಟ. ಟೂರ್ನಿವಲ್​ನಲ್ಲಿ ಈ ಮೂರೂ ಇದೆ’ ಎಂದಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.

ಹೊಸ ಪರಿಕಲ್ಪನೆಯ ಟೂರ್ನಿವಲ್​ಗೆ ಸಾಥ್​ ನೀಡಿದ ಕನ್ನಡದ ಸ್ಟಾರ್​ ಕಲಾವಿದರು
ರಾಗಿಣಿ ದ್ವಿವೇದಿ, ಪ್ರಿಯಾಂಕಾ ಉಪೇಂದ್ರ, ಅಜಯ್​ ರಾವ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 25, 2022 | 7:45 AM

ಕಲಾವಿದರಿಗೆ ಮತ್ತು ಕಲೆಗೆ ಯಾವುದೇ ಗಡಿ ಇಲ್ಲ. ಅದೇ ಪರಿಕಲ್ಪನೆಯಲ್ಲಿ ಟೂರ್ನಿವಲ್​ ಆಯೋಜನೆ ಮಾಡಲಾಗಿದೆ. ಟೂರ್ನಮೆಂಟ್​ ಮತ್ತು ಕಾರ್ನಿವಲ್​ ಎಂಬ ಎರಡು ಪದಗಳ ಮಿಲನದಿಂದ ‘ಟೂರ್ನಿವಲ್​’ (Tournival) ಆಗಿದೆ. ಇದರಲ್ಲಿ ಮೂರು ದೇಶಗಳ ಸೆಲೆಬ್ರಿಟಿಗಳು ಪರಸ್ಪರ ಸಾಂಸ್ಕೃತಿಕ ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತಾರೆ ಎಂಬುದು ವಿಶೇಷ. ANYELP ಎಂಟರ್​ಟೇನ್ಮೆಂಟ್ ಮತ್ತು ವೈಟ್​ ಲೋಟಸ್​ ಎಂಟರ್​ಟೇನ್ಮೆಂಟ್​ ಸಂಸ್ಥೆಗಳು ಜೊತೆಯಾಗಿ ಇದನ್ನು ಆಯೋಜಿಸಿವೆ. ಇತ್ತೀಚೆಗೆ ಇದರ ಉದ್ಘಾಟನೆ ನಡೆಯಿತು. ಈ ವೇಳೆ ಪ್ರಿಯಾಂಕಾ ಉಪೇಂದ್ರ (Priyanka Upendra) ರಾಗಿಣಿ ದ್ವಿವೇದಿ, ಅಜಯ್​ ರಾವ್​ (Ajay Rao), ನಾಗತಿಹಳ್ಳಿ ಚಂದ್ರಶೇಖರ್​ ಮುಂತಾದ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ‘ಟೂರ್ನಿವಲ್ ಎಂದರೆ ಸೌತ್ ಏಷ್ಯಾ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯ. ಬೇರೆಬೇರೆ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್​ ದೇಶಗಳಲ್ಲಿ ನಡೆಸುವ ಉದ್ದೇಶವಿದೆ’ ಎಂದಿದ್ದಾರೆ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಪೂಜಾಶ್ರೀ.

ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯಾನ ಗ್ಯಾಮೇಜ್, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ. ಹರೀಶ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಟೂರ್ನಿವಲ್​ ಪ್ರಯುಕ್ತ ಮಾಲ್ಡೀವ್ಸ್​ನಲ್ಲಿ ಕನ್ನಡ ಸಿನಿಮಾಗಳು ರಿಲೀಸ್​ ಆಗುತ್ತವೆ. ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್​ನ ಸೆಲೆಬ್ರಿಟಿಗಳ ನಡುವೆ ಫುಟ್​ಬಾಲ್​ ಪಂದ್ಯ ಸಹ ನಡೆಯುತ್ತದೆ.

‘ಈ ಕಾನ್ಸೆಪ್ಟ್​ ಚೆನ್ನಾಗಿದೆ. ಭಾರತ ನಮ್ಮ ಸಹೋದರ ರಾಷ್ಟ್ರ. ಸದಾ ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ಭಾರತ ಮತ್ತು ಮಾಲ್ಡೀವ್ಸ್​ ನಡುವೆ ಬಹುಕಾಲದ ಸ್ನೇಹ ಇದೆ. ಈ ದೇಶದಿಂದ ಮಾಲ್ಡೀವ್ಸ್​ಗೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಾರೆ. ಅದಕ್ಕಾಗಿ ಭಾರತ ಸರ್ಕಾರಕ್ಕೆ ಮತ್ತು ಸಿನಿಮಾ ಸೆಲೆಬ್ರಿಟಿಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ’ ಎಂದಿದ್ದಾರೆ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್.

ಇದನ್ನೂ ಓದಿ
Image
ಮೂರು ದಿನಕ್ಕೆ ಬಂಗಾರದ ಬೆಳೆ ತೆಗೆದ ‘ಹೆಡ್​ ಬುಷ್​’ ಸಿನಿಮಾ; ಇಲ್ಲಿದೆ ಕಲೆಕ್ಷನ್ ವಿವರ
Image
ಕರ್ನಾಟಕದಲ್ಲಿ ‘ಕೆಜಿಎಫ್ 2’ ಮಾಡಿದ್ದ ದಾಖಲೆಯನ್ನು ಮುರಿದ ‘ಕಾಂತಾರ’; ನಿಲ್ಲುತ್ತಿಲ್ಲ ಅಬ್ಬರ
Image
‘ಗಂಧದ ಗುಡಿ’ಗೆ ಪ್ರೀ-ಬುಕಿಂಗ್ ಆರಂಭ; ಹಬ್ಬಕ್ಕೆ ಸಾಕ್ಷಿ ಆಗಲಿದೆ ಅಕ್ಟೋಬರ್ 28
Image
Akshay Kumar: ‘ರಾಮ್​ ಸೇತು’ ಚಿತ್ರದಿಂದಲೂ ಅಕ್ಷಯ್​ ಕುಮಾರ್​​ಗೆ ಗೆಲುವು ಸಿಗೋದು ಡೌಟು?

‘ಕಳೆದ ಎರಡು ವರ್ಷಗಳಿಂದ ಪ್ರವಾಸೋದ್ಯಮಕ್ಕೆ ತೊಂದರೆ ಆಗಿತ್ತು. ಶ್ರೀಲಂಕಾದಲ್ಲಿ ಅಹಿತಕರ ಘಟನೆಗಳು ನಡೆದವು. ಕೊವಿಡ್​ನಿಂದ ಸಮಸ್ಯೆ ಎದುರಿಸುವಂತಾಯಿತು. ನಮಗೆ ಪ್ರವಾಸೋದ್ಯಮ ತುಂಬ ಮುಖ್ಯ. ಈಗ ನಮ್ಮ ದೇಶದ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತು. ಟೂರ್ನಿವಲ್​ಗೆ ಬೆಂಬಲ ನೀಡಲು ನಾನಿಲ್ಲಿಗೆ ಬಂದಿದ್ದೇನೆ. ಟೂರ್ನಿವಲ್​ನಿಂದ ನಮ್ಮ ದೇಶಕ್ಕೆ ಸಹಾಯ ಆಗಲಿದೆ. ನಮ್ಮ ಆರ್ಥಿಕತೆ ದಿವಾಳಿ ಆಗಿರಬಹುದು. ಆದರೆ ನಮ್ಮ ನೆಲೆದ ಸೌಂದರ್ಯ ದಿವಾಳಿ ಆಗಿಲ್ಲ. ನಮ್ಮ ಆಥಿತ್ಯದ ಗುಣಮಟ್ಟ ಕಡಿಮೆ ಆಗಿಲ್ಲ’ ಎಂಬುದು ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯಾನ ಗ್ಯಾಮೇಜ್ ಅವರ ಮಾತುಗಳು.

‘ಪೂಜಾ, ಝಾಕೀರ್ ಹುಸೇನ್​​ ಮತ್ತು ರುದ್ರ ಅವರು ಈ ರೀತಿ ಕಾನ್ಸೆಪ್ಟ್​ ಪರಿಚಯಿಸುತ್ತಿರುವುದಕ್ಕೆ ಅಭಿನಂದನೆಗಳು. ನನ್ನ ಸಿನಿಮಾ ಇದರಲ್ಲಿ ಪ್ರದರ್ಶನ ಆಗುತ್ತಿರುವುದಕ್ಕೆ ಖುಷಿ ಇದೆ. ಸಿನಿಮಾ, ಸಂಸ್ಕೃತಿ ಮತ್ತು ಕ್ರೀಡೆ ಎಲ್ಲರಿಗೂ ಇಷ್ಟ. ಟೂರ್ನಿವಲ್​ನಲ್ಲಿ ಈ ಮೂರೂ ಇದೆ’ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ