‘ಯಶಸ್ಸಿಗಾಗಿ ನಾನು ಕೆಲಸ ಮಾಡಿಲ್ಲ’; ಚರ್ಚೆ ಆಗುತ್ತಿರುವ ವಿಚಾರಕ್ಕೆ ನೇರವಾಗಿ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ

‘ಕಾಂತಾರ’ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಆಸ್ಕರ್ಗೆ ರೇಸ್​ಗೆ ಹೋಗಬೇಕು ಎಂದು ಕೆಲವರು ಹಕ್ಕೊತ್ತಾಯ ಮಾಡಿದ್ದರು. ಈ ಕುರಿತು ರಿಷಬ್ ಪ್ರತಿಕ್ರಿಯೆ ನೀಡಿದ್ದಾರೆ.

‘ಯಶಸ್ಸಿಗಾಗಿ ನಾನು ಕೆಲಸ ಮಾಡಿಲ್ಲ’; ಚರ್ಚೆ ಆಗುತ್ತಿರುವ ವಿಚಾರಕ್ಕೆ ನೇರವಾಗಿ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ
ರಿಷಬ್
Edited By:

Updated on: Oct 31, 2022 | 11:18 AM

‘ಕಾಂತಾರ’ ಸಿನಿಮಾ (Kantara Movie) ರಿಲೀಸ್ ಆಗಿ ತಿಂಗಳ ಮೇಲಾಗಿದೆ. ಆದಾಗ್ಯೂ ಚಿತ್ರದ ಅಬ್ಬರ ಕಡಿಮೆ ಆಗಿಲ್ಲ. ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ರಿಷಬ್ ಶೆಟ್ಟಿ ಅವರು ನಾನಾ ನಗರಗಳಿಗೆ ತೆರಳಿ ಸಕ್ಸಸ್​​ಮೀಟ್​ನಲ್ಲಿ ಭಾಗಿ ಆಗುತ್ತಿದ್ದಾರೆ. ಅವರನ್ನು ಹುಡುಕಿಕೊಂಡು ಹಲವು ಆಫರ್​ಗಳು ಬರುತ್ತಿವೆ. ದೇಶಾದ್ಯಂತ ರಿಷಬ್ ಪರಿಚಯ ಆಗಿದೆ. ಈ ಮಧ್ಯೆ ರಿಷಬ್ (Rishab Shetty) ಅವರು ‘ಕಾಂತಾರ’ ಚಿತ್ರಕ್ಕೆ ಆಸ್ಕರ್ ಸಿಗಬೇಕು ಎಂದು ನಡೆಯುತ್ತಿದ್ದ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲಿ ಅವರು ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ.

‘ಕಾಂತಾರ’ ಚಿತ್ರ ಮಾಡಿದ ಸಾಧನೆ ತುಂಬಾ ದೊಡ್ಡದು. ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.ಭೂತ ಕೋಲ ಹಾಗೂ ಕಾಡು, ಕಾಡಿನ ಪ್ರಾಣಿಗಳನ್ನು ಉಳಿಸಬೇಕು ಎಂಬ ಸಂದೇಶ ಈ ಚಿತ್ರದಲ್ಲಿದೆ. ‘ಕಾಂತಾರ’ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಆಸ್ಕರ್ಗೆ ರೇಸ್​ಗೆ ಹೋಗಬೇಕು ಎಂದು ಕೆಲವರು ಹಕ್ಕೊತ್ತಾಯ ಮಾಡಿದ್ದರು. ಈ ಕುರಿತು ರಿಷಬ್ ಪ್ರತಿಕ್ರಿಯೆ ನೀಡಿದ್ದಾರೆ.

ಜನರು ಈ ಸಿನಿಮಾ ಬಗ್ಗೆ ತೋರುತ್ತಿರುವ ಪ್ರೀತಿಗೆ ರಿಷಬ್​ಗೆ ಖುಷಿ ಇದೆ. ಇಟೈಮ್ಸ್​​ ಜೊತೆ ಮಾತನಾಡಿರುವ ರಿಷಬ್, ‘ನಾನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಬಗ್ಗೆ ಸುಮಾರು 25,000 ಟ್ವೀಟ್‌ಗಳಿವೆ. ಇದು ನನಗೆ ಸಂತೋಷವನ್ನು ನೀಡುತ್ತದೆ. ಆದರೆ ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಯಶಸ್ಸಿಗಾಗಿ ನಾನು ಕೆಲಸ ಮಾಡಿಲ್ಲ. ನಾನು ಕೆಲಸಕ್ಕಾಗಿ ಕೆಲಸ ಮಾಡಿದೆ ಅಷ್ಟೇ’ ಎಂದಿದ್ದಾರೆ.

ಇದನ್ನೂ ಓದಿ
Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?

ಇದನ್ನೂ ಓದಿ: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

‘ಕಾಂತಾರ’ ಚಿತ್ರದಲ್ಲಿ ರಿಷಬ್ ನಟಿಸುವುದರ ಜತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಈ ಚಿತ್ರದಿಂದ ನಿರ್ಮಾಣ ಸಂಸ್ಥೆಗೆ ಅಪಾರ ಲಾಭ ಆಗಿದೆ. ‘ಕಾಂತಾರ’ವನ್ನು ಅನೇಕರು ಎರಡು-ಮೂರು ಬಾರಿ ವೀಕ್ಷಣೆ ಮಾಡಿದ್ದಾರೆ.